ಭಾರತದ ಮೋಸ್ಟ್ ಡಿಸೈರಬಲ್ ಪುರುಷರ ಪಟ್ಟಿ: ಕನ್ನಡದವರು ಒಬ್ಬರೇ

By Bharath Kumar

2017ನೇ ಸಾಲಿನ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿ ಬಹಿರಂಗವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭಾರತದ ವಿವಿಧ ಕ್ಷೇತ್ರಗಳ 50 ಜನರ ಪಟ್ಟಿ ಪ್ರಕಟವಾಗಿದೆ. ಎಂದಿನಿಂತೆ ಬಾಲಿವುಡ್ ನಟರದ್ದೇ ಮೇಲುಗೈ ಆಗಿದ್ದು, ಕ್ರಿಕೆಟ್ ಪಟುಗಳು ಕೂಡ ಮಿಂಚಿದ್ದಾರೆ.

ಬೇಸರದ ಸಂಗತಿ ಅಂದ್ರೆ, ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಕೇವಲ ಒಬ್ಬ ಸ್ಯಾಂಡಲ್ ವುಡ್ ನಟ ಮಾತ್ರ ಅವಕಾಶ ಪಡೆದುಕೊಂಡಿದ್ದಾರೆ. ಕಳೆದ ಬಾರಿಯೂ ಕನ್ನಡದ ಸ್ಟಾರ್ ನಟರೊಬ್ಬರು ಕಾಣಿಸಿಕೊಂಡಿದ್ರು. ಆದ್ರೆ, ಈ ವರ್ಷ ಅವರ ಬದಲು ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾನೆ ಅಷ್ಟೇ.

ಹಾಗಿದ್ರೆ, ಭಾರತದ 50 ಜನರ ಪಟ್ಟಿಯಲ್ಲಿ ಯಾವ ಯಾವ ನಟರು ಸ್ಥಾನ ಪಡೆದುಕೊಂಡಿದ್ದಾರೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ. ಮುಂದೆ ಓದಿ....

ಮೋಸ್ಟ್ ಡಿಸೈರಬಲ್ ಮೆನ್ ರಣ್ವೀರ್

ಮೋಸ್ಟ್ ಡಿಸೈರಬಲ್ ಮೆನ್ ರಣ್ವೀರ್

2017ನೇ ಸಾಲಿನ ಮೋಸ್ಟ್ ಡಿಸೈರಬಲ್ ಮೆನ್ ಅಗಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಆಯ್ಕೆಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ನಡೆಸುವ ಭಾರತದ 50 ಜನ ಪುರುಷರ ಸಮೀಕ್ಷೆಯಲ್ಲಿ ರಣ್ವೀರ್ ಸಿಂಗ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 2016ರಲ್ಲಿ ರಣ್ವೀರ್ ನಾಲ್ಕನೇ ಸ್ಥಾನದಲ್ಲಿದ್ದರು.

'ಬಾಹುಬಲಿ' ತಂದೆ ಹಿರಿಮೆ

'ಬಾಹುಬಲಿ' ತಂದೆ ಹಿರಿಮೆ

ತೆಲುಗು ನಟ ಪ್ರಭಾಸ್ 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿಕೊಂಡಿದ್ದಾರೆ. 'ಬಾಹುಬಲಿ' ಚಿತ್ರದ ಸೂಪರ್ ಹಿಟ್ ಪ್ರದರ್ಶನ ಪ್ರಭಾಸ್ ಗೆ ಈ ಸ್ಥಾನ ನೀಡಿದೆ. 2016ರಲ್ಲಿ ಪ್ರಭಾಸ್ 22ನೇ ಸ್ಥಾನದಲ್ಲಿದ್ದರು.

ಕ್ರಿಕೆಟಿಗ ವಿರಾಟ್ ಕೊಹ್ಲಿ

ಕ್ರಿಕೆಟಿಗ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ, ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. 2016ರಲ್ಲಿ ವಿರಾಟ್ 2ನೇ ಸ್ಥಾನದಲ್ಲಿದ್ದರು.

ನಾಲ್ಕನೇ ಸ್ಥಾನದಲ್ಲಿ ಹೃತಿಕ್ ರೋಷನ್

ನಾಲ್ಕನೇ ಸ್ಥಾನದಲ್ಲಿ ಹೃತಿಕ್ ರೋಷನ್

ಬಾಲಿವುಡ್ ನ ಮತ್ತೊಬ್ಬ ನಟ ಹೃತಿಕ್ ರೋಷನ್ 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2016ರಲ್ಲಿ ಹೃತಿಕ್ 3ನೇ ಸ್ಥಾನದಲ್ಲಿದ್ದರು.

