»   » ಬಹುಭಾಷಾ ನಟ ವಿನೋದ ಆಳ್ವಾ, ಇದೀಗ ಪೊಲೀಸರ ಅತಿಥಿ..!

ಬಹುಭಾಷಾ ನಟ ವಿನೋದ ಆಳ್ವಾ, ಇದೀಗ ಪೊಲೀಸರ ಅತಿಥಿ..!

Posted By:
Subscribe to Filmibeat Kannada

ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಹುಭಾಷಾ ನಟ ವಿನೋದ್ ಆಳ್ವಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ವಿನೋದ್ ಆಳ್ವಾ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ನಟ ವಿನೋದ್ ಆಳ್ವಾ ಅವರ ನಿಕಟವರ್ತಿಯಾಗಿದ್ದ ಹಾಗೂ ಅವರ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಸಚ್ಚಿದಾನಂದ ಎಂಬುವವರಿಗೆ ವಿನೋದ್ ಅವರು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Threatening: Multilingual Actor Vinod Alwa arrest

ಈ ಹಿನ್ನಲೆಯಲ್ಲಿ ಸಚ್ಚಿದಾನಂದ ಅವರು ಸಂಪ್ಯಾ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಬಹುಭಾಷಾ ನಟ ವಿನೋದ ಆಳ್ವಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡ ತಮಿಳು, ತೆಲುಗು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನಟ ವಿನೋದ್ ಆಳ್ವಾ ಅವರು 'ಮಾಫಿಯಾ', 'ನೀಲಾಂಬರಿ', 'ಅಮರ್ ಅಕ್ಬರ್ ಅಂತೋಣಿ', 'ಭೂಮಿ ತಾಯಾಣೆ', 'ತಾಳಿಗಾಗಿ' ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದೀಗ ನಟ ವಿನೋದ್ ಆಳ್ವಾ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ದ.ಕ ಜಿಲ್ಲಾ ಎಎಸ್ಪಿ ಖುಷ್ವಂತ್ ಅವರ ನೇತೃತ್ವದಲ್ಲಿ ನಟ ವಿನೋದ್ ಆಳ್ವಾ ಅವರ ವಿಚಾರಣೆ ನಡೆಯುತ್ತಿದೆ.

English summary
Threatening: Multilingual Actor Vinod Alwa arrest by Puttur police.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X