ಅವಕಾಶ ಸಿಕ್ಕರೆ ಆ ಎರಡು ಘಟನೆ ತಡೀತೀನಿ, ಆ ಎರಡು ಘಟನೆ ಆಗಬಾರದಿತ್ತು; ಧನಂಜಯ್

ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ತಮ್ಮ ಆಪ್ತ ಬಳಗದ ಜೊತೆಗೆ ಹೊಸ ತಂಡ ಕಟ್ಟಿಕೊಂಡು ಧನು ಸಿನಿಮಾ ತೆರೆಗೆ ತಂದಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ವಿತರಣೆ ಮಾಡಿದೆ. ಸದ್ಯ ಚಿತ್ರದ ಪ್ರಚಾರದಲ್ಲಿ ಡಾಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಅವರು ಮಾತನಾಡಿದ್ದಾರೆ.

ಅಪ್ಪು ಅಗಲಿಕೆ ಹಾಗೂ ದರ್ಶನ್ ಅನುಪಸ್ಥಿತಿ ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರಿದೆ. ಇದನ್ನು ನಟ ಧನಂಜಯ್ ಕೂಡ ಒಪ್ಪಿಕೊಳ್ಳುತ್ತಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ. ದರ್ಶನ್ ನಮ್ಮ ನಡುವೆ ಇರಬೇಕಿತ್ತು ಎಂದು ತಿಳಿಸಿದ್ದಾರೆ. ಒಟ್ಟಾರೆ ಆ ಎರಡು ಘಟನೆಗಳು ನಡೆಯಬಾರದಿತ್ತು. ಒಂದು ವೇಳೆ ಅವಕಾಶ ಸಿಕ್ಕರೆ ಆ ಎರಡು ಘಟನೆಗಳನ್ನು ತಡೆದುಬಿಡ್ತೀನಿ ಎಂದು ಆಪ್ತರ ಬಳಿ ಹೇಳ್ತಿರ್ತೀನಿ ಎಂದು ಧನಂಜಯ್ ತಿಳಿಸಿದ್ದಾರೆ.

Those Two Incidents Shouldn t Have Happened Dhananjay Speaks About Puneeth Rajkumar and Darshan

'ಮದರ್ ಪ್ರಾಮಿಸ್' ಸಿನಿಮಾ ಪ್ರಚಾರದ ಭಾಗವಾಗಿ ಟಿವಿ9 ವಾಹಿನಿ ಸಂದರ್ಶನದಲ್ಲಿ ಧನಂಜಯ್ ಮಾತನಾಡಿದ್ದಾರೆ. ಈ ವೇಳೆ ಅಪ್ಪು ಹಾಗೂ ದರ್ಶನ್ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. "ಅದು ಎರಡು ಕೂಡ ದೊಡ್ಡ ಪೆಟ್ಟು.. ಅವು ಎರಡು ಮರಗಳು.. ಶಕ್ತಿಗಳು.. ನನಗೆ ಟೈಮ್ ಟ್ರಾವೆಲ್ ಮಾಡುವ ಅವಕಾಶ ಕೊಟ್ರೆ, ಆ ಎರಡು ಘಟನೆ ತಡೀತ್ತೀನಿ ಎಂದು ಸ್ನೇಹಿತರ ಬಳಿ ಹೇಳ್ತಿರ್ತೀನಿ. ಆ ಎರಡು ಘಟನೆಗಳು ಆಗಬಾರದಿತ್ತು. ಅದು ದೊಡ್ಡ ಇಂಪ್ಯಾಕ್ಟ್.. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಯೋಚಿಸಿ ಕೆಲಸ ಮಾಡ್ತಾ ಹೋಗಬೇಕು" ಎಂದಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ಧನಂಜಯ್ ಮೊದಲಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ತಿಂಗಳ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂದು ಹೇಳಿದ್ದರು. "ಅಲ್ಲಿ ಒಂದು ದುರಂತ ಆಗಿದೆ. ಜೀವ ಹೋಗಿದೆ. ಆ ಮನುಷ್ಯನ ತಂದೆ-ತಾಯಿ, ಮಡದಿ ಮಗು ಮುಖ ನೋಡಿದಾಗ ಬೇಸರವಾಗುತ್ತದೆ. ನಮ್ಮವರ ಮೇಲೆ ಆರೋಪ ಬಂದಾಗ ಅದು ಬೇಸರವಾಗುತ್ತದೆ. ಅಲ್ಲಿ ಏನಾಯ್ತು ಎನ್ನುವುದು ನಮಗೂ ಗೊತ್ತಿಲ್ಲ. ಪೊಲೀಸರಿಗೆ ಗೊತ್ತಿರುತ್ತೆ. ನ್ಯಾಯಾಲಯದಲ್ಲಿ ಪ್ರಕರಣ ನಡೆದು ತೀರ್ಪು ಬರುತ್ತದೆ. ದರ್ಶನ್ ಸಹೋದರನಾಗಿಯೇ ಹೇಳ್ತಿದ್ದೀನಿ ತಪ್ಪು ಮಾಡಿದ್ದರೆ ಖಂಡಿತ ಶಿಕ್ಷೆ ಆಗಲಿ" ಎಂದು ಹೇಳಿದ್ದರು.

ಇದೇ ವೇಳೆ ರಾಜಕೀಯರಂಗ ಪ್ರವೇಶಿಸುವ ಬಗ್ಗೆ ಕೂಡ ಧನಂಜಯ್ ಮಾತನಾಡಿದ್ದಾರೆ. "ಬಹಳ ಜನ ಹೇಳ್ತಾರೆ.. ಕೇಳ್ತಾರೆ.. ಆದ್ರೆ ನಾನು ನಟನಾಗಿ ಬಹಳ ಖುಷಿಯಾಗಿದ್ದೀನಿ. ನಟನಾಗಿ ಸಾಕಷ್ಟು ಪಾತ್ರಗಳನ್ನು ಮಾಡಲು ಆಸೆಯಿದೆ. ರಾಜಕಾರಣ 24 X 7 ಕೆಲಸ. ನಟನಾಗಿಯೇ ಸಾಕಷ್ಟು ಮಾಡಬಹುದು. ದಳಪತಿ ವಿಜಯ್ ತಮಿಳುನಾಡು ಸಿಎಂ ಆಗಿರುವುದು ಬಹಳ ಖುಷಿ ತಂದಿದೆ. ಜನನಾಯಕನಾಗಿ ಏನೆಲ್ಲಾ ಬದಲಾವಣೆ ತರ್ತಾರೆ ಎನ್ನುವುದನ್ನು ನೋಡಲು ನಾನು ಕಾಯ್ತಿದ್ದೀನಿ" ಎಂದಿದ್ದಾರೆ.

'ಹೆಗ್ಗಣ ಮುದ್ದು' ಸೇರಿ ಮತ್ತಷ್ಟು ಸಿನಿಮಾಗಳನ್ನು ಧನಂಜಯ್ ನಿರ್ಮಿಸಲು ಮುಂದಾಗಿದ್ದಾರೆ. ಬೇರೆ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಶಿವಣ್ಣನ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. 'ಅಣ್ಣಾ ಫ್ರಂ ಮೆಕ್ಸಿಕೊ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ಮದುವೆಯಾಗಿದ್ದ ಧನು ಪತ್ನಿ ಜೊತೆ ಸೇರಿ 2 ತಿಂಗಳ ಹಿಂದೆ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಸದ್ಯ 'ಮದರ್ ಪ್ರಾಮಿಸ್' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಡಾಲಿ ಧನಂಜಯ್ ತೇಲುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X