ಚುನಾವಣೆಯಲ್ಲಿ ಹುಚ್ಚ ವೆಂಕಟ್ ಸೋಲಲು ಈ 3 ಕಾರಣ ಇರಬಹುದು.!

By Bharath Kumar

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಟ-ನಿರ್ದೇಶಕ ಹುಚ್ಚ ವೆಂಕಟ್ ಸ್ಪರ್ಧೆ ಮಾಡಿ, ಹೀನಾಯ ಸೋಲು ಕಂಡಿದ್ದಾರೆ. ಈ ಸೋಲು ನಿರೀಕ್ಷೀತ. ಆದ್ರೆ, ವೆಂಕಟ್ ಸೋಲಲು ಕೆಲವು ಕಾರಣಗಳು ಕಣ್ಮುಂದೆ ಇವೆ.

ವೆಂಕಟ್ ಚುನಾವಣೆ ಸ್ಪರ್ಧೆ ಮಾಡಿದಾಗ, ಎಲ್ಲರಿಗೂ ಶಾಕ್ ಆಗಿತ್ತು. ಆದ್ರೂ ಮನಸ್ಸಿನಲ್ಲೊಂದು ಭಾವನೆ. ಒಂದು ವೇಳೆ ವೆಂಕಟ್ ಗೆದ್ದು ಬಿಟ್ಟರೇ...! ಎಂ.ಎಲ್.ಎ ಆಗ್ಬಿಟ್ರೆ....! ಅಂದುಕೊಂಡವರು ಹೆಚ್ಚಿದ್ದರು.

ಬಹುಶಃ ಹುಚ್ಚ ವೆಂಕಟ್ ಗೆಲ್ಲುವುದು ದೂರದ ಮಾತಾಗಿತ್ತು. ಆದ್ರೆ, ಈ ರಾಜಕಾರಣಿಗಳ ಸಹವಾಸ ಸಾಕು ಎಂಬ ಕೋಪ, ಬೇಜಾರಿನಲ್ಲಿ ವೆಂಕಟ್ ಗೆ ವೋಟ್ ಹಾಕ್ಬಿಟ್ರೆ.? ಎಂಬ ಅನುಮಾನನೂ ಕಾಡುತ್ತಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಆದ್ರೆ, ಸುಮಾರು 764ಕ್ಕೂ ಹೆಚ್ಚು ಮತಗಳನ್ನ ಪಡೆಯುವ ಮೂಲಕ ಮತ್ತೊಂದು ರೀತಿಯಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇದರ ನಡುವೆ ಹುಚ್ಚ ವೆಂಕಟ್ ಸೋಲಲು ಪ್ರಮುಖ ಕಾರಣಗಳನ್ನ ನೋಡುವುದಾರೇ.....

ಗಂಭೀರವಾಗಿ ಪರಿಗಣಿಸಲೇ ಇಲ್ಲ

ಗಂಭೀರವಾಗಿ ಪರಿಗಣಿಸಲೇ ಇಲ್ಲ

ವೆಂಕಟ್ ಗೆ ಹೆಚ್ಚು ಮತಗಳು ಬರದಿರಲು ಅವರ ಸ್ವಭಾವವೇ ಪ್ರಮುಖ ಕಾರಣ. ಚಿಕ್ಕ ಚಿಕ್ಕ ವಿಷ್ಯಗಳಿಗೆ ದೊಡ್ಡ ಚರ್ಚೆ ಮಾಡಿ, ಗಲಾಟೆ ಮಾಡಿ, ಕೂಗಾಡಿ, ವಿವಾದ ಮಾಡಿಕೊಳ್ಳುವ ಸ್ವಭಾವ. ನನಗೆ ವರ್ಲ್ಡ್ ವೈಡ್ ಅಭಿಮಾನಿಗಳಿದ್ದಾರೆ, ಒಬಾಮ ನನ್ ಫ್ರೆಂಡ್ ಎಂಬ ಮಾತುಗಳು. ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇಲ್ಲವಾಗಿದ್ದು...ಇನ್ನು ವೆಂಕಟ್ ಅವರ ಸುದ್ದಿಗಳು, ವಿವಾದಗಳು ನೋಡಿದ್ದ ಜನ ಅವರನ್ನ ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಪ್ರಚಾರ ಇಲ್ಲ, ಭಾಷಣ ಇಲ್ಲ, ಪ್ರಣಾಳಿಕೆನೂ ಇಲ್ಲ

