twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

    By Bharath Kumar
    |

    Recommended Video

    ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ | Filmibeat Kannada

    ಎವರ್ ಗ್ರೀನ್ ನಟಿ ಶ್ರೀದೇವಿ ಫೆಬ್ರವರಿ 24 ರಂದು ದುಬೈನಲ್ಲಿ ಸಾವಿಗೀಡಾದರು. ಆದ್ರೆ, ಅವರ ಅಂತಿಮ ಸಂಸ್ಕಾರವನ್ನ ಇಂದು ಮಾಡಲಾಗಿದೆ. ಅದಕ್ಕೆ ಕಾರಣ ದುಬೈನಲ್ಲಿ ಎದುರಾದ ಸಮಸ್ಯೆಗಳು.

    ದುಬೈ ಹೋಟೆಲ್ ನ ಬಾತ್ ಟಬ್ ನಲ್ಲಿ ಶ್ರೀದೇವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಶಂಕೆಯಲ್ಲಿ ದುಬೈ ಪೊಲೀಸರು ತನಿಖೆ ಕೈಗೊಂಡರು. ಇದರ ಮಧ್ಯೆ ಶ್ರೀದೇವಿ ಅವರ ಪಾರ್ಥಿವ ಶರೀರ ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಭಾರತೀಯರು ಕಾದು ಕುಂತಿದ್ದರು. ಆದ್ರೆ, ದಿನಗಳು ಕಳೆಯಿತಾದರೂ ಪಾರ್ಥಿವ ಶರೀರ ಮಾತ್ರ ಬರಲಿಲ್ಲ.

    ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

    ಆಗ ಬೋನಿ ಕಪೂರ್ ಗೆ ನೆರವಾಗಿದ್ದು ಭಾರತ ಮೂಲದ ವ್ಯಕ್ತಿ. ದುಬೈ ಸರ್ಕಾರದ ನಿಯಮಗಳನ್ನ ಪೂರ್ಣಗೊಳಿಸಲು ಕಪೂರ್ ಕುಟುಂಬಕ್ಕೆ ನೆರವಾಗಿ, ಶ್ರೀದೇವಿ ಪಾರ್ಥಿವ ಶರೀರವನ್ನ ತಾಯ್ನಾಡಿಗೆ ತರಲು ಸಹಾಯ ಮಾಡಿದ್ದಾರೆ. ಅಷ್ಟಕ್ಕೂ ದುಬೈನಲ್ಲಿ ಎದುರಾದ ಸಂಕಷ್ಟವೇನು? ಕಪೂರ್ ಕುಟುಂಬಕ್ಕೆ ಸಹಾಯ ಮಾಡಿದ ಆ ಭಾರತೀಯ ವ್ಯಕ್ತಿ ಯಾರು.? ಮುಂದೆ ಓದಿ.....

    ಕೋಟಿ ಕೋಟಿ ಇದ್ದರೂ ಶರೀರ ತರಲು ಸಾಧ್ಯವಾಗಲಿಲ್ಲ

    ಕೋಟಿ ಕೋಟಿ ಇದ್ದರೂ ಶರೀರ ತರಲು ಸಾಧ್ಯವಾಗಲಿಲ್ಲ

    ಕಪೂರ್ ಕುಟುಂಬ ಬಾಲಿವುಡ್ ನ ಶ್ರೀಮಂತ ಮನೆತನ. ಕೋಟಿ ಕೋಟಿ ದುಡ್ಡು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹೊಂದಿದ್ದಾರೆ. ಆದ್ರೆ, ದುಬೈನಲ್ಲಿ ಸಾವಿಗೀಡಾಗಿದ್ದ ಶ್ರೀದೇವಿಯ ಪಾರ್ಥಿವ ಶರೀರವನ್ನ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಕಪೂರ್ ಕುಟುಂಬಕ್ಕೆ ನೆರವಾಗಿದ್ದು ಕೇರಳ ಮೂಲದ ವ್ಯಕ್ತಿ.

    'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

    ಅಶ್ರಫ್ ಶೆರ್ರಿ ಥಮರಸ್ಸರಿ

    ಅಶ್ರಫ್ ಶೆರ್ರಿ ಥಮರಸ್ಸರಿ

    44 ವರ್ಷದ ಅಶ್ರಫ್ ಶೆರ್ರಿ ಥಮರಸ್ಸರಿ ಎಂಬುವವರು ದುಬೈ ಸರ್ಕಾರದ ನಿಯಮಗಳ ಅನುಗುಣವಾಗಿ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಿ ಶ್ರೀದೇವಿ ಪಾರ್ಥೀವ ಶರೀರವನ್ನ ಭಾರತಕ್ಕೆ ಕೊಂಡೊಯ್ಯಲು ನೆರವಾದರು.

    ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

    ಅಶ್ರಫ್ ವೃತ್ತಿಯೇ ಇದು

    ಅಶ್ರಫ್ ವೃತ್ತಿಯೇ ಇದು

    ಭಾರತದ ಕೇರಳ ಮೂಲದವರಾದ ಅಶ್ರಫ್ ಶೆರ್ರಿ ಥಮರಸ್ಸರಿ ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದು, ಕ್ರಮೇಣ ದುಬೈನಲ್ಲಿ ವಿದೇಶಿ ಪ್ರಜೆ ಮೃತಪಟ್ಟರೆ, ಮೃತದೇಹವನ್ನ ಸಂಬಂಧಪಟ್ಟ ದೇಶಕ್ಕೆ ರವಾನೆ ಆಗುವಂತೆ ನೋಡಿಕೊಳ್ಳಲು ಹಾಗೂ ಮೃತ ಸಂಬಂಧಿಕರಿಗೆ ಸಹಾಯ ಹಸ್ತ ಚಾಚಲು ಆರಂಭಿಸಿದರು. ದುಬೈ ಸರ್ಕಾರದ ಅನುಸಾರ ಪ್ರಮಾಣ ಪತ್ರಗಳನ್ನು ಹಾಗೂ ದಾಖಲೆಗಳನ್ನ ಸಲ್ಲಿಕೆ ಮಾಡಿ ಇದುವರೆಗೂ ಸುಮಾರು 30 ದೇಶಗಳ 4700ಕ್ಕೂ ಹೆಚ್ಚು ಮೃತದೇಹಗಳನ್ನ ರವಾನಿಸಿದ್ದಾರೆ.

    ಎಲ್ಲರಿಗೂ ಒಂದೇ ಕಾನೂನು

    ಎಲ್ಲರಿಗೂ ಒಂದೇ ಕಾನೂನು

    ''ನೀವಾಗಲಿ, ನಾನಾಗಲಿ ಅಥವಾ ಯಾರಾದರೂ ಆಗಲಿ ಎಲ್ಲರಿಗೂ ಒಂದೇ ಕಾನೂನು. ಯಾರಾದರೂ ಕೋಣೆಯಲ್ಲಿ ನಿಧನರಾದರೇ, ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗುತ್ತೆ. ತದ ನಂತರ ಪೊಲೀಸ್ ತಪಾಸಣೆ ಮಾಡಲಾಗುತ್ತೆ. ದುಬೈ, ಶಾರ್ಜಾ ಎಲ್ಲಿಯಾದರೂ ಇದೇ ಪ್ರಕ್ರಿಯೆ. ಈ ವಿಚಾರದಲ್ಲಿ ಶ್ರೀಮಂತ- ಬಡವ ಎನ್ನುವ ತಾರತಮ್ಯವಿಲ್ಲ'' ಎಂದು ಅಶ್ರಫ್ ಶೆರ್ರಿ ಥಮರಸ್ಸರಿ ತಿಳಿಸಿದ್ದಾರೆ.

    'ಅತಿಲೋಕ ಸುಂದರಿ'ಗೆ ಅಂತಿಮ ನಮನ ಸಲ್ಲಿಸಿದ 'ಜಗದೇಕ ವೀರ''ಅತಿಲೋಕ ಸುಂದರಿ'ಗೆ ಅಂತಿಮ ನಮನ ಸಲ್ಲಿಸಿದ 'ಜಗದೇಕ ವೀರ'

    ವೈರಲ್ ವಿಡಿಯೋ: ಕೊನೆಯ ಜಾಹೀರಾತಿನಲ್ಲಿ ಮಿರ ಮಿರ ಮಿಂಚಿದ್ದ 'ಚಾಂದಿನಿ'ವೈರಲ್ ವಿಡಿಯೋ: ಕೊನೆಯ ಜಾಹೀರಾತಿನಲ್ಲಿ ಮಿರ ಮಿರ ಮಿಂಚಿದ್ದ 'ಚಾಂದಿನಿ'

    English summary
    Listed only as “ASHRAF” on the official paperwork in Dubai is Ashraf “Sherry” Thamarassery, a 44-year-old Indian from Kerala who has become a ferryman of sorts for those who die here in the United Arab Emirates.
    Wednesday, February 28, 2018, 20:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X