»   » ಸುದೀಪ್ ಗೆ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್: ಮುಹೂರ್ತ ಸಮಯ ಕೂಡಿ ಬಂತು.!

ಸುದೀಪ್ ಗೆ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್: ಮುಹೂರ್ತ ಸಮಯ ಕೂಡಿ ಬಂತು.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ....ಒಬ್ಬರನ್ನೊಬ್ಬರು ಕಾಲೆಳೆಯುವಷ್ಟು ಆತ್ಮೀಯ ಸ್ನೇಹಿತರು ಅಂತ ಟ್ವಿಟ್ಟರ್ ಲೋಕದಲ್ಲಿ ಇರುವವರಿಗೆಲ್ಲಾ ಗೊತ್ತು.

ಗೆಳೆಯರಿಬ್ಬರು ಒಟ್ಟಿಗೆ ಸೇರಿ 'ಥಗ್ಸ್ ಆಫ್ ಮಾಲ್ಗುಡಿ' ಎಂಬ ಸಿನಿಮಾ ಮಾಡುವುದಾಗಿ ಹೇಳಿಕೊಂಡ ವಿಚಾರ ಕೂಡ ಈಗಾಗಲೇ ಜಗಜ್ಜಾಹೀರಾಗಿದೆ. ಈಗ ಇದೇ 'ಥಗ್ಸ್ ಆಫ್ ಮಾಲ್ಗುಡಿ' ಮುಂದಿನ ವರ್ಷ ಸೆಟ್ಟೇರಲಿದೆ ಅಂತ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. [ಟ್ವಿಟ್ಟರ್ ಜಟಾಪಟಿ: ರಕ್ಷಿತ್ ಶೆಟ್ಟಿ ಬಗ್ಗೆ ಸುದೀಪ್ ಹೊಸ ಕಾಮೆಂಟ್.!]

thugs-of-malgudi-will-go-on-floors-from-june-2017

ಹೌದು, ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬರುವ 'ಥಗ್ಸ್ ಆಫ್ ಮಾಲ್ಗುಡಿ' ಮುಂದಿನ ವರ್ಷದ ಜೂನ್ ತಿಂಗಳಿನಲ್ಲಿ ಸೆಟ್ಟೇರಲಿದೆ. ಸದ್ಯ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಬಿಜಿಯಾಗಿದ್ದಾರೆ.

ಇನ್ನೂ ಸುದೀಪ್ ಕೈಯಲ್ಲಿ 'ವಿಲನ್' ಚಿತ್ರ ಇರೋದ್ರಿಂದ, ಅದು ಮುಗಿದ ಬಳಿಕ ಅಂದ್ರೆ ಜೂನ್ ಹೊತ್ತಿಗೆ 'ಥಗ್ಸ್ ಆಫ್ ಮಾಲ್ಗುಡಿ' ಸೆಟ್ಟೇರುವ ಸೂಚನೆ ನೀಡಿದ್ದಾರೆ ರಕ್ಷಿತ್ ಶೆಟ್ಟಿ.

'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು 'ಫಿಲ್ಮಿಬೀಟ್ ಕನ್ನಡ' ಪುಟ ಓದುತ್ತಿರಿ....

English summary
Kiccha Sudeep starrer Rakshit Shetty Directorial 'Thugs of Malgudi' will go on floors from June 2017.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada