twitter
    For Quick Alerts
    ALLOW NOTIFICATIONS  
    For Daily Alerts

    ಕೆಜಿ ಹಳ್ಳಿ ಗಲಭೆ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ಪ್ರಥಮ್ ಗೆ ಬೆದರಿಕೆ ಕರೆ: ದೂರು ನೀಡುವುದಾಗಿ ಎಚ್ಚರಿಕೆ

    |

    ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಕಳೆದ ವಾರ ನಡೆದ ಹಿಂಚಾರವನ್ನು ಅನೇಕರು ಖಂಡಿಸಿದ್ದಾರೆ. ಈ ಬಗ್ಗೆ ನಟ ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಾಟ್ಸಾಪ್ ಮತ್ತು ಫೋನ್ ಕಾಲ್ ಮೂಲಕ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

    Recommended Video

    Prem 6 pack ಫೋಟೋಶೂಟ್ , 'ಮಳೆ' ಚಿತ್ರಕ್ಕಾಗಿ | Filmibeat Kannada

    ಇದು ಹೀಗೆ ಮುಂದುವರೆದರೆ ಕಮಿಷನರ್ ಗೆ ಮತ್ತು ಗೃಹ ಸಚಿವರಿಗೆ ದೂರು ಕೊಡುತ್ತೇನೆ ಎಂದು ಪ್ರಥಮ್ ಹೇಳಿದ್ದಾರೆ. ಪ್ರಥಮ್ ಹಾಕಿರುವ ಪೋಸ್ಟ್ ನಿಂದಾಗಿ ಸಮಾಜದಲ್ಲಿ ಶಾಂತಿ ಕದಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಪ್ರಥಮ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ಪೋಸ್ಟ್ ಡಿಲೀಟ್ ಮಾಡಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ..

    ಪ್ರಥಮ್ ಹೇಳಿದ ಮನಕಲುಕುವ ಕತೆ: ಅಣ್ಣ-ತಂಗಿ ಒಂದು ಆಂಡ್ರಾಯ್ಡ್‌ ಮೊಬೈಲ್ಪ್ರಥಮ್ ಹೇಳಿದ ಮನಕಲುಕುವ ಕತೆ: ಅಣ್ಣ-ತಂಗಿ ಒಂದು ಆಂಡ್ರಾಯ್ಡ್‌ ಮೊಬೈಲ್

    ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು ಡಿಲೀಟ್ ಮಾಡಿದೆ

    ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು ಡಿಲೀಟ್ ಮಾಡಿದೆ

    'ಇದು ಮನವಿ ಅಥವಾ ವಾರ್ನಿಂಗ್. ಏನಾದ್ರೂ ಅಂದುಕೊಳ್ಳಿ. ನನಗೆ ಕನ್ನಡದ ಜ್ಞಾನ ಬಹಳ ಚೆನ್ನಾಗಿದೆ. ನಾನು ಬಳಸಿರೋ ಪದಗಳ ಬಗ್ಗೆ ಅರಿವೂ ಇದೆ. ತುಂಬಾ ಜನ ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ನನ್ನ ಪೋಸ್ಟ್ ಡಿಲೀಟ್ ಮಾಡಿದ್ದೇನೆ. ಆದರೂ ಸಹಾ. ಬಹಳಷ್ಟು ವಿಕೃತ ವಾಟ್ಸಾಪ್ ಸಂದೇಶಗಳು ಆಫೀಸ್ ನಂಬರ್ ಗೆ ಬರ್ತಾನೇ ಇದ್ಯಂತೆ. ನಾನು ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು ಡಿಲೀಟ್ ಮಾಡಿದ್ದು, ಯಾವುದೇ ಭಯದಿಂದಾಗಲಿ ಅಲ್ಲ" ಎಂದು ಹೇಳಿದ್ದಾರೆ.

    ಗೃಹ ಸಚಿವರನ್ನು ಭೇಟಿ ಮಡುತ್ತೇನೆ

    ಗೃಹ ಸಚಿವರನ್ನು ಭೇಟಿ ಮಡುತ್ತೇನೆ

    'ಹೆಚ್ಚು ಕಮ್ಮಿ 200 ಜನರ ಅಸಭ್ಯ ಸ್ಕ್ರೀನ್ ಶಾಟ್, ಆಡಿಯೋ ಸಂದೇಶ ನಮ್ಮ ಆಫೀಸ್ ನಂಬರ್ ತುಂಬಿ ಹೋಗಿದೆ. ನೀವು ಹೀಗೇ ನನಗೆ ಹಾಗೂ ನನ್ನ ಸಿನಿಮಾ ಗೆ ತೊಂದರೆ ಕೊಡೋದು ಮುಂದುವರೆಸಿದರೆ ನಾಳೆ ಬೆಳಿಗ್ಗೆ ಗೃಹ ಸಚಿವರನ್ನು ಭೇಟಿ ಮಾಡ್ತೀನಿ. ಪೊಲೀಸ್ ಕಮಿಷನರ್ ಗೆ ಎಲ್ಲಾ ವಾಟ್ಸಾಪ್ ಸಂದೇಶಗಳೂ ಕೊಟ್ಟು ದೂರು ಕೊಟ್ರೆ ಬಹಳಷ್ಟು ಜನರಿಗೆ ಕಾನೂನಿನ ಪಾಠ ಕಲಿಸಬೇಕಾಗುತ್ತದೆ.' ಎಂದಿದ್ದಾರೆ.

