For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ 'ಅಬ್ಬರ'ಕ್ಕೆ ಮೂವರು ನಾಯಕಿಯರು

  |

  ಡೈನಾಮಿಕ್ ಪ್ರಿನ್ಸ್ ದೇವರಾಜ್ ನಟಿಸುತ್ತಿರುವ 'ಅಬ್ಬರ' ಸಿನಿಮಾ ಚಿತ್ರಕ್ಕೆ ಮೂವರು ನಾಯಕಿಯರು ಎಂಬ ವಿಚಾರ ಹೊರಬಿದ್ದಿದೆ. ಇತ್ತೀಚಿಗಷ್ಟೆ ಅಬ್ಬರ ಸಿನಿಮಾದ ಟೈಟಲ್ ಅನಾವರಣಗೊಂಡಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದರು.

  ಇದೀಗ, ಪ್ರಜ್ವಲ್ ಗೆ ಜೋಡಿಯಾಗಿ ಮೂವರು ನಟಿಮಣಿಯರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಇಂಟರೆಸ್ಟಿಂಗ್ ವಿಷಯ ತಿಳಿದು ಬಂದಿದೆ.

  ಸ್ಯಾಂಡಲ್‌ವುಡ್‌ನಲ್ಲಿ 'ಅಬ್ಬರ' ಶುರು ಮಾಡಿದ ಡೈನಾಮಿಕ್ ಪ್ರಿನ್ಸ್ ಸ್ಯಾಂಡಲ್‌ವುಡ್‌ನಲ್ಲಿ 'ಅಬ್ಬರ' ಶುರು ಮಾಡಿದ ಡೈನಾಮಿಕ್ ಪ್ರಿನ್ಸ್

  ನಟಿ ಲೇಖ ಚಂದ್ರ, ನಿಮಿಕಾ ರತ್ನಾಕರ್ ಹಾಗೂ ರಾಜಶ್ರೀ ಪೊನ್ನಪ್ಪ ಈ ಚಿತ್ರದಲ್ಲಿ ಪ್ರಮುಖ ನಾಯಕಿಯರಾಗಿ ನಟಿಸುತ್ತಿದ್ದಾರೆ.

  ಈ ಚಿತ್ರವನ್ನು ಕೆ ರಾಮ್ ನಾರಾಯಣ್ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಅಂದ್ಹಾಗೆ, ಈ ಸಿನಿಮಾದಲ್ಲಿ ಪ್ರಜ್ವಲ್ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

  ನಿರ್ದೇಶಕ ರಾಮ್ ನಾರಾಯಣ್ ಕುರಿತು ಹೇಳಬೇಕಾದರೆ, ಪ್ರಭಾಕರ್ ಮಗ ವಿನೋದ್ ಪ್ರಭಾಕರ್ ಜೊತೆ 'ಟೈಸನ್' ಮತ್ತು 'ಕ್ರ್ಯಾಕ್' ಎಂಬ ಎರಡು ಚಿತ್ರ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನಟನೆಯ ಕೊನೆ ಸಿನಿಮಾ 'ರಾಜಮಾರ್ತಂಡ' ಚಿತ್ರಕ್ಕೂ ಇವರೇ ಆಕ್ಷನ್ ಕಟ್ ಹೇಳಿದ್ದಾರೆ.

  ಅದು ನನಗೆ ಬಹಳ ಮುಖ್ಯವಾದ ದಿನ ಎಂದ ಶಕೀಲ | Shakeela | Filmibeat Kannada

  ಪ್ರಜ್ವಲ್ ದೇವರಾಜ್ ಸದ್ಯ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾ ಮಾಡ್ತಿದ್ದು, ಅದರ ಜೊತೆಗೆ 'ಅರ್ಜುನ್ ಗೌಡ' ಹಾಗೂ 'ವೀರಂ' ಎಂಬ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ, ಇದರ ಜೊತೆಗೆ ಅಬ್ಬರ ಆರಂಭವಾಗಿದೆ.

  English summary
  Three heroines for Prajwal Devaraj in Abbara. Lekha Chandra, Nimika Ratnakar and Rajshri Ponnappa. Film directed by K Ramnarayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X