'ಡಿ ಉತ್ಸವ'ಕ್ಕೆ ಅಭಿಮಾನಿಗಳಿಂದ ಶುರುವಾಯ್ತು ದಿನಗಣನೆ

By Pavithra

ಸಿನಿಮಾ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬಗಳಿಗಿಂತಲೂ ತಾವು ಇಷ್ಟ ಪಡುವ ಸ್ಟಾರ್ ಗಳ ಬರ್ತಡೇ ಅಂದರೆ ಸಂಭ್ರಮ. ಸದ್ಯ ತುಂಬಾ ಹತ್ತಿರದಲ್ಲಿ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲಿರುವ ನಟ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ದರ್ಶನ್ ಅಭಿಮಾನಿಗಳ ಬಳಗ ತುಂಬಾ ದೊಡ್ಡದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನ ಹೊಂದಿರುವ ಡಿ ಬಾಸ್ ಬರ್ತಡೇಗೆ ಇನ್ನು 16 ದಿನಗಳು ಬಾಕಿ ಇವೆ. ಆದರೆ ಸಂಭ್ರಮಾಚರಣೆ ಮಾತ್ರ ಈಗಾಗಲೇ ಶುರುವಾಗಿದೆ.

ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬದ ತಯಾರಿಯನ್ನ ಹೇಗೆ ಮಾಡಿಕೊಂಡಿದ್ದಾರೆ?. ಏನೆಲ್ಲಾ ಸ್ಪೆಷಲ್ ಈ ಬರ್ತಡೇಯಲ್ಲಿ ಇರಲಿದೆ?. ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ದರ್ಶನ್ ಹುಟ್ಟುಹಬ್ಬಕ್ಕೆ ಸಿದ್ದತೆ

ದರ್ಶನ್ ಹುಟ್ಟುಹಬ್ಬಕ್ಕೆ ಸಿದ್ದತೆ

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬವನ್ನ ಈ ಬಾರಿ ತುಂಬಾ ಚೆನ್ನಾಗಿ ಹಾಗೂ ಅದ್ಧೂರಿಯಾಗಿ ಮಾಡಲು ಅಭಿಮಾನಿಗಳ ಸಂಘಟನೆಗಳು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ 'ಡಿ ಉತ್ಸವ' ಎನ್ನು ಹೆಸರನ್ನೂ ಕೂಡ ಹುಟ್ಟುಹಬ್ಬದ ಸಮಾರಂಭಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ವಿಭಿನ್ನತೆಯತ್ತಾ ದರ್ಶನ್ ಅಭಿಮಾನಿಗಳು

ವಿಭಿನ್ನತೆಯತ್ತಾ ದರ್ಶನ್ ಅಭಿಮಾನಿಗಳು

ಅಭಿಮಾನಿಗಳೆಲ್ಲರೂ ಒಂದೇ ಕಡೆ ಸೇರಿ ಹುಟ್ಟುಹಬ್ಬವನ್ನ ಆಚರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಹುಟ್ಟುಹಬ್ಬಕ್ಕಾಗಿ 'ಡಿ ಉತ್ಸವ' ಎನ್ನುವ ಹೆಸರಿನಲ್ಲಿ ಲೋಗೋ ಮಾಡಿಸಿ ಬರ್ತಡೇ ಸೆಲಬ್ರೆಟ್ ಮಾಡುತ್ತಿರುವುದು ಇದೇ ಮೊದಲು.

ಹಿರೇಕೆರೂರಿನಲ್ಲಿ ನಡೆಯಲಿರೋ ಪಂದ್ಯಾವಳಿ

ಹಿರೇಕೆರೂರಿನಲ್ಲಿ ನಡೆಯಲಿರೋ ಪಂದ್ಯಾವಳಿ

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ವಿಶೇಷವಾಗಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಹಿರೇಕೆರೂರಿನಲ್ಲಿ ದರ್ಶನ್ ಅಭಿಮಾನಿಗಳ ಸಂಘಟನೆಯಿಂದ ಕಬ್ಬಡಿ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ.

ಸ್ಯಾಂಡ್ ಆರ್ಟ್ ನಲ್ಲಿ ದುರ್ಯೋಧನ

ಸ್ಯಾಂಡ್ ಆರ್ಟ್ ನಲ್ಲಿ ದುರ್ಯೋಧನ

ಬಿಡುಗಡೆಗೆ ಸಿದ್ದವಾಗಿರುವ ಕುರುಕ್ಷೇತ್ರ ಸಿನಿಮಾದಲ್ಲಿನ ದರ್ಶನ್ ಅವರ ಲುಕ್ ಅನ್ನು ಸ್ಯಾಂಡ್ ಆರ್ಟ್ ನಲ್ಲಿ ಮಾಡಿಸಲಾಗಿದೆ. ಸ್ಯಾಂಡ್ ಆರ್ಟ್ ಮಾಡಿರುವ ವಿಡಿಯೋ ಸಿಕ್ಕಪಟ್ಟೆ ವೈರಲ್ ಆಗಿದ್ದು ಚಂದನ್ ವಿ ಕುಮಾರ್, ಚೇತನ್ ಕುಮಾರ್, ರಾಜ್ ಹಾಗೂ ಜಾನ್ಹವಿ ಇವರೆಲ್ಲರೂ ಸೇರಿ ಈ ಕಲಾಕೃತಿಯನ್ನ ತಯಾರು ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ಆಗುವ ಸಾಧ್ಯತೆ

ಟ್ರೇಲರ್ ಬಿಡುಗಡೆ ಆಗುವ ಸಾಧ್ಯತೆ

ಡಿ ಬಾಸ್ ಹುಟ್ಟುಹಬ್ಬದ ವಿಶೇಷವಾಗಿ ಕುರುಕ್ಷೇತ್ರ ಸಿನಿಮಾದ ಟ್ರೇಲರ್ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಇದರ ಜೊತೆಯಲ್ಲಿ ಇತ್ತೀಚಿಗಷ್ಟೇ ಸೆಟ್ಟೇರಿರುವ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.

More from Filmibeat

English summary
Kannada actor Challenging star Darshan's birthday will be held on February 19th, Fans have already made big plans for birthday. This year's birthday will be celebrated in the name of D Utsava.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X