ಸ್ಯಾಂಡಲ್‌ವುಡ್ ಡ್ರಗ್ಸ್ ನಂಟು ಪ್ರಕರಣ: ಮತ್ತೆ ಮೂವರ ಬಂಧನ
ಸ್ಯಾಂಡಲ್‌ವುಡ್‌ನ ಕೆಲ ನಟ-ನಟಿಯರಿಗೆ ಡ್ರಗ್ಸ್ ನಂಟು ಪ್ರಕರಣದಲ್ಲಿ ಆರೋಪಿತರ ಸಂಖ್ಯೆ ದಿನೇ-ದಿನೇ ಏರಿಕೆಯಾಗುತ್ತಲೇ ಇದೆ.
ನಟಿ ರಾಗಿಣಿ, ಸಂಜನಾ ಸೇರಿ ಈಗಾಗಲೇ 14 ಕ್ಕೂ ಹೆಚ್ಚು ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಹಲವರನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಐದನೇ ಆರೋಪಿ ಆಗಿರುವ ವೈಭವ್ ಜೈನ್ ಸೇರಿದಂತೆ ಇದೇ ಪ್ರಕರಣಕ್ಕೆ ಸೇರಿದ ಇನ್ನೂ ಇಬ್ಬರು ಹೊಸ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಬಂಧಿತವಾಗಿರುವವರು ನೀಡಿರುವ ಹೇಳಿಕೆ ಆಧಾರದಲ್ಲಿ ಇವರನ್ನು ಬಂಧಿಸಲಾಗಿದೆ.

ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಪ್ರತೀಕ್
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಪ್ರತೀಕ್ ಶೆಟ್ಟಿ ಹಾಗೂ ಹರಿಯಣ ಮೂಲದ ಆದಿತ್ಯ ಅಗರ್ವಾಲ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‌ವೇರ್ ಸಂಸ್ಥೆ ಉದ್ಯೋಗಿ ಆಗದ್ದ ಪ್ರತೀಕ್ ಶೆಟ್ಟಿ ಉದ್ಯೋಗ ಬಿಟ್ಟು ಪೂರ್ಣಪ್ರಮಾಣದ ಡ್ರಗ್ ಪೆಡ್ಲಿಂಗ್‌ಗೆ ಇಳಿದಿದ್ದ ಎನ್ನಲಾಗಿದೆ.

ರಾಗಿಣಿ ಆಪ್ತನಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ಪ್ರತೀಕ್
ಪ್ರತೀಕ್ ಶೆಟ್ಟಿ, ರಾಗಿಣಿಯ ಆಪ್ತ ರವಿಶಂಕರ್‌ಗೆ ಆಪ್ತನಾಗಿದ್ದು, ರವಿಶಂಕರ್‌ಗೆ ಹಲವು ಬಾರಿ ಡ್ರಗ್ಸ್ ಮಾರಾಟ ಮಾಡಿದ್ದಾನಂತೆ. ಈತನನ್ನು 2018 ರಲ್ಲಿಯೇ ಬಂಧಿಸಲಾಗಿತ್ತು, ಜಾಮೀನಿನ ಮೇಲೆ ಬಿಡುಗಡೆ ಆದಮೇಲೆಯೂ ಹಳೆಯ ಚಾಳಿ ಮುಂದುವರೆಸಿದ್ದಾನೆ. ಈತನಿಂದ ಇನ್ನಷ್ಟು ಸೆಲೆಬ್ರಿಟಿಗಳ ಹೆಸರು ಹೊರಬರುವ ಸಂಭವ ಇದೆ.

ಕೊರೊನಾ ಕಾರಣದಿಂದ ಬಂಧಿಸಿರಲಿಲ್ಲ
ಪ್ರಕರಣದಲ್ಲಿ ಐದನೇ ಆರೋಪಿ ವೈಭವ್ ಜೈನ್ ನ ಬಂಧನ ಈ ಮೊದಲೇ ಆಗಬೇಕಿತ್ತು, 'ನನಗೆ ಕೊರೊನಾ ಆಗಿದೆ ಮನೆಯಲ್ಲಿ ಐಸೋಲೇಷನ್‌ನಲ್ಲಿದ್ದೀನಿ' ಎಂದು ವೈಭವ್ ಹೇಳಿದ ಕಾರಣ ಆತನನ್ನು ಬಂಧಿಸದೆ ಕೇವಲ ನಿಗಾ ಇಡಲಾಗಿತ್ತು.

ನಿರೀಕ್ಷಣಾ ಜಾಮೀನಿಗೆ ಯತ್ನಿಸಿದ್ದ ವೈಭವ್
ಈ ಸಮಯದಲ್ಲಿ ತನ್ನ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಯತ್ನಿಸಿದ್ದ ವೈಭವ್ ಜೈನ್, ಪೊಲೀಸರ ಕಣ್ಣುತಪ್ಪಿಸಿ ಪರಾರಿ ಆಗಲು ಸಹ ಯತ್ನಿಸಿದ್ದ. ಈ ವಿಷಯ ಅರಿತ ಪೊಲೀಸರು ನಿನ್ನೆ ರಾತ್ರಿ ಆತನನ್ನು ಬಂಧಿಸಿದ್ದಾರೆ.
Recommended Video

ಹಲವರ ವಿರುದ್ಧ ಎಫ್‌ಐಆರ್ ದಾಖಲು
ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ, ಸಂಜನಾ , ಶಿವಪ್ರಕಾಶ್, ರವಿಶಂಕರ್, ರಾಹುಲ್, ವೀರೇನ್ ಖನ್ನಾ, ಪ್ರಶಾಂತ್ ರಾಂಕಾ, ವೈಭವ್ ಜೈನ್, ಆದಿತ್ಯ ಆಳ್ವಾ, ಲೂಮ್ ಪೆಪ್ಪರ್ ಸೈಮನ್, ಅಶ್ವಿನಿ ಅಲಿಯಾಸ್ ಬೂಗಿ, ಅಭಿಸ್ವಾಮಿ, ರಾಹುಲ್ ತೊನ್ಸೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಲವರನ್ನು ಬಂಧಿಸಲಾಗಿದೆ.


Click it and Unblock the Notifications











