ಕನ್ನಡದ ಈ ಚಿತ್ರದಲ್ಲಿ ಅಜ್ಜಿ, ಮಗಳು, ಮೊಮ್ಮಗಳು ಒಟ್ಟಿಗೆ ಅಭಿನಯಿಸಿದ್ದಾರೆ

Recommended Video

Devaki Kannada Movie: ಅಮ್ಮ, ಮಗಳು ನಟನೆಯ ಸಿನೆಮಾ ದೇವಕಿ | FILMIBEAT KANNADA

ಕನ್ನಡ ಚಿತ್ರವೊಂದರಲ್ಲಿ ಅಜ್ಜಿ, ಮಗಳು ಮತ್ತು ಮೊಮ್ಮಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸಾಕಷ್ಟು ಚಿತ್ರಗಳಲ್ಲಿ ತಾಯಿ-ಮಗಳು, ಅಪ್ಪ-ಮಗ, ಅಪ್ಪ-ಮಗಳು ಒಟ್ಟಿಗೆ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಆದ್ರೆ ಈ ಸಿನಿಮಾದಲ್ಲಿ ಮಾತ್ರ ಮೂರು ಜನರೇಶನ್ ನವರು ಒಂದೇ ಫ್ರೇಮ್ ನಲ್ಲಿ ಸೆರೆಸಿಕ್ಕಿದ್ದಾರೆ.

ಹೌದು, ಅದು ಮತ್ಯಾವ ಸಿನಿಮಾವಲ್ಲ. ಪ್ರಿಯಾಂಕಾ ಉಪೇಂದ್ರ ಅಭಿನಯದ 'ದೇವಕಿ' ಚಿತ್ರ. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮಗಳು ಐಶ್ವರ್ಯ ಅಭಿನಯಿಸಿರುವ ವಿಚಾರ ಎಲ್ಲರಿಗೂ ಗೊತ್ತಿತ್ತು. ಅಮ್ಮನ ಸಿನಿಮಾ ಮೂಲಕವೆ ಮಗಳು ಐಶ್ವರ್ಯ ಮೊದಲ ಬಾರಿಗೆ ಬಣ್ಣ ಹಚ್ಚಿರುವುದು ವಿಶೇಷ. ಇದರ ಜೊತೆಗೀಗ ಮತ್ತೊಂದು ಇಂಟ್ರಸ್ಟಿಂಗ್ ವಿಚಾರವನ್ನು ಹೊರಹಾಕಿದೆ ಚಿತ್ರತಂಡ.

ಪ್ರಿಯಾಂಕಾ ಉಪೇಂದ್ರ ಮತ್ತು ಮಗಳು ಐಶ್ವರ್ಯ ಜೊತೆ ಪ್ರಿಯಾಂಕಾ ತಾಯಿ ಕೂಡ ಅಭಿನಯಿಸಿದ್ದಾರೆ. 'ದೇವಕಿ' ಚಿತ್ರದ ಮೂಲಕ ಮೂವರು ಒಂದೆ ಫ್ರೇಮಿನಲ್ಲಿ ಸೆರೆಯಾಗಿದ್ದಾರೆ. 'ದೇವಕಿ' ಸಿನಿಮಾ ಬಹುತೇಕ ಭಾಗ ಕೋಲ್ಕತದಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರಿಯಾಂಕಾ ಕೂಡ ಮೂಲತಹ ಕೋಲ್ಕತದವರು. ಅವರ ತಾಯಿ ಅಲ್ಲಿಯವರೆ ಆದ್ದರಿಂದ ಈ ಸಿನಿಮಾದಲ್ಲಿ ಬಣ್ಣಹಚ್ಚುವ ಮೂಲಕ ಮೊದಲ ಬಾರಿಗೆ ಕ್ಯಾಮರಾ ಫೇಸ್ ಮಾಡಿದ್ದಾರೆ.

Three Generations of Priyanka Upendra for the first time acted together in Devaki film

ಪ್ರಿಯಾಂಕಾ ಮತ್ತು ಅವರ ತಾಯಿ ಜೊತೆಗೆ ಮಗಳು ಒಟ್ಟಿಗಿರುವ ಚಿತ್ರದ ಮೇಕಿಂಗ್ ಫೋಟೋವೊಂದನ್ನು ರಿಲೀಸ್ ಮಾಡಿದೆ ಚಿತ್ರತಂಡ. ಅಂದ್ಹಾಗೆ ಸಾಕಷ್ಟು ವಿಚಾರಗಳಿಂದ ಗಮನ ಸೆಳೆದಿರುವ 'ದೇವಕಿ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ.

ಈಗಾಗೆಲ ಟ್ರೈಲರ್ ಮೂಲಕ ಚಿತ್ರಾಭಿಮಾನಿಗಳಲ್ಲಿ ಕುತಹಲ ಹೆಚ್ಚಿಸಿರುವ 'ದೇವಕಿ' ಮುಂದಿನ ತಿಂಗಳು 5ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರಕ್ಕೆ 'ಮಮ್ಮಿ' ಖ್ಯಾತಿಯ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಗಳಲ್ಲಿ ಸೌಂಡ್ ಪ್ರಮುಖವಾಗಿದೆ. ನೋಬಿನ್ ಪೌಲ್ ಸಂಗೀತ, ಹೆಚ್ ಸಿ ವೇಣು ಕ್ಯಾಮರಾ ಸಿನಿಮಾಗೆ ಬಲ ತುಂಬಿದೆ. ಮದನ್ ಬೆಳ್ಳಿಸಾಲು ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ.

More from Filmibeat

English summary
Three Generations of Priyanka Upendra for the first time acted together in Devaki film. This film is directed by Lohith.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X