ಅದ್ಭುತ ದಾಖಲೆ ಬರೆದ ತುಳು ಸಿನೆಮಾ 'ಚಾಲಿಪೋಲಿಲು'

By Suneetha

ಇತ್ತೀಚೆಗೆ ತುಳು ಚಿತ್ರರಂಗವೂ ಕನ್ನಡ ಚಿತ್ರರಂಗದಂತೆ ರೇಸ್ ನಲ್ಲಿದೆ. ಇದಕ್ಕೆಲ್ಲಾ ಉತ್ತಮ ನಿದರ್ಶನವೆಂದರೆ, ಮೊನ್ನೆ ಕೆಲವೊಂದು ಚಿತ್ರಗಳು ಶತದಿನೋತ್ಸವಗಳನ್ನು ಆಚರಿಸಿಕೊಂಡಿದ್ದು,

ಆದರೆ ಇದೀಗ ನೂರು, ಇನ್ನೂರು ದಿನಗಳಲ್ಲ ಬದಲಾಗಿ 250 ದಿನಗಳನ್ನು ದಾಟಿ 300ನೇ ದಿನಗಳತ್ತ ದಾಪುಗಾಲಿಕ್ಕುತ್ತಿರುವ ಚಿತ್ರಗಳ ಬಗ್ಗೆ ನಾವೀಗ ಮಾತನಾಡುತ್ತಿದ್ದೇವೆ.

ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣ ಮಾಡಿ ಯುವ ನಿರ್ದೇಶಕ ವೀರೆಂದ್ರ ಶೆಟ್ಟಿ ಕಾವೂರು ಆಕ್ಷನ್-ಕಟ್ ಹೇಳಿರುವ 'ಚಾಲಿಪೋಲಿಲು' ಚಿತ್ರ ಇಂದು (ಜುಲೈ7) 250ನೇ ದಿನದ ಪ್ರದರ್ಶನ ಕಂಡು ಅದ್ಭುತ ದಾಖಲೆಯನ್ನು ಬರೆದಿದೆ.[ಚಾಲಿಪೋಲಿಲು 200; ಸಚಿವ ಖಾದರ್ ಜೊತೆ ಸಂಭ್ರಮ]

ಇದೀಗ ಪಾಂಡೇಶ್ವರ ಪಿವಿಆರ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ದಿನಂಪ್ರತಿ ಪ್ರದರ್ಶನ ಕಾಣುತ್ತಿರುವ 'ಚಾಲಿಪೋಲಿಲು' ಇವತ್ತಿಗೆ 250 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ದೇಶವ್ಯಾಪಿಯಾಗಿರುವ ಪಿವಿಆರ್ ನ ಯಾವುದೇ ಚಿತ್ರಮಂದಿರಗಳಲ್ಲಿ ಪ್ರಾದೇಶಿಕ ಭಾಷೆಯ ಸಿನೆಮಾವೊಂದು ಈ ರೀತಿಯ ಪ್ರದರ್ಶನ ಕಂಡಿಲ್ಲವಂತೆ, ಇದು ತುಳುನಾಡಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. [50ರ ಸಂಭ್ರಮದಲ್ಲಿ 'ಒರಿಯನ್ ತೂಂಡ ಒರಿಯಾಗಾಪುಜಿ']

'ಚಾಲಿಪೋಲಿಲು' ಚಿತ್ರದಲ್ಲಿ ಅಂತಹ ವಿಶೇಷತೆ ಏನಿದೆ. ತಿಳಿದುಕೊಳ್ಳಲು ಈ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ತುಳು ರಂಗ ಭೂಮಿಯ ದಂಡು ಈ ಚಿತ್ರದಲ್ಲಿದೆ.

ತುಳು ರಂಗ ಭೂಮಿಯ ದಂಡು ಈ ಚಿತ್ರದಲ್ಲಿದೆ.