ಐದನೇ ಸ್ಥಾನದಲ್ಲಿ ಸಿದ್ಧಾರ್ಥ ಮಲ್ಹೋತ್ರ

ಐದನೇ ಸ್ಥಾನದಲ್ಲಿ ಸಿದ್ಧಾರ್ಥ ಮಲ್ಹೋತ್ರ

2017ನೇ ಸಾಲಿನ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರ ಐದನೇ ಸ್ಥಾನದಲ್ಲಿದ್ದಾರೆ. 2016ರಲ್ಲಿ ಸಿದ್ಧಾರ್ಥ 6ನೇ ಸ್ಥಾನದಲ್ಲಿದ್ದರು.

ಟಾಲಿವುಡ್ ಪ್ರಿನ್ಸ್ ಮತ್ತು ರಾಣಾ

ಟಾಲಿವುಡ್ ಪ್ರಿನ್ಸ್ ಮತ್ತು ರಾಣಾ

2017ನೇ ಸಾಲಿನ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಆರನೇ ಸ್ಥಾನದಲ್ಲಿದ್ರೆ, ರಾಣಾ ದಗ್ಗುಬಾಟಿ ಏಲನೇ ಸ್ಥಾನದಲ್ಲಿದ್ದಾರೆ. 2016ರಲ್ಲಿ ಮಹೇಶ್ ಬಾಬು 7ನೇ ಸ್ಥಾನ ಮತ್ತು ರಾಣಾ 24ನೇ ಸ್ಥಾನದಲ್ಲಿದ್ದರು.

ಮತ್ತೆ ಯಾರು ಯಾವ ಸ್ಥಾನದಲ್ಲಿದ್ದಾರೆ

ಮತ್ತೆ ಯಾರು ಯಾವ ಸ್ಥಾನದಲ್ಲಿದ್ದಾರೆ

ಇನ್ನುಳಿದಂತೆ ಜಿತೇಶ್ ಸಿಂಗ್ (8), ದುಲ್ಕರ್ ಸಲ್ಮಾನ್ (11), ಪ್ರಥಮೇಶ್ ಮೌಲಿಂಗರ್ (10), ವರುಣ್ ಧವನ್ (11), ರಣ್ಬೀರ್ ಕಪೂರ್ (12), ದಿಲ್ಜಿತ್ (13), ಶಾಹೀದ್ ಕಪೂರ್ (14), ವಿದ್ಯುತ್ ಜಮ್ಮವಾಲ್ (15), ವಿವೈನ್ ಸೇನಾ (16), ಬಸೀಖರ್ ಅಲಿ (17), ವರುಣ್ ವರ್ಮಾ (18), ಅರ್ಜುನ್ ರಾಮ್ ಪಾಲ್ (19), ಫೃಥ್ವಿರಾಜ್ (20), ಸುಶಾಂತ್ ಸಿಂಗ್ ರಜಪೂರ್ (22), ಎಂ ಎಸ್ ಧೋನಿ (24), ಟೈಗರ್ ಶ್ರಾಫ್ (28), ಆರ್ ಮಾಧವನ್ (37) ಸ್ಥಾನ ಪಡೆದುಕೊಂಡಿದ್ದಾರೆ.

ಕನ್ನಡದ ರಕ್ಷಿತ್ ಶೆಟ್ಟಿ

ಕನ್ನಡದ ರಕ್ಷಿತ್ ಶೆಟ್ಟಿ

ಇನ್ನು 2016ರ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಕಿಚ್ಚ ಸುದೀಪ್ 43ನೇ ಸ್ಥಾನ ಪಡೆದುಕೊಂಡಿದ್ದರು. ಆದ್ರೆ, 2017 ರ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಸುದೀಪ್ ಇಲ್ಲ. ಅವರ ಬದಲು ರಕ್ಷಿತ್ ಶೆಟ್ಟಿ 49ನೇ ಸ್ಥಾನ ಪಡೆದುಕೊಂಡಿದ್ದಾರೆ.

More from Filmibeat

English summary
The Times 50 Most Desirable Men 2017 is India’s pick of fresh faces and young talent with great potential. These dishy dudes have oodles of sex appeal and charm, and can sweep you off your feet! Here's a look at some of them...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X