For Quick Alerts
  ALLOW NOTIFICATIONS  
  For Daily Alerts

  ಕನ್ನಡ ಇಂಡಸ್ಟ್ರಿಯಲ್ಲಿ ಮೂವರ ಬಳಿ ದುಬಾರಿ ಲಂಬೋರ್ಗಿನಿ ಕಾರ್ ಇದೆ.!

  |
  ಕನ್ನಡ ಇಂಡಸ್ಟ್ರಿಯ ಈ ಮೂರು ಸ್ಟಾರ್ ಗಳು ಲ್ಯಾಂಬೋರ್ಗಿನಿ ಕಾರ್ ಒಡೆಯರು |FILMIBEAT KANNADA

  ಆಡಿ, ಜಾಗ್ವಾರ್, ರೇಂಜ್ ರೋವರ್ ಅಂತಹ ದುಬಾರಿ ಕಾರುಗಳಿದ್ದರು, ಇತ್ತೀಚಿನ ದಿನಗಳಲ್ಲಿ ಲಂಬೋರ್ಗಿನಿ ಕಾರುಗಳ ಸದ್ದು ಸ್ವಲ್ಪ ಹೆಚ್ಚಾಗುತ್ತಿದೆ. ಇಟಲಿ ಮೂಲದ ಈ ಕಾರು ಭಾರತದಲ್ಲೂ ಸಖತ್ ಹಬಾ ಎಬ್ಬಿಸಿದೆ.

  ಲಂಬೋರ್ಗಿನಿ ಕಾರಿನಲ್ಲಿ ಒಟ್ಟು ಮೂರು ಮಾಡೆಲ್ ಗಳಿವೆ. ಮೂರು ಮಾಡೆಲ್ ಗಳಿಗೂ ಪ್ರತ್ಯೇಕ ಬೆಲೆ ಇದೆ. ಪೆಟ್ರೋಲ್ ಕಾರು ಇದಾಗಿದ್ದು, ಹಲವು ವಿಶೇಷತೆಗಳನ್ನ ಹೊಂದಿದೆ. ಇಂತಹ ವಿಶೇಷ ಕಾರು ಈಗ ಕನ್ನಡ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದೆ.

  ಪ್ರೀತಿಯ ಮಡದಿಗೆ ದುಬಾರಿ ಲ್ಯಾಂಬೋರ್ಗಿನಿ ಕಾರ್ ಗಿಫ್ಟ್ ಮಾಡಿದ ಪುನೀತ್

  ಇತ್ತೀಚಿಗಷ್ಟೆ ನಟ ಪುನೀತ್ ರಾಜ್ ಕುಮಾರ್ ಲಂಬೋರ್ಗಿನಿ ಕಾರು ಖರೀದಿಸಿದ್ದಾರೆ. ಇದಕ್ಕೂ ಮುಂಚೆ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಇಬ್ಬರ ಬಳಿ ಲಂಬೋರ್ಗಿನಿ ಕಾರುಗಳಿವೆ. ಅದು ಯಾರ ಬಳಿ ಇದೆ ಮತ್ತು ಯಾವ ಮಾಡೆಲ್ ಇದೆ? ಮುಂದೆ ಓದಿ.....

  ಪುನೀತ್ ಬಳಿ ಇರು ಕಾರು ಯಾವುದು

  ಪುನೀತ್ ಬಳಿ ಇರು ಕಾರು ಯಾವುದು

  ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಖರೀದಿ ಮಾಡಿರುವ ಕಾರು ಲಂಬೋರ್ಗಿನಿ ಉರುಸ್. ಶೋ ರೂಂ ಬೆಲೆ 3 ಕೋಟಿ ಇದೆ. ನೀಲಿ ಬಣ್ಣದ ಕಾರನ್ನ ಅಪ್ಪು ಖರೀದಿಸಿದ್ದು, ಡೋರ್ ಪಕ್ಕಕ್ಕೆ ತೆರೆದುಕೊಳ್ಳುತ್ತೆ. ಈ ಕಾರಿನಲ್ಲಿ ಡೋರ್ ಓಪನ್ ಮಾಡುವುದರಿಂದ ಹಿಡಿದು ಗೇರ್, ವಿಂಡೋ ಎಲ್ಲವೂ ಆಟೋಮೆಟಿಕ್ ನಿಂದ ಕೂಡಿದೆ.