ತುಳು ರಂಗ ಭೂಮಿಯ ಪ್ರಮುಖರಾಧ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಸುಂದರ್ ರೈ, ಮಂದಾರ, ಚೇತನ್ ರೈ, ಲಕ್ಷ್ಮಣ್ ಕುಮಾರ್, ರಾಘವೇಂದ್ರ ರೈ, ಸರೋಜಿನಿ ಶೆಟ್ಟಿ, ದಿವ್ಯ ಶ್ರೀ, ಸೇರಿದಂತೆ ಖ್ಯಾತ ಕನ್ನಡ ಸಿನೆಮಾ ನಟಿ ಪದ್ಮಜಾ ರಾವ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ 'ಚಾಲಿಪೋಲಿಲು'['ಎಕ್ಕಸಕ' ಏಕಕಾಲಕ್ಕೆ 11 ಚಿತ್ರಮಂದಿರಗಳಲ್ಲಿ ರಿಲೀಸ್]

ತುಳು ಸಿನೆಮಾ ಅವಾರ್ಡ್

ತುಳು ಸಿನೆಮಾ ಅವಾರ್ಡ್

ಕೇವಲ 60 ಲಕ್ಷ ಬಜೆಟ್ ನಲ್ಲಿ ತಯಾರಾದ 'ಚಾಲಿಪೋಲಿಲು' ಚಿತ್ರ, ತುಳು ಸಿನೆಮಾ ಅವಾರ್ಡ್ ನಲ್ಲಿ ಬರೋಬ್ಬರಿ 8 ಅವಾರ್ಡ್ ಗಳನ್ನು ತನ್ನದಾಗಿಸಿಕೊಂಡಿತ್ತು.

ಗರಿಷ್ಠ ಮೊತ್ತಕ್ಕೆ ವಿಡಿಯೋ ಮಾರಾಟ

ಗರಿಷ್ಠ ಮೊತ್ತಕ್ಕೆ ವಿಡಿಯೋ ಮಾರಾಟ

'ಚಾಲಿಪೋಲಿಲು' ಚಿತ್ರದ ವಿಡಿಯೋ ಹಕ್ಕು, 11 ಲಕ್ಷ ರೂಪಾಯಿ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದೆ. ಮಂಗಳೂರಿನ ಮ್ಯೂಸಿಕ್ ಹೌಸ್ ಸಂಸ್ಥೆಯೊಂದು ಇದನ್ನು ಖರೀದಿ ಮಾಡಿತ್ತು.

ಆಸ್ಟ್ರೇಲಿಯಾ, ಮುಂಬೈ, ಬೆಂಗಳೂರಿನಲ್ಲಿ ಪ್ರದರ್ಶನ

ಆಸ್ಟ್ರೇಲಿಯಾ, ಮುಂಬೈ, ಬೆಂಗಳೂರಿನಲ್ಲಿ ಪ್ರದರ್ಶನ

'ಚಾಲಿಪೋಲಿಲು' ಈ ತಿಂಗಳ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರದರ್ಶನಗೊಳ್ಳಲಿದೆ. ಮಾತ್ರವಲ್ಲದೇ ಮುಂದಿನ ವಾರ ಮುಂಬೈ ಮತ್ತು ಬೆಂಗಳೂರಿನಲ್ಲಿ ಮರು ಪ್ರದರ್ಶನಗೊಳ್ಳಲಿದೆ.

ಹೊಸಬರ ಸಿನೆಮಾ

ಹೊಸಬರ ಸಿನೆಮಾ

ಸಿನೆಮಾ ರಂಗಕ್ಕೆ ಪ್ರಕಾಶ್ ಪಾಂಡೇಶ್ವರ ಹಾಗೂ ವೀರೇಂದ್ರ ಶೆಟ್ಟಿ ಇಬ್ಬರೂ ಹೊಸಬರೆ, ಕೇರಳದ ಕ್ಯಾಮರಾಮೆನ್, ಉತ್ಪಲ್ ವಿ ನಯನಾರ್ ಕ್ಯಾಮರ ಕೈ ಚಳಕ, ವಿ.ಮನೋಹರ್ ಸಂಗೀತ, ಮಣಿಕಾಂತ್ ಕದ್ರಿ ಹಿನ್ನಲೆ ಸಂಗೀತ, ಇರುವ 'ಚಾಲಿಪೋಲಿಲು' ಪಕ್ಕಾ, ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನ್ಮೆಂಟ್.

More from Filmibeat

English summary
Thulu movie 'Chaali Polilu' Celebrate the 250 Days. Thulu Actors Devadas Kapikad, Naveen D Padil, Bhojaraj Vamanjoor, actress Divyashree in the lead roles.The movie is directed by Veerendra Shetty Kavoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X