»   » ಸೆಂಚುರಿಗೌಡ-ಗಡ್ಡಪ್ಪರನ್ನ ಕೆಟ್ಟದಾಗಿ ತೋರಿಸಲಾಗುತ್ತಿದೆ: 'ತಿಥಿ' ಈರೇಗೌಡ ಆಕ್ರೋಶ

ಸೆಂಚುರಿಗೌಡ-ಗಡ್ಡಪ್ಪರನ್ನ ಕೆಟ್ಟದಾಗಿ ತೋರಿಸಲಾಗುತ್ತಿದೆ: 'ತಿಥಿ' ಈರೇಗೌಡ ಆಕ್ರೋಶ

Posted By:
Subscribe to Filmibeat Kannada

'ತಿಥಿ' ಚಿತ್ರದ ಮೂಲಕ ಕರ್ನಾಟಕದ ಮನೆ ಮಾತಾದ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಳ್ಳಿತೆರೆಯಲ್ಲಿ ಇವರನ್ನ ನೋಡಿ ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ. ಇವರ ಸಿನಿಮಾಗಳು ಅಂದ್ರೆ ಜನರು ಚಿತ್ರಮಂದಿರಕ್ಕೆ ನುಗ್ಗಿ ಬರುತ್ತಿದ್ದಾರೆ.

ಹೀಗಿರುವಾಗ, 'ತಿಥಿ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಈರೇಗೌಡ, ಸ್ಯಾಂಡಲ್ ವುಡ್ ನ ಕೆಲ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ವಿಮರ್ಶೆ: 'ತರ್ಲೆ ವಿಲೇಜ್' ಅಲ್ಲ, 'ಪೋಲಿ' ವಿಲೇಜ್!]

ಹಳ್ಳಿಯಿಂದ ಬಂದ ಮುಗ್ದ ಜನರನ್ನ ಬಳಿಸಿಕೊಂಡು, ಅಶ್ಲೀಲವಾಗಿ ತೋರಿಸಲಾಗುತ್ತಿದೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ಗಡ್ಡಪ್ಪ-ಸೆಂಚುರಿಗೌಡರನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ

'ತಿಥಿ' ಚಿತ್ರದ ಮೂಲಕ ವಿಶ್ವದೆಲ್ಲೆಡೆ, ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿ, ರಾಷ್ಟ್ರ ಪ್ರಶಸ್ತಿ ಕೂಡ ಗೆದ್ದ 'ತಿಥಿ' ಕಲಾವಿದರನ್ನ ಈಗ ಕೆಟ್ಟದಾಗಿ ತೋರಿಸುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ.['ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ]

'ತಿಥಿ' ಚಿತ್ರದ ಸಂಭಾಷಣೆಕಾರ ಬೇಸರ

'ತಿಥಿ' ಸಿನಿಮಾದ ರಚನಕಾರ-ಸಂಭಾಷಣೆಕಾರ ಈರೇಗೌಡ, ಮುಗ್ಧ ಗ್ರಾಮಸ್ಥರನ್ನು 'ತರ್ಲೆ ವಿಲ್ಲೇಜ್' ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಿದ್ದಾರೆ, ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ತಿಥಿ' ನಟರನ್ನು ಕೆಟ್ಟದಾಗಿ ಬಳಸಿಕೊಂಡಿದ್ದಾರೆ''

"ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ 'ತಿಥಿ' ನಟರನ್ನು ಕೆಟ್ಟದಾಗಿ ಬಳಸಿಕೊಂಡಿರುವ ರೀತಿಗೆ ನನಗೆ ತೀವ್ರ ನೋವಾಗಿದೆ. ಅವರು 'ತಿಥಿ'ಯಲ್ಲಿ ಅಭಿನಯಿಸಿದ ಪಾತ್ರಗಳನ್ನೇ ನಕಲು ಮಾಡಿಸಿದ್ದಾರೆ. ಕನಿಷ್ಠ ಪಕ್ಷ ಹೆಸರುಗಳನ್ನೂ ಬದಲಾಯಿಸಿಲ್ಲ. ಅವರು ಆ ಪಾತ್ರಗಳಿಗೆ ಅಂತಾರಾಷ್ಟ್ರೀಯ ಖ್ಯಾತಿ ಮತ್ತು ಪ್ರಶಂಸೆ ಪಡೆದಿದ್ದರು. ಈಗ ಅವರನ್ನು ಬಳಸಿಕೊಂಡಿರುವ ರೀತಿಗೆ, ಬಳಸಿರುವ ಅಶ್ಲೀಲ ಮತ್ತು ಮೂಢತನದ ಹಾಸ್ಯಕ್ಕೆ ತಲೆತಗ್ಗಿಸುವಂತಾಗಿದೆ''

''ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತಿದೆ''

ಇದನ್ನು ನಿಲ್ಲಿಸಲು ನನಗೇನು ಮಾಡಲು ಸಾಧ್ಯವಾಗುತ್ತಿಲ್ಲವೆಂದು ಬೇಸರವಾಗಿದೆ. ಈ ವೃತ್ತಿಪರರಲ್ಲದ ನಟರನ್ನು ಈ ರೀತಿ ಬಳಸಿಕೊಂಡಿರುವುದಕ್ಕೆ ನನಗೆ ದುಃಖವು ಆಗಿದೆ. 'ತಿಥಿ' ಸಿನಿಮಾದಲ್ಲಿ ಇವರನ್ನು ನೈಜ ವ್ಯಕ್ತಿಗಳಂತೆ ಬಿಂಬಿಸಲಾಗಿತ್ತು. ನಿರ್ದೇಶನ ಮತ್ತು ನಿರ್ಮಾಪಕರ ತಂಡ ಈ ನಟರನ್ನು ಬಹಳ ಚೆನ್ನಾಗಿ ನಡೆಸಿಕೊಂಡಿತ್ತು. ಅವರ ಆತ್ಮಗೌರವಕ್ಕೆ ಮತ್ತು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬಾರದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು.

''ಮುಂದೆ ಹೀಗೆ ಮಾಡಲ್ಲ ಎಂಬ ನಂಬಿಕೆ''

'ತಿಥಿ' ಸಿನಿಮಾದಲ್ಲಿ ಈ ಜನರ ಮಾನವೀಯತೆಯನ್ನು ಜಗತ್ತಿಗೆ ಅನಾವರಣ ಮಾಡಲಾಗಿತ್ತು. ಅವರು ಹಾಸ್ಯದ ವಸ್ತುಗಳಾಗಿರಲಿಲ್ಲ. ಮುಂದಿನ ಕನ್ನಡ ನಿರ್ದೇಶಕರು ಮತ್ತು ನಿರ್ಮಾಪಕರು ಆ ಜಾಗರೂಕತೆಯನ್ನು ತೆಗೆದುಕೊಳ್ಳುತ್ತಾರೆ ಎಂದು ನಂಬಿದ್ದೇನೆ" ಎಂದು ಬರೆದಿರುವ ಈರೇಗೌಡ ಅವರು "ಈ ಸ್ಥಿತಿ ನನಗೆ ನೋವುಂಟು ಮಾಡಿ ಅಳುವಂತೆ ಮಾಡಿದೆ" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

English summary
Thithi Writter Eregowda expressed anger against tarle Village Film Team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada