'ತೋತಾಪುರಿ' ಟ್ರೇಲರ್ ಬಿಡುಗಡೆ: ಮತ್ತೊಂದು ವಿಜಯ ಪ್ರಸಾದ್ ಬ್ರ್ಯಾಂಡಿನ ಸಿನಿಮಾ

ಕನ್ನಡ ಚಿತ್ರರಂಗದ ಅಂಡರ್‌ ರೇಟೆಡ್ ನಿರ್ದೇಶಕರಲ್ಲಿ ಒಬ್ಬರು ವಿಜಯ್ ಪ್ರಸಾದ್. ಸಾಲು-ಸಾಲು ಪೈಸಾ ವಸೂಲ್ ಸಿನಿಮಾಗಳನ್ನು ವಿಜಯ ಪ್ರಸಾದ್ ಈವರೆಗೆ ನೀಡಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ವಿಜಯ ಪ್ರಸಾದ್, ಜಗ್ಗೇಶ್ ಜೋಡಿ 'ತೋತಾಪುರಿ' ಸಿನಿಮಾ ಮೂಲಕ ಮತ್ತೊಮ್ಮೆ ಕಚಗುಳಿ ಇಡಲು ಸಜ್ಜಾಗಿದೆ. ಸಿನಿಮಾದ ಟ್ರೇಲರ್ ಅನ್ನು ಇಂದು ನಟ ಸುದೀಪ್ ಬಿಡುಗಡೆ ಮಾಡಿದ್ದಾರೆ.

Recommended Video

'KGF 2' ಸಿನಿಮಾಗೆ ಕನ್ನಡ ನಟರ ಸಪೋರ್ಟ್ ಯಾಕೆ ಇಲ್ಲಾ? | Yash | Sudeep Darshan | Dhruva Sarja

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಸುದೀಪ್, ''ಈ ಸಿನಿಮಾದ ಡೈಲಾಗ್‌ಗಳನ್ನು ನಟರು ಹೇಳಿರುವ ರೀತಿಯಿಂದಾಗಿ ಅವು ಕಚಗುಳಿ ಇಡುತ್ತಿವೆ, ಅಸಭ್ಯ ಎನಿಸುತ್ತಿಲ್ಲ. ಸಿನಿಮಾದಲ್ಲಿ ಜಗ್ಗೇಶ್ ಹೇಳಿರುವ ಡೈಲಾಗ್‌ಗಳನ್ನು ನಾವು ಹೇಳಿದರೆ ಸರಿಯಾಗಿ ಟ್ರೋಲ್ ಆಗುತ್ತೇವೆ'' ಎಂದರು. ಜೊತೆಗೆ 'ನಾವೆಲ್ಲ ಉದ್ದ ಇದ್ದೇವೆ ಅಷ್ಟೆ, ಜಗ್ಗೇಶ್ ಅಂಥಹವರು ಸಾಧಕರು'' ಎಂದು ಹೊಗಳಿದರು.

ವಿಜಯ್ ಪ್ರಸಾದ್ ತಮ್ಮದೇ ಆದ ಭಿನ್ನ ಶೈಲಿ ಹೊಂದಿರುವ ನಿರ್ದೇಶಕ, ದ್ವಂದ್ವಾರ್ಥ, ಸಾಮಾನ್ಯ ವರ್ಗಕ್ಕೆ ಸೇರಿದ ಪಾತ್ರಗಳನ್ನು ಇಟ್ಟುಕೊಂಡು ಜೀವನದ ಸುಂದರತೆಯನ್ನು ಸರಳವಾಗಿ ಕಟ್ಟಿಕೊಡುವುದು ಅವರ ಶೈಲಿ. ಈ ಹಿಂದೆ ಕೆಲವು ಬಾರಿ ಇದೇ ಮಾದರಿಯಲ್ಲಿ ಸಿನಿಮಾ ಮಾಡಿ ಗೆದ್ದಿದ್ದಾರೆ. 'ತೋತಾಪುರಿ' ಮೂಲಕ ಹೊಸ ಕತೆಯೊಂದನ್ನು ಹೊತ್ತು ತಂದಿದ್ದಾರೆ.