  ದರ್ಶನ್ ಬಳಿಯೂ ಲಂಬೋರ್ಗಿನಿ ಇದೆ

  ದರ್ಶನ್ ಬಳಿಯೂ ಲಂಬೋರ್ಗಿನಿ ಇದೆ

  ಇದಕ್ಕೂ ಮುಂಚೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೂಡ ಲಂಬೋರ್ಗಿನಿ ಕಾರು ಖರೀದಿಸಿದ್ದರು. ಬಿಳಿ ಬಣ್ಣದ ಕಾರು ಡಿ ಬಾಸ್ ಬಳಿ ಇದ್ದು, ಇದು ಲ್ಯಾಂಬೋರ್ಗಿನಿ ಅವೆಂಟೆಡರ್ ಮಾಡಲ್ ಆಗಿದೆ. ಈ ಕಾರಿನ ಬೆಲೆ 5 ಕೋಟಿ. ಈ ಕಾರಿನಲ್ಲೂ ಬಹುತೇಕ ಎಲ್ಲ ಆಟೋಮೆಟಿಕ್.

  ಡಿ ಬಾಸ್ ಖರೀದಿ ಮಾಡಿರುವ ಕಾರ್ ನ ಸ್ಪೆಷಾಲಿಟಿಸ್ ಇಲ್ಲಿದೆ

  ಸಿಎಂ ಪುತ್ರನ ಬಳಿಯೂ ಇದೆ

  ಸಿಎಂ ಪುತ್ರನ ಬಳಿಯೂ ಇದೆ

  ಈ ಲಂಬೋರ್ಗಿನಿ ಕಾರು ಸ್ಯಾಂಡಲ್ ವುಡ್ ಗೆ ಪರಿಚಿಯಿಸಿದ ಖ್ಯಾತಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರಿಗೆ ಸಲ್ಲುತ್ತೆ. ಯಾಕಂದ್ರೆ, ಲಂಬೋರ್ಗಿನಿ ಮಾಡೆಲ್ ಬಳಸಿದ್ದು ಇವರೇ. ಕೆಂಪು ಬಣ್ಣದ ಲಂಬೋರ್ಗಿನಿ ಅವೆಂಟೆಡರ್ ಕಾರು ನಿಖಿಲ್ ಬಳಿ ಇತ್ತು.

  ಇತ್ತೀಚಿಗೆ ದರ್ಶನ್ ಖರೀದಿಸಿದ್ದ ದುಬಾರಿ ಕಾರ್ ಯಾವುದು.?

  ಇಂಡಸ್ಟ್ರಿಯಲ್ಲಿ ಹೆಚ್ಚುತ್ತಿದೆ ಲಂಬೋರ್ಗಿನಿ

  ಇಂಡಸ್ಟ್ರಿಯಲ್ಲಿ ಹೆಚ್ಚುತ್ತಿದೆ ಲಂಬೋರ್ಗಿನಿ

  ನಿಖಿಲ್ ಕುಮಾರ್, ದರ್ಶನ್, ಪುನೀತ್ ರಾಜ್ ಕುಮಾರ್ ಈಗ ಲಂಬೋರ್ಗಿನಿಗೆ ಒಡೆಯರಾಗಿದ್ದಾರೆ. ಬಹುಶಃ ಕಾರು ಕ್ರೇಜ್ ಇರುವ ಮತ್ತೆ ಕೆಲವು ಸ್ಟಾರ್ ಗಳು ಈ ಕಾರಿಗೆ ಮರುಳಾಗಿ ಕೊಂಡುಕೊಂಡರು ಅಚ್ಚರಿಯಿಲ್ಲ. ಬಟ್, ಸದ್ಯಕ್ಕೆ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಲಂಬೋರ್ಗಿನಿ ಟಾಕ್ ಆಫ್ ದಿ ಟೌನ್ ಆಗಿದೆ.

  'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.!

  English summary
  Kannada Actor Puneeth Rajkumar Purchase Lamborghini urus car and he gifted to his wife. so far three sandalwood stars have Lamborghini car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X