For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಭೀತಿಯಲ್ಲೂ ಧೂಳೆಬ್ಬಿಸಲು ಸಜ್ಜಾದ ದಕ್ಷಿಣ ಚಿತ್ರರಂಗ

  |

  ಎಲ್ಲೆಡೆ ಕೊರೊನಾ ವೈರಸ್ ಎರಡನೇ ಅಲೆ ಶುರುವಾಗುತ್ತಿದೆ ಎಂಬ ಆತಂಕ ಕಾಡ್ತಿದೆ. ಕೊರೊನಾ ಭೀತಿಯಲ್ಲೂ ದಕ್ಷಿಣ ಚಿತ್ರರಂಗ ಧೂಳೆಬ್ಬಿಸಲು ಸಜ್ಜಾಗಿದೆ. ನಿರೀಕ್ಷೆಯ ಹಾಗೂ ಸ್ಟಾರ್ ನಟರ ಚಿತ್ರಗಳು ಈ ವಾರ ಚಿತ್ರಮಂದಿರಕ್ಕೆ ಬರ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದ ಚಿತ್ರಗಳು ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ.

  ಚಿತ್ರಮಂದಿರಗಳು 100 ಪರ್ಸೆಂಟ್ ಕಾರ್ಯನಿರ್ವಹಿಸುತ್ತಿವೆ. ಕೊರೊನಾ ಭೀತಿಯಿಂದ ಮತ್ತೆ 50 ಪರ್ಸೆಂಟ್ ನಿಯಮ ಜಾರಿ ಮಾಡಬಹುದು ಎಂಬ ಆತಂಕವಿದೆ. ಇದರ ನಡುವೆಯೂ ಸೌತ್ ಸಿನಿಮಾಗಳು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿವೆ. ಹಾಗಾದ್ರೆ, ಏಪ್ರಿಲ್ ಮೊದಲ ವಾರದಲ್ಲಿ ಯಾವೆಲ್ಲ ಸಿನಿಮಾಗಳು ತೆರೆಗೆ ಬರ್ತಿದೆ? ಮುಂದೆ ಓದಿ....

  ಪುನೀತ್ ರಾಜ್ ಕುಮಾರ್ 'ಯುವರತ್ನ' 3ಡಿ ಪ್ರಮೋಷನ್ ಪೋಸ್ಟರ್ ಹೇಗಿದೆ ನೋಡಿಪುನೀತ್ ರಾಜ್ ಕುಮಾರ್ 'ಯುವರತ್ನ' 3ಡಿ ಪ್ರಮೋಷನ್ ಪೋಸ್ಟರ್ ಹೇಗಿದೆ ನೋಡಿ

  ಪವರ್ ಸ್ಟಾರ್ 'ಯುವರತ್ನ' ಎಂಟ್ರಿ

  ಪವರ್ ಸ್ಟಾರ್ 'ಯುವರತ್ನ' ಎಂಟ್ರಿ

  ಸ್ಯಾಂಡಲ್‌ವುಡ್‌ನಲ್ಲಿ ಈ ವಾರದಿಂದ ಯುವರತ್ನನ ಹಬ್ಬ ಆರಂಭವಾಗಲಿದೆ. ಏಪ್ರಿಲ್ 1 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿದೆ. ಭಾನುವಾರದಿಂದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಪೊಗರು, ರಾಬರ್ಟ್ ಬಳಿಕ ರಿಲೀಸ್ ಆಗುತ್ತಿರುವ ದೊಡ್ಡ ಚಿತ್ರವಾಗಿದ್ದು, ಕರ್ನಾಟಕದಲ್ಲಿ ಪವರ್ ಸ್ಟಾರ್ ಸ್ವಾಗತಿಸಲು ದೊಡ್ಡ ವೇದಿಕೆ ಸಿದ್ಧವಾಗಿದೆ.