    ಆನ್‌ಲೈನ್‌ನಲ್ಲಿ ಹನಿಮೂನ್ ಮಾಡಿದ್ರೆ ಮಕ್ಕಳಾಗುತ್ತಾ?: ಪ್ರಥಮ್ ಪ್ರಶ್ನೆಆನ್‌ಲೈನ್‌ನಲ್ಲಿ ಹನಿಮೂನ್ ಮಾಡಿದ್ರೆ ಮಕ್ಕಳಾಗುತ್ತಾ?: ಪ್ರಥಮ್ ಪ್ರಶ್ನೆ

    ಕಮಿಷನರ್ ಗೆ ಲಿಖಿತ ದೂರು ನೀಡುತ್ತೇನೆ- ಪ್ರಥಮ್

    ಕಮಿಷನರ್ ಗೆ ಲಿಖಿತ ದೂರು ನೀಡುತ್ತೇನೆ- ಪ್ರಥಮ್

    'MLA ಶ್ರೀನಿವಾಸಮೂರ್ತಿಗಳ ಮನೆಗೆ ಬೆಂಕಿ ಹಚ್ಚಿರೋ ನೋವು ನಮಗೂ ಇದೆ. ಹಾಗಂತ ನೀವು ರಾತ್ರಿ ಹಗಲು ಎನ್ನದೇ ನಮ್ಮ ಆಫೀಸ್ ನಂಬರ್ ಗೆ ಕಾಲ್ ಮಾಡಿ ಬೆದರಿಕೆ ಒಡ್ಡಿದ್ರೆ ಸುಮ್ಮನೆ ಕೂರೋಕಾಗಲ್ಲ. ನನ್ನ ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು ಸುಮ್ಮನಿದ್ದೇನೆ. ನೀವು ಕೆರಳಿಸುತ್ತಲೇ ಇದ್ರೆ. ನಾಳೆ ಹೋಮ್ ಮಿನಿಸ್ಟರ್ ಮತ್ತು ಕಮಿಷನರ್ ಗೆ ಲಿಖಿತ ದೂರು ನೀಡಬೇಕಾಗುತ್ತದೆ.' ಎಂದು ಬರೆದುಕೊಂಡಿದ್ದಾರೆ.

    ಅಸಭ್ಯ ಸಂದೇಶ, ಸಿನಿಮಾಗೆ ತೊಂದರೆ ಕೊಡೋದು ನಿಲ್ಲಿಸಿ

    ಅಸಭ್ಯ ಸಂದೇಶ, ಸಿನಿಮಾಗೆ ತೊಂದರೆ ಕೊಡೋದು ನಿಲ್ಲಿಸಿ

    'ನೆನಪಿರಲಿ. ನೆನಪಿರಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸಾಪ್ ನಲ್ಲಿ ಬೆದರಿಕೆಗಳು ಸೈಬರ್ ಅಪರಾಧದ ಅಡಿಯಲ್ಲಿ ಬರುತ್ತದೆ. ನಾನು ದೂರು ಕೊಟ್ರೆ ನಿಮ್ಮ ಕುಟುಂಬದವರಿಗೆ ತೊಂದರೆ ಆಗುತ್ತೆ ಅನ್ನೋ ಕಾರಣಕ್ಕೆ ಸುಮ್ಮನಿದ್ದೇನೆ. ನೀವು ಪ್ರಾಣ ತಗಿತೀನಿ ಅಂತ ಕಳಿಸಿರೋ ಸಂದೇಶ ಗಳಿಗೆ ಏನ್ ರಾಷ್ಟ ಪ್ರಶಸ್ತಿ ಕೊಡ್ತಾರೆ ಅಂದುಕೊಂಡಿದ್ದೀರಾ? ನಿಮ್ಮ ಹೆತ್ತ ಅಪ್ಪ ಅಮ್ಮನಿಗೆ ಕಷ್ಟ ಆಗುತ್ತೆ ನಾನೇನಾದ್ರೂ ಕೇಸ್ ಹಾಕಿದ್ರೆ ಅಂತ ಸುಮ್ಮನಿದ್ದೀನಿ. ನಮ್ಮ ಆಫೀಸ್ ನಂಬರ್ ಗೆ ಅಸಭ್ಯ ಸಂದೇಶ, ವಾರ್ನ್ ಮಾಡೋದು, ನಮ್ಮ ಸಿನಿಮಾಗೆ ತೊಂದರೆ ಕೊಡೋದು ನಿಲ್ಲಿಸಿ. ನಿಮಗೂ ಒಳ್ಳೆದಾಗ್ಲಿ.' ಎಂದು ಬೆದರಿಕೆ ಹಾಕುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.

    English summary
    Threat calls to Actor Pratham after post about KG and DG Halli riots.
    Monday, August 17, 2020, 14:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X