ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುವ 'ಮೃಗಶಿರ'

By Rajendra

ಇದೊಂದು ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುವ ಚಿತ್ರ. ಅದ್ಯಾವುದು ಆ ಚಿತ್ರ ಎಂದು ನಿಮಗೆ ಅಚ್ಚರಿಯಾಗಬಹುದು. ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ಮೃಗಶಿರ' ಚಿತ್ರವೇ ರೋಮಾಂಚಭರಿತ ಸಿನಿಮಾ.

ನಕ್ಸಲ್ ಸಮಸ್ಯೆಯಿಂದ ಕರ್ನಾಟಕದ ಪ್ರಕ್ಷುಬ್ದ ಪ್ರದೇಶ ಎನಿಸಿಕೊಂಡಿರುವ ತೊಬ್ಬೆಟ್ಟು ಅರಣ್ಯ ಪ್ರದೇಶ, ಕುಂದಾಪುರ ಬಳಿ ಬಹುತೇಕ ಚಿತ್ರೀಕರಣ ಮಾಡಿರುವ 'ಮೃಗಶಿರ' ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಡಿ ಟಿ ಎಸ್ ಕೆಲಸವನ್ನು ಪೂರ್ತಿಗೊಳಿಸಲಾಗಿದೆ. [ನೀನಾದೆನಾ ಚಿತ್ರ ವಿಮರ್ಶೆ]

Mrigashira poster
ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುವ ಈ ಚಿತ್ರವನ್ನು ಶ್ರೀವತ್ಸ ನಿರ್ದೇಶಿಸಿದ್ದಾರೆ. ನಿರ್ದೇಶಕ ಶ್ರೀವತ್ಸರಂತೆಯೇ ನಿರ್ಮಾಪಕ ಚನ್ನಪ್ಪ ಹಾಗೂ ಮೋಹನ್ ಕುಮಾರ್ ಅವರಿಗೂ ಚಿತ್ರರಂಗದಲ್ಲಿ ಇದು ಮೊದಲ ಪ್ರಯತ್ನವಾಗಿದೆ.

'ಮೃಗಶಿರ' ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಪನ್ನಗಾ ಭರಣ, ತಬಲಾ ನಾಣಿ ಅರಣ್ಯ ಪ್ರದೇಶಕ್ಕೆ ಆಗಮಿಸಿದಾಗ ಆಗುವ ಘಟನೆಗಳು ಬಹಳ ಕುತೂಹಲಕಾರಿಯಾಗಿ ಮೂಡಿಬಂದಿದೆಯಂತೆ. ಮಾನಸ 'ರೊಮಾನ್ಸ್' ಎನ್ನುವ ತೆಲುಗು ಸಿನಿಮಾದಲ್ಲಿ ಅಭಿನಯಿಸಿ ಈಗ ಕನ್ನಡದ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಕೃಷ್ಣ ಮೋಹನ್, ಸಿದ್ದರಾಜ ಕಲ್ಯಾಣ್ಕರ್, ಸಾಧು ಕೋಕಿಲ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. ಶ್ರೀಕಾಂತ್ ಅವರ ಸಂಭಾಷಣೆ, ರವಿ ಬಸ್ರೂರ್ ಅವರ ಸಂಗೀತ, ಶ್ರೀನಿವಾಸ್ ರಾಮಯ್ಯ ಅವರ ಛಾಯಾಗ್ರಹಣ ಈ ಚಿತಕ್ಕಿದೆ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
After Nee Naade Naa movie Dianomic Prince Prajwal Devraj back with Mrigashira. The film, which is about three boys and their adventures in the forest, will feature Tabla Nani too. The movie directed by Srivatsa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X