»   » ಸೆಂಚುರಿ ಗೌಡರ 'ತಿಥಿ'ಗೆ ಮಾರು ಹೋದ ಬಾಲಿವುಡ್ ನಟಿ ಕಲ್ಕಿ

ಸೆಂಚುರಿ ಗೌಡರ 'ತಿಥಿ'ಗೆ ಮಾರು ಹೋದ ಬಾಲಿವುಡ್ ನಟಿ ಕಲ್ಕಿ

Posted By:
Subscribe to Filmibeat Kannada

ಇತ್ತೀಚೆಗೆ ಕನ್ನಡ ಚಿತ್ರಗಳು ಹೆಚ್ಚಿನ ಕಡೆ ಸದ್ದು ಮಾಡುತ್ತಿವೆ. ಅದರಲ್ಲೂ ಸೆಂಚುರಿ ಗೌಡರ 'ತಿಥಿ'ಯಂತೂ ಎಲ್ಲಾ ಕಡೆ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಮೊನ್ನೆ ಮೊನ್ನೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹೊಗಳಿದ ಬೆನ್ನಲ್ಲೇ ಇದೀಗ ಅವರ ಪತ್ನಿ ನಟಿ ಕಲ್ಕಿ ಅವರ ಸರದಿ.

ಹೌದು ರಾಮ್ ರೆಡ್ಡಿ ನಿರ್ದೇಶನದ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಕನ್ನಡ ಸಿನಿಮಾ 'ತಿಥಿ'ಯನ್ನು ಬಾಲಿವುಡ್ ನಟಿ ಕಲ್ಕಿ ಅವರು ಇತ್ತೀಚೆಗೆ ವೀಕ್ಷಿಸಿ ಮುಕ್ತ ಅಭಿಪ್ರಾಯವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.['ನಾನು ಎಷ್ಟು ಬಾರಿ ಬೇಕಾದರೂ 'ತಿಥಿ' ನೋಡಲು ಸಿದ್ಧ' ಎಂದವರಾರು?]


'Thithi' a simple yet funny philosophicla film' says Actress Kalki Koechlin

ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನಿಮಾ ಹಾಲಿವುಡ್ ನ 'ಗಾಡ್ ಫಾದರ್' ಖ್ಯಾತಿಯ ನಿರ್ದೇಶಕ ಫ್ರಾನ್ಸಿಸ್ ಕೊಪ್ಪೋಲಾ ಅವರನ್ನು ಹಿಡಿದು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೀಗ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಪತ್ನಿ ನಟಿ ಕಲ್ಕಿ ಕೊಚ್ಲಿನ್ ಅವರು ಕೂಡ ಸೆಂಚುರಿ ಗೌಡರ 'ತಿಥಿ'ಗೆ [ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ] ಮಾರು ಹೋಗಿದ್ದಾರೆ.


'Thithi' a simple yet funny philosophicla film' says Actress Kalki Koechlin

''ತಿಥಿ' ಸಿನಿಮಾ ನೋಡಿದೆ, ತುಂಬಾ ಸರಳ ಮತ್ತು ಹಾಸ್ಯಮಯ ಸಿನಿಮಾ ರಾಮ್ ರೆಡ್ಡಿ ಅವರ ಬತ್ತಳಿಕೆಯಿಂದ ಹೊರಬಂದಿದೆ' ಎಂದು ನಟಿ ಕಲ್ಕಿ ಅವರು ಟ್ವೀಟ್ ಮಾಡಿದ್ದಾರೆ.['ಫಿಲ್ಮಿಬೀಟ್ ಕನ್ನಡ ವಿಶೇಷ'; 'ಅತ್ಯುತ್ತಮ ಪೋಷಕ ನಟಿ' ಪೂಜಾ ಸಂದರ್ಶನ]
ಯುವ ಸಂಭಾಷಣೆಕಾರ ಈರೇ ಗೌಡ ಕಥೆ ಬರೆದು ರಾಮ್ ರೆಡ್ಡಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ 'ತಿಥಿ' ಚಿತ್ರಕ್ಕೆ ವಿಮರ್ಶಕರು ಸೇರಿದಂತೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನೇನು ಸದ್ಯದಲ್ಲೇ ವಿದೇಶಗಳಲ್ಲೂ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದಾರೆ.


English summary
Bollywood Actress Kalki Koechlin has applauded National Award-winning Kannada-language film Thithi, which released in India on Friday (May 6th). She says that 'Thithi' a simple yet funny philosophicla film' by Raam Reddy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada