ಈ ವಾರ ತೆರೆಗೆ ಬರಲಿದೆ ಐದು ಚಿತ್ರಗಳು
Recommended Video

ಇತ್ತಿಚಿನ ದಿನಗಳಲ್ಲಿ ವಾರಕ್ಕೆ ಏಳು ಎಂಟು ಕನ್ನಡ ಸಿನಿಮಾಗಳು ವಾರಕ್ಕೆ ಬಿಡುಗಡೆ ಆಗುತ್ತಿವೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ದೊಡ್ಡ ಸ್ಟಾರ್ ಸಿನಿಮಾಗಳು ತೆರೆಗೆ ಬರುತ್ತೆ ಎನ್ನುವ ಉದ್ದೇಶದಿಂದ ಹೊಸಬರ ಚಿತ್ರಗಳು ಸಣ್ಣ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿದೆ.
ಕಳೆದ ವಾರ ಆರು ಚಿತ್ರಗಳು ತೆರೆಕಂಡಿತ್ತು. ಅದೇ ರೀತಿ ಈ ವಾರ ಐದು ಚಿತ್ರಗಳು ತೆರೆಗೆ ಬರ್ತಿದೆ. ಬಿಗ್ ಬಾಸ್ ಅನುಪಮ ಹಾಗೂ ಜೆಕೆ ಅಭಿನಯದ 'ಆ ಕರಾಳ ರಾತ್ರಿ' ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು. ಸಿನಿಮಾವನ್ನು ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದಾರೆ.

ರಾಗಿಣಿ, ನಕ್ಷತ್ರ, ಮೇಘನಾರಾಜ್, ಸಂಯುಕ್ತ ಹೊರನಾಡು ಅಭಿನಯದ 'ಎಂಎಂಸಿಹೆಚ್' ಸಿನಿಮಾ ಕೂಡ ಇದೇ ವಾರ ತೆರೆಗೆ ಬರ್ತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಮುಸ್ಸಂಜೆ ಮಹೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

'ಬಾಂಬೆ ಮಿಠಾಯಿ' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಿರ್ದೇಶಕ ಚಂದ್ರ ಮೋಹನ್ ಆಕ್ಷನ್ ಕಟ್ ಹೇಳಿರುವ 'ಡಬಲ್ ಇಂಜಿನ್' ಸಿನಿಮಾ ಕೂಡ ಇದೇ ಶುಕ್ರವಾರ ರಿಲೀಸ್ ಆಗ್ತಿದೆ. ಇದರ ಜೊತೆಯಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸಹೋದರ ಸಂಬಂಧಿ ಪವನ್ ತೇಜ ಅಭಿನಯದ ಚೊಚ್ಚಲ ಸಿನಿಮಾ 'ಅಥರ್ವ' ಇದೇ ವಾರ ಬಿಡುಗಡೆ ಆಗುತ್ತಿದೆ. ಈ ಎಲ್ಲಾ ಚಿತ್ರಗಳ ಜೊತೆ ಹೊಸ ಪ್ರತಿಭೆಗಳು ಸೇರಿ ಮಾಡಿರುವ 'ಲವ್ ಯು ೨' ಚಿತ್ರ ಕೂಡ ಬಿಡುಗಡೆ ಆಗುತ್ತಿದೆ.


Click it and Unblock the Notifications











