»   » ಈ ವ್ಯಕ್ತಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗ್ಬೇಕಂತೆ.!

ಈ ವ್ಯಕ್ತಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗ್ಬೇಕಂತೆ.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ಯಾರು ಗೆಲ್ಲಬೇಕು ಎಂಬ ಅಭಿಪ್ರಾಯವನ್ನ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಚಂದನ್ ಗೆಲ್ಲಬೇಕು, ಜೆಕೆ ಗೆಲ್ಲಬೇಕು, ಶ್ರುತಿ ಗೆಲ್ಲಬೇಕು, ನಿವೇದಿತಾ ಗೌಡ ಗೆಲ್ಲಬೇಕು ಎಂದು ಅವರವರ ಫಾಲೋವರ್ಸ್ ಪರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇವರ ಮಧ್ಯೆ ಒಬ್ಬ ವ್ಯಕ್ತಿಯನ್ನ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಕೆಲವರು ಕಾಮೆಂಟ್ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ. ಯಾರದು ಆ ವ್ಯಕ್ತಿ?

'ದೊಡ್ಮನೆ'ಯಿಂದ ಜಗನ್ ಔಟ್: ವೀಕ್ಷಕರ ಖುಷಿಗೆ ಪಾರವೇ ಇಲ್ಲ.!

Thithi gaddappa wild card entry to bigg boss?

ಹೌದು, 'ತಿಥಿ' ಖ್ಯಾತಿಯ ಗಡ್ಡಪ್ಪನನ್ನ ಬಿಗ್ ಬಾಸ್ ಮನೆಗೆ ಕಳುಹಿಸಬೇಕು ಎನ್ನುವುದು ಕೆಲ ವೀಕ್ಷಕರ ಅಭಿಮತ. ಈಗಾಗಲೇ ಮೂವರು ಸ್ಪರ್ಧಿಗಳು ಬಿಗ್ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ. ವೈಷ್ಣವಿ, ಸಂಯುಕ್ತ ಹೆಗಡೆ ಹಾಗೂ ಲಾಸ್ಯ ನಾಗ್ ವೈಲ್ಡ್ ಕಾರ್ಡ್ ಸ್ಪರ್ಧಿಗಗಳಾಗಿದ್ದರು.

ಒಂದು ಕಪ್ ಮೊಸರಿಗಾಗಿ 'ಬಿಗ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!

Thithi gaddappa wild card entry to bigg boss?

ಒಂದು ವೇಳೆ ಗಡ್ಡಪ್ಪ ಬಿಗ್ ಬಾಸ್ ಮನೆಗೆ ಹೋದ್ರೆ ಹೇಗಿರುತ್ತೆ ಎಂದು ನೀವೆ ಯೋಚಿಸಿ. ಇಂದಿನ ಯುವ ತಾರೆಯರು ಹಾಗೂ ಕಾಮನ್ ಮ್ಯಾನ್ ಗಳ ಮಧ್ಯೆ ಹಳ್ಳಿ ಹೈದ ಗಡ್ಡಪ್ಪ ಎಂಟ್ರಿ ಕೊಟ್ರೆ ಮಸ್ತ್ ಮನರಂಜನೆ ಗ್ಯಾರೆಂಟಿ. ಬಿಗ್ ಬಾಸ್ ಆಯೋಜಕರು ವೀಕ್ಷಕರ ಒತ್ತಾಯಕ್ಕೆ ಮಣಿದು ಮುಂದಿನ ವರ್ಷವಾದ್ರೂ ಗಡ್ಡಪ್ಪನನ್ನ ಸ್ಪರ್ಧಿ ಮಾಡ್ತಾರ ಕಾದುನೋಡೋಣ.

English summary
According tv audience, Kannada Actor gaddappa want to go for bigg boss kannada House in wild card entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X