For Quick Alerts
  ALLOW NOTIFICATIONS  
  For Daily Alerts

  ಈ ವಾರ ಕನ್ನಡದಲ್ಲಿ ಒಟ್ಟು 11 ಚಿತ್ರಗಳು ಬಿಡುಗಡೆ

  |

  ಒಂದು ವಾರದಲ್ಲಿ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುವುದು ಸಹಜ. ಈ ನಾಲ್ಕೈದು ಚಿತ್ರಗಳನ್ನ ನೋಡಲು ಪ್ರೇಕ್ಷಕರು ಎರಡ್ಮೂರು ವಾರ ಸಮಯ ತೆಗೆದುಕೊಳ್ಳುತ್ತಾರೆ. ಅಷ್ಟೊತ್ತಿಗೆ ಆ ಚಿತ್ರವೂ ಥಿಯೇಟರ್ ನಿಂದ ಎತ್ತಂಗಡಿ ಆಗುತ್ತೆ.

  ಇಂತಹ ಕ್ಲಿಷ್ಟಕರ ಸನ್ನಿವೇಶ ಇದ್ದರೂ ಸಿನಿಮಾ ಬಿಡುಗಡೆ ಸಂಖ್ಯೆ ಕಮ್ಮಿಯಾಗುತ್ತಿಲ್ಲ. ಈ ವಾರ ಕನ್ನಡದಲ್ಲಿ ಬರೋಬ್ಬರಿ 11 ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಬರಿ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ಈ ವಾರ ಇಂತಹ ಸ್ಥಿತಿಯೇ ಇದೆ.

  ಹಾಗಿದ್ರೆ, ಈ ವಾರ ಚಿತ್ರಮಂದಿರಕ್ಕೆ ಬರುತ್ತಿರುವ ಆ ಹನ್ನೊಂದು ಕನ್ನಡ ಸಿನಿಮಾಗಳು ಯಾವುದು? ಮುಂದೆ ಓದಿ....

  ಜಂಟಲ್ ಮನ್

  ಜಂಟಲ್ ಮನ್

  ಪ್ರಜ್ವಲ್ ದೇವರಾಜ್ ಮತ್ತು ನಿಶ್ವಿಕಾ ನಾಯ್ಡು ನಟನೆಯ ಜಂಟಲ್ ಮನ್ ಸಿನಿಮಾ ಈ ವಾರದ ನಿರೀಕ್ಷೆ ಚಿತ್ರ. 18 ಗಂಟೆ ನಿದ್ದೆ 6 ಗಂಟೆ ಎಚ್ಚರವಾಗಿರುವ ವ್ಯಕ್ತಿ ಕಥೆ ಎನ್ನುವುದಕ್ಕೆ ಭಾರಿ ಕುತೂಹಲ ಮೂಡಿಸಿದೆ. ಹಂಪಿ ಜಡೇಶ್ ಕುಮಾರ್ ನಿರ್ದೇಶನ, ಗುರುದೇಶಪಾಂಡೆ ನಿರ್ಮಾಣ ಹೊಂದಿದೆ.

  ಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆ

  ಮಾಲ್ಗುಡಿ ಡೇಸ್

  ಮಾಲ್ಗುಡಿ ಡೇಸ್

  ವಿಜಯ್ ರಾಘವೇಂದ್ರ ವಿಶೇಷ ಪಾತ್ರ ನಿರ್ವಹಿಸಿರುವ ಚಿತ್ರ ಮಾಲ್ಗುಡಿ ಡೇಸ್. ಶೀರ್ಷಿಕೆಯಿಂದಲೇ ಭಾರಿ ಗಮನ ಸೆಳೆದಿರುವ ಈ ಚಿತ್ರದ ಮೇಲೆ ಒಂದು ಕಣ್ಣಿದೆ. ಕಿಶೋರ್ ಮೂಡಬಿದ್ರಿ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್, ಗ್ರೀಷ್ಮಾ, ಧನ್ ರಾಜ್ ನಟಿಸಿದ್ದಾರೆ. ಈ ಚಿತ್ರವೂ ಇದೇ ವಾರ ಬರ್ತಿದೆ.

