ಸೋಷಿಯಲ್ ಮೀಡಿಯಾದಲ್ಲಿ 'ತೂತು ಮಡಿಕೆ'ಯ ಆಕರ್ಷಣೆ
'ತೂತು ಮಡಿಕೆ' ಎಂಬ ಪದ ಈಗ ಒಂದು ಸಿನಿಮಾದ ಟೈಟಲ್ ಆಗಿದೆ. ಆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸೋಷಿಯಲ್ ಮೀಡಿಯದಲ್ಲಿ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಮಾಡಿಕೊಂಡಿರುವ ಚಿತ್ರತಂಡ ಈ ಕ್ಯಾಚಿ ಟೈಟಲ್ ಮೂಲಕ ಮೊದಲ ಹಂತದಲ್ಲಿಯೇ ಗಮನ ಸೆಳೆದಿದೆ. ಚಂದ್ರ ಕೀರ್ತಿ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನು ಚಂದ್ರ ಕೀರ್ತಿ, ಎ ಎಸ್ ಜಿ ಮತ್ತು ಡಾಲರ್ ಬರೆದಿದ್ದಾರೆ. ಚಂದ್ರ ಕೀರ್ತಿ ಈ ಹಿಂದೆ ಇವರು ಸಿಲಿಕಾನ್ ಸಿಟಿ, ಮೂಕವಿಸ್ಮಿತ, ನನ್ನ ಹಾಡು ನನ್ನದು, ಕಿಸ್ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾದಲ್ಲಿ ಎಂಟು ಮುಖ್ಯ ಪಾತ್ರಗಳು ಇರಲಿದ್ದು, ಚಿತ್ರದ ಮುಹೂರ್ತದ ಸಮಯದಲ್ಲಿ ಆ ಪಾತ್ರಗಳ ಅನಾವರಣ ಆಗಲಿದೆ. ಸದ್ಯಕ್ಕೆ ಯಾವುದೇ ಕಲಾವಿದರ ಹೆಸರು ಬಹಿರಂಗ ಆಗದಂತೆ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ವತಿಯಿಂದ ಈ ಚಿತ್ರ ನಿರ್ಮಾಣ ಆಗುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ. ಇದೇ 30 ರಿಂದ ಚಿತ್ರೀಕರಣ ಪ್ರಾರಂಭ ಮಾಡುತ್ತಿದೆ.
ರಘು ನಿಡುವಳ್ಳಿಯವರು ಚಿತ್ರಕ್ಕೆ ಸಂಭಾಷಣೆ ಬರೆಯುತಿದ್ದು, ಸ್ವಾಮಿನಾಥನ್ ಸಂಗೀತ ನೀಡಲಿದ್ದಾರೆ. ಸಿನಿಮಾದ ಹೊಸತನ ಪೋಸ್ಟರ್ ನಲ್ಲಿಯೇ ಕಾಣುತ್ತಿದೆ.


Click it and Unblock the Notifications











