ನಟ ಜಗ್ಗೇಶ್ ಅವರ ಮೊಬೈಲ್ ರಿಂಗ್‌ಟೋನ್ ಯಾವುದು ಗೊತ್ತೆ?
ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯ. ಅವರು ಅಭಿಮಾನಿಗಳೊಡನೆ ಅಂತರ ಕಾಯ್ದುಕೊಳ್ಳುವುದಿಲ್ಲ. ತಮ್ಮ ಬಗ್ಗೆ ಸಾಕಷ್ಟು ವಿಷಯಗಳನ್ನು ಜಗ್ಗೇಶ್ ಅವರು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
Recommended Video
ಅಭಿಮಾನಿಗಳೂ ಸಹ ಜಗ್ಗೇಶ್ ಅವರ ಬಳಿ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾರೆ. ತಮ್ಮ ಸಮಸ್ಯೆಗಳನ್ನು ಜಗ್ಗೇಶ್ ಅವರ ಮುಂದೆ ಇಟ್ಟು ಸ್ಪೂರ್ತಿಯ ಮಾತುಗಳನ್ನು ತಿರುಗಿ ಪಡೆಯುತ್ತಾರೆ.
ತಮ್ಮ ಬಗ್ಗೆ, ಕುಟುಂಬದ ಬಗ್ಗೆ, ಸಿನಿಮಾ ಗೆಳೆಯರ ಬಗ್ಗೆ ಸಾಕಷ್ಟು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಜಗ್ಗೇಶ್ ಅವರು, ತಮ್ಮ ಮೊಬೈಲ್ ರಿಂಗ್‌ಟೋನ್ ಯಾವುದು ಎಂಬುದನ್ನು ಸಹ ಹೇಳಿದ್ದಾರೆ.

ಜಗ್ಗೇಶ್ ಮೊಬೈಲ್ ರಿಂಗ್‌ಟೋನ್ ಇದು
ಜಗ್ಗೇಶ್ ಅವರ ಮೊಬೈಲ್ ರಿಂಗ್‌ಟೋನ್ 'ನಮಸ್ತೆ ಸದಾ ವತ್ಸಲೇ ಮಾತೃಭೂಮೆ'. ಹೌದು ಇದೇ ಗೀತೆ ಜಗ್ಗೇಶ್ ಅವರ ಮೊಬೈಲ್ ರಿಂಗ್‌ಟೋನ್ ಅಂತೆ. ಈ ಬಗ್ಗೆ ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿ ಪ್ರಮುಖ ಮುಖಂಡ ಜಗ್ಗೇಶ್
ಬಿಜೆಪಿ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿರುವ ಜಗ್ಗೇಶ್ ಅವರು ಆರ್‌ಎಸ್‌ಎಸ್‌ಗೂ ಹತ್ತಿರದವರು. ಆರ್‌ಎಸ್‌ಎಸ್ ನ ಧ್ಯೇಯ ಗೀತೆಯಾಗಿರುವ 'ನಮಸ್ತೆ ಸದಾ ವತ್ಸಲೆ ಮಾತೃಭೂಮಿ' ಅನ್ನೇ ತಮ್ಮ ಮೊಬೈಲ್‌ಗೆ ರಿಂಗ್ ಟೋನ್ ಮಾಡಿಕೊಂಡಿದ್ದಾರೆ.

ನಿಷ್ಕಾಮ ಕರ್ಮಯೋಗ ಮಾಡುತ್ತಿರುವ ಜಗ್ಗೇಶ್
ಆರ್‌ಎಸ್‌ಎಸ್ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಜಗ್ಗೇಶ್ 'ತಾಯಿಯಂತೆ ನಿಷ್ಕಾಮ ಕರ್ಮಯೋಗ ಮಾಡುವ ಸಂಘ ಹಾಗು ನಾನು ಅದರ ಅಂಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ. ಸತ್ಯವಂತ ಪಾಂಡವರನ್ನು ಕೌರವರು ಕಡೆವರೆಗೂ ಒಪ್ಪಲಿಲ್ಲ, ಕಾರಣ ಸತ್ಯವನ್ನ ಅಸತ್ಯ ಸಹಿಸೋಲ್ಲ, ಬೆಳಕನ್ನ ಕತ್ತಲೆ ಸಹಿಸುವುದಿಲ್ಲ. ಆದರೆ ಸತ್ಯ ಬೆಳಕು ತಡೆದುನಿಲ್ಲಿಸಲು ಯಾರಿಂದ ಸಾಧ್ಯವಿಲ್ಲಾ, ನಮಸ್ತೆ ಸದಾವತ್ಸಲೆ ಮಾತೃಭೂಮಿ' ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಅಭಿಮಾನಿ ಜಗ್ಗೇಶ್
ಮೋದಿ ಅವರ ಅಪ್ಪಟ ಅಭಿಮಾನಿ ಆಗಿರುವ ಜಗ್ಗೇಶ್ ಅವರು, ಪ್ರಧಾನಿ ಮೋದಿ ಅವರು ಚೀನಾ-ಭಾರತ ಗಡಿಗೆ ನಿನ್ನೆ ಭೇಟಿ ಕೊಟ್ಟಿದ್ದನ್ನು ಹಾಗೂ ಚೀನಾ ಸೈನಿಕರಿಗೆ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಸೈನಿಕರನ್ನು ಭೇಟಿ ಆಗಿದ್ದನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











