ಈ ವಾರ 'ಭರಾಟೆ' ಜೊತೆ ಬರ್ತಿದೆ ಮತ್ತೆರಡು ಕನ್ನಡ ಸಿನಿಮಾ

Recommended Video

Sri Murali Will Expecting Huge Responds | FILMIBEAT KANNADA

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ ಭರಾಟೆ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಭರ್ಜರಿ ಸಿನಿಮಾ ಬಳಿಕ ಚೇತನ್ ಕುಮಾರ್ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಭರಾಟೆ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ.

ಸಾಯಿಕುಮಾರ್, ಅಯ್ಯಪ್ಪ ಹಾಗೂ ರವಿಶಂಕರ್ ಸಹೋದರರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸಿರುವುದು ವಿಶೇಷ. ಈ ವಾರ ಸ್ಯಾಂಡಲ್ ವುಡ್ ನಲ್ಲಿ ಭರಾಟೆ ಚಿತ್ರದ್ದೆ ಅಬ್ಬರ ಹೆಚ್ಚಿದ್ದು, ಈ ದೊಡ್ಡ ಚಿತ್ರದ ಜೊತೆಗೆ ಮತ್ತೆರಡು ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿಯಾಗುತ್ತಿದೆ.

This Week Release Kannada Movie

ಹೌದು, ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಸಿನಿಮಾನೂ ಇದೇ ವಾರ ತೆರೆಗೆ ಬರ್ತಿದೆ. ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರ ಮಗಳು ತೇಜು ಬೆಳವಾಡಿ ಗಂಟುಮೂಟೆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅಧಿಕೃತವಾಗಿ ಪ್ರವೇಶ ಮಾಡುತ್ತಿದ್ದಾರೆ. ಜೊತೆಗೆ ನಿಶ್ಚಿತಾ ಕರೋಡಿ, ಮೈನ್ಲಿ, ಭಾರ್ಗವ್ ರಾಜು, ಸೂರ್ಯ ವಸಿಷ್ಠ, ಶರತ್ ಗೌಡ, ಶ್ರೀರಂಗ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

This Week Release Kannada Movie

ಕೋಸ್ಟಲ್ ವುಡ್ ನಲ್ಲಿ ಚಾಲಿಲೂ ಪೋಲಿಲು ಎಂಬ ಸಿನಿಮಾ ಮಾಡಿದ್ದ ವೀರೇಂದ್ರ ಶೆಟ್ಟಿ ನಿರ್ದೇಶನದ 'ಸವರ್ಣ ದೀರ್ಘ ಸಂಧಿ' ಈ ಸಿನಿಮಾ ಕೂಡ ಇದೇ ವಾರ ಥಿಯೇಟರ್ ಗೆ ಲಗ್ಗೆಯಿಡುತ್ತಿದೆ. ಮನೋಮೂರ್ತಿ ಅವರ ಸಂಗೀತ ಹೊಂದಿರುವುದು ಈ ಚಿತ್ರದ ವಿಶೇಷ.

More from Filmibeat

English summary
Srimurali and Srileela starrer Bharaate movie releasing on this week. savarna deergha sandhi and gantumoote movie also releaseing this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X