ಬಿಗ್ ಬಾಸ್ ರೂಪೇಶ್ ಶೆಟ್ಟಿಗೆ ಬೆದರಿಕೆ: ಪೊಲೀಸರ‌ ಮೊರೆ ಹೋದ ರೂಪೇಶ್ ಕುಟುಂಬ

ಸಾಮಾಜಿಕ ಜಾಲತಾಣಗಳಲ್ಲಿ, ಕನ್ನಡ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಯವರಿಗೆ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಹಿನ್ನೆಲೆಯಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೂಪೇಶ್ ಶೆಟ್ಟಿಯವರು ಬಿಗ್ ಬಾಸ್ ನಲ್ಲಿ ನೀಡಿರುವ ಕೆಲವೊಂದು ಹೇಳಿಕೆಗಳನ್ನು ಇರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಅಲ್ಲದೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ರೂಪೇಶ್ ಶೆಟ್ಟಿ ಮನೆಯವರು ಪೊಲೀಸ್ ದೂರು ದಾಖಲಿಸಿದ್ದಾರೆ.

ಅಲ್ಲದೇ ಬಿಗ್ ಬಾಸ್ ನಿಂದ‌ ಎಲಿಮಿನೇಟ್ ಆದ ಸ್ಪರ್ಧಿ ಸಾನಿಯಾ ಜೊತೆ ರೂಪೇಶ್ ಸ್ನೇಹದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಲಾಗುತ್ತಿದ್ದು, ಕಮೆಂಟ್ ಮತ್ತು ಟ್ರೋಲ್‌ ಮಾಡುತ್ತಿರುವವರ ಮೇಲೆಯೂ ಕ್ರಮ ಕೈಗೊಳ್ಳುವಂತೆ ರೂಪೇಶ್ ಶೆಟ್ಟಿ ಕುಟುಂಬ ಪೊಲೀಸರಿಗೆ ಮನವಿ ಮಾಡಿದೆ.

ಪೊಲೀಸ್ ಕಮೀಷನರ್ ಶಶಿಕುಮಾರ್ ಪ್ರತಿಕ್ರಿಯೆ

ಪೊಲೀಸ್ ಕಮೀಷನರ್ ಶಶಿಕುಮಾರ್ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌. ಕುಟುಂಬದವರ ದೂರಿನ ಅನ್ವಯ ಪ್ರಸ್ತುತ ಎನ್‌ಸಿಆರ್‌ ದಾಖಲಿಸಿಕೊಂಡಿದ್ದೇವೆ, ನ್ಯಾಯಾಲಯದ ಅನುಮತಿಯಂತೆ ಮುಂದೆ ತನಿಖೆ ನಡೆಸಲಿದ್ದೇವೆ ಎಂದಿದ್ದಾರೆ. ಸೆನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎನ್‌ಸಿಆರ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತುಳು ಪ್ರೇಮಿಗಳ ಅಸಮಾಧಾನ

ತುಳು ಪ್ರೇಮಿಗಳ ಅಸಮಾಧಾನ

ರೂಪೇಶ್ ಶೆಟ್ಟಿ ಇತ್ತೇಚೆಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತಾಯಿಯ ಬಗ್ಗೆ ಮಾತನಾಡುವ ಸಂಧರ್ಭದಲ್ಲಿ ನಾನು ಗಡಿನಾಡ ಕನ್ನಡಿಗ ಎಂದು ಹೇಳಿದ್ದರು. ಕರಾವಳಿಯ ಯುವಕ ನೀಡಿದ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ ಏರ್ಪಟ್ಟಿತ್ತು. ರೂಪೇಶ್ ಶೆಟ್ಟಿಯ ಈ ಹೇಳಿಕೆ ತುಳು ಪ್ರೇಮಿಗಳ ಅಸಮಾಧಾನಕ್ಕೆ‌ ಕಾರಣವಾಗಿತ್ತು.

ತುಳುನಾಡಿಗ ಎಂದಿಲ್ಲದೇ ಇರುವುದಕ್ಕೆ ಅಸಮಾಧಾನ

ತುಳುನಾಡಿಗ ಎಂದಿಲ್ಲದೇ ಇರುವುದಕ್ಕೆ ಅಸಮಾಧಾನ

ತುಳುನಾಡಿನಲ್ಲಿ ಹೆಸರು ಗಳಿಸಿ ಇದೀಗ ಗಡಿನಾಡ ಕನ್ನಡಿಗ ಅಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಹಲವು ಜನ, ಮಾತೃ ಭಾಷೆ ತುಳುವಿನ ಬಗ್ಗೆ ರೂಪೇಶ್ ಶೆಟ್ಟಿ ಮಾತನಾಡಿಲ್ಲ, ಕನ್ನಡ ಚಿತ್ರೋದ್ಯಮದಲ್ಲಿ ಅವಕಾಶಕ್ಕಾಗಿ ರೂಪೇಶ್ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ ಅಂತಾ ಕಮೆಂಟ್ ಹಾಕಿದ್ದರು. ಇದರ ನಡುವೆಯೂ ರೂಪೇಶ್ ಬೆಂಬಲಕ್ಕೆ ಹಲವು ತುಳುವರು ನಿಂತಿದ್ದರು. ಕೆಲವರಿಂದ ಸಾಮಾಜಿಕ ಜಾಲತಾಣದಲ್ಲಿ ರೂಪೇಶ್ ಶೆಟ್ಟಿಗೆ ಬೆದರಿಕೆ ಹಾಕಲಾಗಿದ್ದು, ರೂಪೇಶ್ ಪೋಷಕರಿಗೂ ಕೆಲವರಿಂದ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಬೆದರಿಕೆ ಹಿನ್ನಲೆಯಲ್ಲಿ ರೂಪೇಶ್ ಪೋಷಕರು ದೂರು ನೀಡಿದ್ದು, ಸೈಬರ್ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತುಳು ಸಿನಿಮಾಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ

ತುಳು ಸಿನಿಮಾಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ ತುಳು ಸಿನಿಮಾಗಳಲ್ಲಿ ನಟಿಸಿರುವ ನಟ, ಜೊತೆಗೆ ರೇಡಿಯೋ ಜಾಕಿ ಆಗಿ ಸಹ ಹೆಸರು ಮಾಡಿದ್ದಾರೆ. ಆದರೆ ಅವರು ತಾವು ತುಳುನಾಡಿಗ ಎಂದು ಹೇಳಿಕೊಳ್ಳುವ ಬದಲು ಕನ್ನಡಿಗ ಎಂದು ಹೇಳಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ರೂಪೇಶ್ ಶೆಟ್ಟಿ ಈಗಾಗಲೇ ಒಟಿಟಿ ಬಿಗ್‌ಬಾಸ್‌ನಲ್ಲಿ ಚಾಂಪಿಯನ್ ಎನಿಸಿಕೊಂಡು ಈಗ ಟಿವಿ ಸೀಸನ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ರೂಪೇಶ್‌ರ ಮೆಚ್ಚಿನ ಸಹಸ್ಪರ್ಧಿ ಸಾನ್ಯಾ ಐಯ್ಯರ್ ಕಳೆದ ವಾರವಷ್ಟೆ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

More from Filmibeat

English summary
Threat to Bigg Boss contestant Roopesh Shetty on social media. Family gave complaint.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X