  ಮತ್ತೊಮ್ಮೆ 'ಮಾಲ್ಗುಡಿ ಡೇಸ್': ಚಿತ್ರದ ಬಿಡುಗಡೆಯ ದಿನಾಂಕ ನಿಗದಿಮತ್ತೊಮ್ಮೆ 'ಮಾಲ್ಗುಡಿ ಡೇಸ್': ಚಿತ್ರದ ಬಿಡುಗಡೆಯ ದಿನಾಂಕ ನಿಗದಿ

  ಮತ್ತೆ ಉದ್ಭವ

  ಮತ್ತೆ ಉದ್ಭವ

  ಹಿರಿಯ ನಿರ್ದೇಶಕ ಕೊಡ್ಲು ರಾಮಕೃಷ್ಣ ನಿರ್ದೇಶನದ ಮತ್ತೆ ಉದ್ಭವ ಸಿನಿಮಾನೂ ಇದೇ ವಾರ ತೆರೆಗೆ ಬರ್ತಿದೆ. ಪ್ರಮೋದ್ ಈ ಚಿತ್ರದಲ್ಲಿ ನಾಯಕನಾಗಿದ್ದು, ಮಿಲನ ನಾಗರಾಜ್ ನಾಯಕಿಯಾಗಿ ನಟಿಸಿದ್ದಾರೆ. ಅನಂತ್ ನಾಗ್ ನಟಿಸಿದ್ದ ಉದ್ಭವ ಚಿತ್ರದ ಮುಂದುವರಿದ ಕಥೆ ಇದಾಗಿರುವುದು ವಿಶೇಷ.

  'ನನ್ನ ತಾಕತ್ ತೋರಿಸುವ ಚಿತ್ರವಿದು': ಮುಗ್ದ ಪ್ರಮೋದ್ ಈಗ ಖಡಕ್ ಹೀರೋ'ನನ್ನ ತಾಕತ್ ತೋರಿಸುವ ಚಿತ್ರವಿದು': ಮುಗ್ದ ಪ್ರಮೋದ್ ಈಗ ಖಡಕ್ ಹೀರೋ

  ಬಿಲ್ ಗೇಟ್ಸ್

  ಬಿಲ್ ಗೇಟ್ಸ್

  ಶಿಶಿರ್ ಮತ್ತು ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ತಯಾರಾಗಿರುವ ಬಿಲ್ ಗೇಟ್ಸ್ ಸಿನಿಮಾನೂ ಇದೇ ವಾರ ಚಿತ್ರಮಂದಿರಕ್ಕೆ ಬರ್ತಿದೆ. ಶ್ರೀನಿವಾಸ ಸಿ ಮಂಡ್ಯ ಈ ಚಿತ್ರ ನಿರ್ದೇಶನ ಮಾಡಿದ್ದು, ನೊಬಿನ್ ಪೌಲ್ ಸಂಗೀತ ನೀಡಿದ್ದಾರೆ. ಕುರಿ ಪ್ರತಾಪ್, ಗಿರಿ, ರೋಜಾ, ಅಕ್ಷರ ರೆಡ್ಡಿ ನಟಿಸಿದ್ದಾರೆ.

  ಜಿಲ್ಕ ಮತ್ತು ದಿಯಾ

  ಜಿಲ್ಕ ಮತ್ತು ದಿಯಾ

  ಕವೀಶ್ ಶೆಟ್ಟಿ, ಪ್ರಿಯಾ ಹೆಗ್ಡೆ, ಪ್ರತೀಕ್ ಶೆಟ್ಟಿ ನಟಿಸಿರುವ ಜಿಲ್ಕ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ನಾಯನ ಕವೀಶ್ ಶೆಟ್ಟಿ ಅವರೇ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪೃಥ್ವಿ ಅಂಬಾರ್, ಖುಷಿ, ದೀಕ್ಷಿತ್ ನಟನೆಯ ದಿಯಾ ಸಿನಿಮಾನೂ ಈ ವಾರ ಚಿತ್ರಮಂದಿರಕ್ಕೆ ಬರ್ತಿದೆ.

  ನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ' ಎನ್ನುತ್ತಾರೆ ಕವೀಶ್ ಶೆಟ್ಟಿನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ' ಎನ್ನುತ್ತಾರೆ ಕವೀಶ್ ಶೆಟ್ಟಿ

  3ರ್ಡ್ ಕ್ಲಾಸ್

  3ರ್ಡ್ ಕ್ಲಾಸ್

  ಜಗದೀಶ್, ರೂಪಿಕಾ, ದಿವ್ಯಾ ರಾವ್, ಅವಿನಾಶ್ ಮತ್ತು ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ '3ರ್ಡ್ ಕ್ಲಾಸ್' ಚಿತ್ರವೂ ಇದೇ ವಾರ ನಿಮ್ಮ ಮುಂದೆ ಬರಲಿದೆ. 7 ಹಿಲ್ಸ್ ಸ್ಟುಡಿಯೋ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಿದ್ದು, ಅಶೋಕ್ ದೇವ್ ನಿರ್ದೇಶಿಸಿದ್ದಾರೆ. ಜೆಸ್ಸಿ ಗಿಫ್ಟ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಬಿ ಕೆ ಶಾಮ್ ರಾಜ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

  ಫೆಬ್ರವರಿ 7ರಂದು '3ರ್ಡ್ ಕ್ಲಾಸ್' ಪ್ರೇಮಕಥೆ ಬಿಡುಗಡೆಫೆಬ್ರವರಿ 7ರಂದು '3ರ್ಡ್ ಕ್ಲಾಸ್' ಪ್ರೇಮಕಥೆ ಬಿಡುಗಡೆ

  ಉಳಿದ ನಾಲ್ಕು ಚಿತ್ರಗಳು

  ಉಳಿದ ನಾಲ್ಕು ಚಿತ್ರಗಳು

  ಇಷ್ಟು ಚಿತ್ರಗಳ ಜೊತೆ ಇನ್ನು ನಾಲ್ಕು ಚಿತ್ರಗಳು ಈ ವಾರ ಥಿಯೇಟರ್ ಅಂಗಳಕ್ಕೆ ಕಾಲಿಡುತ್ತಿದೆ. ಪುರ್ ಸೊತ್ ರಾಮ, ಡೆಡ್ಲಿ ಅಫೇರ್, ಅರಿಷಡ್ವರ್ಗ, ಓಜೋಸ್ ಎಂಬ ಹೊಸಬರ ಚಿತ್ರಗಳು ಈ ವಾರ ಪ್ರೇಕ್ಷಕರ ಮನ ಗೆಲ್ಲಲು ಪೈಪೋಟಿಗೆ ಬಿದ್ದು ಬರ್ತಿವೆ. ಒಟ್ಟಾರೆ, ಕನ್ನಡ, ತೆಲುಗು, ತಮಿಳು, ಹಿಂದಿ, ಬೆಂಗಾಳಿ, ಮರಾಠಿ ಚಿತ್ರಗಳು ಸೇರಿ ಒಟ್ಟು 32 ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿದೆ.

  ಮತ್ತೊಂದು ಚಿತ್ರಕ್ಕೆ ಹೀರೋ ಆದ 'ಕಾಮಿಡಿ ಕಿಲಾಡಿ' ಶಿವರಾಜ್ಮತ್ತೊಂದು ಚಿತ್ರಕ್ಕೆ ಹೀರೋ ಆದ 'ಕಾಮಿಡಿ ಕಿಲಾಡಿ' ಶಿವರಾಜ್

  English summary
  Prajwal Devaraj Gentleman, Vijay Raghavendra's Malgudi days and other 9 Kannada movies releasing this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X