ಪ್ರಚಾರ ಇಲ್ಲ, ಭಾಷಣ ಇಲ್ಲ, ಪ್ರಣಾಳಿಕೆನೂ ಇಲ್ಲ

ಚುನಾವಣೆ ಅಂದ್ಮೇಲೆ ಕನಿಷ್ಟ ಪ್ರಚಾರ ಮಾಡಬೇಕಾಗುತ್ತೆ. ವೈಯಕ್ತಿಕ ಪರಿಚಯದ ಜೊತೆಗೆ ಅಭಿವೃದ್ದಿಯ ಅಂಶಗಳನ್ನ ಜನರ ಮುಂದೆ ಇಡಬೇಕಾಗುತ್ತೆ. ಇದನ್ನೆಲ್ಲ ಪ್ರಣಾಳಿಕೆ ರೂಪದಲ್ಲಿ ಬಹಿರಂಗಪಡಿಸುವುದು ವಾಡಿಕೆ. ಇಂತಹ ಯಾವುದೇ ಪ್ರಯತ್ನಕ್ಕೆ ವೆಂಕಟ್ ಕೈಹಾಕಲಿಲ್ಲ. ''ನಾನು ಪ್ರಚಾರ ಮಾಡಲ್ಲ, ವೋಟ್ ಕೇಳಲ್ಲ ನನ್ ಮಗಂದ್ ನಾನು ಗೆಲ್ಬೇಕಂದ್ರೆ ನನಗೆ ವೋಟ್ ಹಾಕಿ'' ಎಂದು ಘೋಷಣೆ ಮಾಡಿಕೊಂಡಿದ್ದರು ವೆಂಕಟ್. ಅಲ್ಲಿಗೆ ಜನರ ಬಳಿ ಹೋಗದೇ ಇದ್ದಿದ್ದು ಸೋಲಿಗೆ ಕಾರಣವಾಗಿರಬಹುದು.

ಆರ್.ಆರ್.ನಗರ ಫಲಿತಾಂಶ : 900ಕ್ಕೂ ಹೆಚ್ಚು ನೋಟಾ ಮತ!

ವೆಂಕಟ್ ಕಣದಲ್ಲಿದ್ದಾರೆ ಎಂಬುದು ನೆನಪಿಲ್ಲ

ವೆಂಕಟ್ ಕಣದಲ್ಲಿದ್ದಾರೆ ಎಂಬುದು ನೆನಪಿಲ್ಲ

ನಾಮಪತ್ರ ಸಲ್ಲಿಸಿ ಕಾಣೆಯಾಗಿದ್ದ ಹುಚ್ಚ ವೆಂಕಟ್, ಅದಾದ ಮೇಲೆ ಎಲ್ಲಿಯೂ ಕಾಣಿಸಲೇ ಇಲ್ಲ. ಹೀಗಾಗಿ, ಜನರು ವೆಂಕಟ್ ಅವರನ್ನ ಮರೆತೆ ಹೋದರು. ಈ ನಡುವೆ ನಾನು ಮದುವೆ ಆಗಿದ್ದೀನಿ ಎಂಬ ವದಂತಿ ಹಬ್ಬಿಸಿ ಪ್ರಚಾರ ಮಾಡಿಕೊಂಡ್ರು. ಈ ನಡುವೆ ರಾಜರಾಜೇಶ್ವರಿ ನಗರ ಚುನಾವಣೆ ಮುಂದಕ್ಕೆ ಹೋಯಿತು. ಆದರೂ, ವೆಂಕಟ್ ಕಾಣಿಸಿಕೊಳ್ಳಲೇ ಇಲ್ಲ. ಬಹುಶಃ ಜನರು ಕೂಡ ವೆಂಕಟ್ ಇದ್ದಾರೆ ಎಂಬುದನ್ನ ಮರೆತು ಹೋದರು.

'ಇದು ಮುನಿರತ್ನ ಗೆಲುವಲ್ಲ, ಸಿದ್ದರಾಮಯ್ಯ ಸರ್ಕಾರದ ಗೆಲುವು'

ಸೋತ ವೆಂಕಟ್ ಅಭಿಪ್ರಾಯವೇನು.?

ಸೋತ ವೆಂಕಟ್ ಅಭಿಪ್ರಾಯವೇನು.?

''ಇದು ನನ್ನ ಸೋಲಲ್ಲ. ಇದು ರಾಜರಾಜೇಶ್ವರಿ ನಗರ ಜನರ ಸೋಲು. ಅಲ್ಲಿ ರಾಜಕಾರಣಿಗಳು ಹೇಗೆ ಅಕ್ರಮ ಮಾಡ್ತಾರೆ ಎಂಬುದನ್ನ ನಾನು ಸಾಕ್ಷಿ ಸಮೇತ ಜನರ ಮುಂದೆ ಇಟ್ಟಿದ್ದೆ. ಆದ್ರೆ, ಕುಕ್ಕರ್, ದುಡ್ಡು ತಗೊಂಡು ಅವರಿಗೆ ವೋಟ್ ಹಾಕಿದ್ದಾರೆ. ಪರವಾಗಿಲ್ಲ, ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡ್ತೀನಿ. ಒಂದು ದಿನ ಪ್ರಧಾನಮಂತ್ರಿ ಆಗ್ತೀನಿ'' ಎಂದು ತಿಳಿಸಿದ್ದಾರೆ.

More from Filmibeat

English summary
Rajarajeshwari Nagar assembly constituency independent candidate Huccha Venkat get 764 votes. here is the Three reasons for Hachka Venkat's defeat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X