twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಪುಷ್ಪೋತ್ಸವ: ಸಚಿವ ಮುನಿರತ್ನ

    |

    ಈ ಬಾರಿ ಲಾಲ್‌ಬಾಗ್‌ ಪುಷ್ಪೋತ್ಸವವನ್ನು ನಟ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಆಯೋಜಿಸಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಮುನಿರತ್ನ, ''ಆಗಸ್ಟ್ 05 ರಿಂದ ಆಗಸ್ಟ್ 15 ರ ವರೆಗೆ ಸ್ವಾತಂತ್ರ್ತೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಪುಷ್ಪೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಪುಷ್ಪೋತ್ಸವ ನಡೆಯಲಿದೆ'' ಎಂದಿದ್ದಾರೆ.

    ಚಿತ್ರಮಂದಿರ, ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಸಿಎಂ ಜಗನ್ ಯೋಜನೆಗೆ ಆರಂಭಿಕ ಹಿನ್ನಡೆ!ಚಿತ್ರಮಂದಿರ, ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಸಿಎಂ ಜಗನ್ ಯೋಜನೆಗೆ ಆರಂಭಿಕ ಹಿನ್ನಡೆ!

    ಆಗಸ್ಟ್ 05 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪುಷ್ಪೋತ್ಸವವನ್ನು ಉದ್ಘಾಟನೆ ಮಾಡುತ್ತಾರೆ. ಕೋವಿಡ್ ನಿಮಯಗಳ ಅನುಗುಣವಾಗಿಯೇ ಪುಷ್ಪೋತ್ಸವ ನಡೆಯಲಿದೆ. ಪೊಷ್ಪೋತ್ಸವದ ಒಟ್ಟು ಥೀಮ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ, ವ್ಯಕ್ತಿತ್ವವನ್ನು ಆಧರಿಸಿರುತ್ತದೆ ಅಲ್ಲದೆ ಅಪ್ಪು ಅವರ ಗಾಜನೂರಿನ ಮನೆಯನ್ನು ಸಹ ಹೂವಿನಿಂದ ಅಲಂಕರಿಸಲಾಗುತ್ತದೆ'' ಎಂದಿದ್ದಾರೆ ಸಚಿವ ಮುನಿರತ್ನ.

    This Year Lalbagh Flower Show Is In Puneeth Rajkumars Name

    ಈ ಬಾರಿ ಸ್ವಾತಂತ್ರ್ಯ ದಿನದ ಬಳಿಕವೂ ಕೆಲವು ದಿನಗಳ ಕಾಲ ಪುಷ್ಪೋತ್ಸವ ಮುಂದುವರೆಯಲಿದೆ. ಭಾರತದ ವಿವಿಧ ವಿಶೇಷ ಹೂವುಗಳ ಜೊತೆಗೆ, ವಿದೇಶದಿಂದಲೂ ಹೂವುಗಳನ್ನು ಈ ಬಾರಿಯ ಪುಷ್ಪೋತ್ಸವಕ್ಕೆ ತರಿಸಲಾಗುತ್ತದೆ ಎಂದು ಮುನಿರತ್ನ ಹೇಳಿದ್ದಾರೆ.

    ಇದೇ ವೇಳೆ ರಾಜ್ಯದ ಕೆಲ ಭಾಗಗಳಲ್ಲಿ ಆಗುತ್ತಿರುವ ಮಳೆ ಹಾಗೂ ಅದರಿಂದ ಆಗುತ್ತಿರುವ ತೋಟಗಾರಿಕಾ ಬೆಳೆಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ ಮಾತನಾಡಿರುವ ಸಚಿವರು, ಅಧಿಕಾರಿಗಳು ಮಾಹಿತಿಯನ್ನು ತರಿಸಿಕೊಳ್ಳುತ್ತಿದ್ದಾರೆ. ದಾಖಲೆ, ಮಾಹಿತಿ ಕ್ರೂಢೀಕರಣ ಆದ ಬಳಿಕ ಏನೇನು, ಎಷ್ಟು ನಷ್ಟವಾಗಿದೆಯೋ ಗಮನಸಿಸಿ ಸರ್ಕಾರವು ಸಹಾಯ ಮಾಡಲಿದೆ. ನಮ್ಮ ಸರ್ಕಾರ ಸದಾ ಕಾಲ ರೈತರ ಪರವಾಗಿ ಇದೆ'' ಎಂದಿದ್ದಾರೆ ಮುನಿರತ್ನ.

    ಸರ್ಕಾರ ಈಗಾಗಲೇ ಪುನೀತ್ ರಾಜ್‌ಕುಮಾರ್‌ಗೆ ಹಲವು ವಿಧದಲ್ಲಿ ಗೌರವ ಸಲ್ಲಿಸಿದೆ. ಬಿಬಿಎಂಪಿಯು ತನ್ನ ವ್ಯಾಪ್ತಿಯ ಉದ್ದನೆಯ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟಿದೆ. ಸರ್ಕಾರದ ಯೋಜನೆಯೊಂದಕ್ಕೂ ಪುನೀತ್ ರಾಜ್‌ಕುಮಾರ್ ಹೆಸರಿಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

    Recommended Video

    Sathish Ninasam | ಡೆಲಿವರಿ ಬಾಯ್ಸ್‌ಗೆ ಧೈರ್ಯ ತುಂಬಿದ ಸತೀಶ್ ನೀನಾಸಂ | Petromax *Sandalwood

    English summary
    This year Lalbagh flower show is in Puneeth Rajkumar's name said minister Munirathna. Flower show will start from August 05.
    Wednesday, July 13, 2022, 8:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X