Thothapuri Chapter 1 Trailer; Kichcha Sudeep Released Jaggesh Starrer Thothapuri Movie Trailer

ಇದೀಗ ಬಿಡುಗಡೆ ಆಗಿರುವ 'ತೋತಾಪುರಿ' ಸಿನಿಮಾದ ಟ್ರೇಲರ್‌, ದ್ವಂಧ್ವಾರ್ಥ, ಹಾಸ್ಯ, ಮನುಷ್ಯ ಸಂಬಂಧದ ಜೊತೆಗೆ ದೇವರು ಧರ್ಮದ ವಿಚಾರಗಳನ್ನೊಳನ್ನೂ ಒಳಗೊಂಡಿದೆ. ಈ ಕಾಲದ ಅಗತ್ಯವಾದ ಧರ್ಮ ಭಾವೈಕ್ಯತೆಯ ಬಗ್ಗೆ ಸಿನಿಮಾ ಮಾತನಾಡಲಿದೆ ಎಂಬುದು ಟ್ರೇಲರ್‌ನಲ್ಲಿಯೇ ವೇದ್ಯವಾಗುತ್ತಿದೆ.

ವಿಜಯ್ ಪ್ರಸಾದ್ ಟ್ರೇಡ್ ಮಾರ್ಕ್ ಆಗಿರುವ ದ್ವಂದ್ವಾರ್ಥದ ಸಂಭಾಷಣೆ ಈ ಸಿನಿಮಾದಲ್ಲೂ ಇದೆ. ಟ್ರೇಲರ್‌ನಲ್ಲಿಯೇ ಅವುಗಳ ಝಲಕ್ ಅನ್ನು ನಿರ್ದೇಶಕರು ನೀಡಿದ್ದಾರೆ. ಜೊತೆಗೆ ಕೆಲವು ಮನಸ್ಸಿಗೆ ತಾಗುವ ಸಾಲುಗಳು ಸಹ ಇವೆ.

ಜಗ್ಗೇಶ್, ಡಾಲಿ ಧನಂಜಯ್, ಸುಮನಾ ರಂಗನಾಥ್, ಹೇಮಾ ದತ್, ಅದಿತಿ ಪ್ರಭುದೇವಾ, ದತ್ತಣ್ಣ ಪ್ರತಿಭಾವಂತ ಹಿರಿ-ಕಿರಿ ನಟ-ನಟಿಯರು ಪೈಪೋಟಿಗೆ ಬಿದ್ದಂತೆ ನಟಿಸಿರುವುದು ಸಹ ಟ್ರೇಲರ್‌ನಲ್ಲಿಯೇ ಗೊತ್ತಾಗುತ್ತಿದೆ. ಸಿನಮಾ ಬಿಡುಗಡೆ ಆದ ಬಳಿಕ ವೀಣಾ ಸುಂದರನ್ ಹಾಗೂ ಹೇಮಾ ದತ್ತ ಪಾತ್ರ ಪ್ರೇಕ್ಷಕರ ಫೇವರೇಟ್ ಆಗುವ ಸಾಧ್ಯತೆ ಇದೆ.

ಸಿನಿಮಾದ ಬಾಗ್ಲು ತೆಗಿ ಮೇರಿ ಜಾನ್ ಹಾಡು ಈಗಾಗಲೇ ದೊಡ್ಡ ಹಿಟ್ ಆಗಿದೆ. ಯೂಟ್ಯೂಬ್‌ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. 'ತೋತಾಪುರಿ' ಸಿನಿಮಾ ಆದಷ್ಟು ಬೇಗ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

'ತೋತಾಪುರಿ' ಸಿನಿಮಾದ ಜೊತೆಗೆ ವಿಜಯ ಪ್ರಸಾದ್ ನಿರ್ದೇಶನದ 'ಪೆಟ್ರೊಮ್ಯಾಕ್ಸ್' ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ. ಆ ಸಿನಿಮಾದಲ್ಲಿ ನೀನಾಸಂ ಸತೀಶ್, ಹರಿಪ್ರಿಯ ಇನ್ನಿತರರು ನಟಿಸಿದ್ದಾರೆ. ಬಳಿಕ 'ಪರಿಮಳ ಲಾಡ್ಜ್' ಸಿನಿಮಾ ಸಹ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ನಟ ಲೂಸ್ ಮಾದ ಯೋಗಿ, ನೀನಾಸಂ ಸತೀಶ್ ಇನ್ನಿತರರು ನಟಿಸಿದ್ದಾರೆ.

More from Filmibeat

English summary
Thothapuri Chapter 1 Trailer; Kichcha Sudeep Released Jaggesh Starrer Thothapuri Movie Trailer. Movie directed by Vijaya Prasad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X