  ಕಾರ್ತಿಯ ಸುಲ್ತಾನ

  ಕಾರ್ತಿಯ ಸುಲ್ತಾನ

  ತಮಿಳು ನಟ ಕಾರ್ತಿ ಅಭಿನಯದ ಸುಲ್ತಾನ ಸಿನಿಮಾ ಏಪ್ರಿಲ್ 2 ರಂದು ತೆರೆಗೆ ಬರ್ತಿದೆ. ಸೆನ್ಸಾರ್ ಮುಗಿಸಿರುವ ಸುಲ್ತಾನ ಚಿತ್ರ ಯು/ಎ ಪ್ರಮಾಣಪತ್ರ ಪಡೆದಿದೆ. ಕನ್ನಡ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಳೆದ ಎರಡು ವರ್ಷದಿಂದಲೂ ಕುತೂಹಲ ಮೂಡಿಸಿರುವ ಸುಲ್ತಾನ ಈ ವಾರ ಜನರ ಮುಂದೆ ಬರ್ತಿದೆ. ಕಾಲಿವುಡ್ ಪಾಲಿಗೆ ಸುಲ್ತಾನನ ಎಂಟ್ರಿ ಹಬ್ಬವನ್ನುಂಟು ಮಾಡಲಿದೆ.

  ತೆಲುಗಿನಲ್ಲಿ ವೈಲ್ಡ್ ಡಾಗ್

  ತೆಲುಗಿನಲ್ಲಿ ವೈಲ್ಡ್ ಡಾಗ್

  ಅಕ್ಕಿನೇನಿ ನಾಗಾರ್ಜುನ ಅಭಿನಯದಲ್ಲಿ ತಯಾರಾಗಿರುವ ಭಾರಿ ನಿರೀಕ್ಷೆಯ ಚಿತ್ರ ವೈಲ್ಡ್ ಡಾಗ್ ಇದೇ ವಾರ ಚಿತ್ರಮಂದಿರಕ್ಕೆ ಬರ್ತಿದೆ. ನಾಗಾರ್ಜುನ, ದಿಯಾ ಮಿರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಏಪ್ರಿಲ್ 2 ರಂದು ಚಿತ್ರಮಂದಿರಕ್ಕೆ ಬರ್ತಿದೆ.

  ತಮಿಳು 'ಸುಲ್ತಾನ'ದಲ್ಲಿ ಮಿಂಚಿದ ಕೆಜಿಎಫ್ ಖ್ಯಾತಿಯ ಗರುಡ ರಾಮ್ತಮಿಳು 'ಸುಲ್ತಾನ'ದಲ್ಲಿ ಮಿಂಚಿದ ಕೆಜಿಎಫ್ ಖ್ಯಾತಿಯ ಗರುಡ ರಾಮ್

  ಸೀಟಿಮಾರ್ ಎಂಟ್ರಿ

  ಸೀಟಿಮಾರ್ ಎಂಟ್ರಿ

  ತೆಲುಗು ನಟ ಗೋಪಿಚಂದ್, ತಮನ್ನಾ ಭಾಟಿಯಾ ನಟಿಸಿರುವ ಸೀಟಿಮಾರ್ ಚಿತ್ರವೂ ಏಪ್ರಿಲ್ 2 ರಂದು ತೆರೆಗೆ ಬರ್ತಿದೆ. ಸಂಪತ್ ನಂದಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಕಬಡ್ಡಿ ಆಟದ ಸುತ್ತಾ ಮೂಡಿಬಂದಿರುವ ಥ್ರಿಲ್ಲಿಂಗ್ ಕಥೆ ಹೊಂದಿದೆ.

  ನೇಪಾಳದಲ್ಲಿ ಹೆಚ್ಚಾಯ್ತು KGF 2 ಹವಾ | Yash | Filmibeat Kannada
  ಮಲಯಾಳಂ ಇರುಳ್

  ಮಲಯಾಳಂ ಇರುಳ್

  ಈ ಚಿತ್ರಗಳ ಜೊತೆಗೆ ಮಲಯಾಳಂ ಸಿನಿಮಾ ಇರುಳ್ ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರವೇ ತೆರೆಗೆ ಬರ್ತಿದೆ. ಏಪ್ರಿಲ್ 2 ರಂದು ಇರುಳ್ ಚಿತ್ರವೂ ದರ್ಶನ ಕೊಡಲಿದೆ.

  English summary
  Puneeth Rajkumar starrer Yuvarathnaa, Nagarjuna starrer Wild Dog and Karthi Starrer Sulthan Movies releasing this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X