For Quick Alerts
  ALLOW NOTIFICATIONS  
  For Daily Alerts

  'ಟೈಮ್ಸ್ ಟೆಕ್ನಿಕಲ್ ಪ್ರಶಸ್ತಿ': ಯಾವ ಸಿನಿಮಾದ ಕಥೆ ಬೆಸ್ಟ್

  By Suneetha
  |

  ಪ್ರತಿಷ್ಠಿತ ಸೈಮಾ, ಫಿಲ್ಮ್ ಫೇರ್ ಪ್ರಶಸ್ತಿಗಳಂತೆ, ಖ್ಯಾತ ಇಂಗ್ಲೀಷ್ ದಿನಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಕೂಡ ಕನ್ನಡ ಚಿತ್ರಗಳಿಗೆ 'ಟೈಮ್ಸ್ ಕನ್ನಡ ಫಿಲ್ಮ್ಸ್ ಟೆಕ್ನಿಕಲ್ ಅವಾರ್ಡ್ಸ್' ಅಂತ ಪ್ರಶಸ್ತಿಗಳನ್ನು ನೀಡುತ್ತದೆ.

  ಅದರಂತೆ ಈ ಬಾರಿ 'ಟೈಮ್ಸ್ ಕನ್ನಡ ಫಿಲ್ಮ್ಸ್ ಟೆಕ್ನಿಕಲ್ ಅವಾರ್ಡ್ಸ್'ಗೆ ನಾಮಾಂಕಿತಗೊಂಡ ಕನ್ನಡ ಚಿತ್ರಗಳ ಪಟ್ಟಿ ಬಿಡುಗಡೆ ಆಗಿದೆ. ಅಂದುಕೊಂಡಂತೆ ಕನ್ನಡದ ಅತ್ಯುತ್ತಮ ಸಿನಿಮಾಗಳೇ ಈ ಪ್ರಶಸ್ತಿಯಲ್ಲಿ ರೇಸ್ ನಲ್ಲಿದೆ.

  2015ರಲ್ಲಿ ಬಿಡುಗಡೆ ಆದ ಕಮರ್ಷಿಯಲ್ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಕೆಲವಾರು ಸಿನಿಮಾಗಳು ಸುಮಾರು 13 ವಿಭಾಗಗಳಲ್ಲಿ ಸ್ಪರ್ಧೆಗಿಳಿದಿವೆ.['ಸೈಮಾ' ಪ್ರಶಸ್ತಿಗೆ ತೆರೆ: ಪುನೀತ್ ಬೆಸ್ಟ್ ನಟ, ಉಪ್ಪಿ ಬೆಸ್ಟ್ ನಿರ್ದೇಶಕ]

  ನಟ-ನಟಿ, ನಿರ್ಮಾಪಕ-ನಿರ್ದೇಶಕ, ಸಂಗೀತ ನಿರ್ದೇಶಕರನ್ನು ಹೊರತುಪಡಿಸಿ, ಚಿತ್ರದ ಅತ್ಯುತ್ತಮ ತಾಂತ್ರಿಕ ಕೆಲಸಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದರಲ್ಲಿ ತೆರೆ ಮರೆಯ ಹಿಂದೆ ಕೆಲಸ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ.

  ಅಂದಹಾಗೆ ಈ ಬಾರಿ ರಾಜ್ಯ-ರಾಷ್ಟ್ರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ 'ನಾನು ಅವನಲ್ಲ ಅವಳು' ವಿಶೇಷ ಸಿನಿಮಾ ಹಲವು ವಿಭಾಗಗಳಲ್ಲಿ ಸ್ಪರ್ಧೆಗಿಳಿದಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಲಿಂಗದೇವರು ಭಾರಿ ಖುಷಿ ವ್ಯಕ್ತಪಡಿಸಿದ್ದಾರೆ.[63ನೇ ಫಿಲಂಫೇರ್ ಪ್ರಶಸ್ತಿ: ರಂಗಿತರಂಗ 6 ವಿಭಾಗಗಳಲ್ಲಿ ಸ್ಪರ್ಧೆ]

  ಈಗಾಗಲೇ ವೋಟಿಂಗ್ ಲೈನ್ ತೆರೆದಿದ್ದು, ಕನ್ನಡ ಸಿನಿ ಪ್ರಿಯರು ಹಾಗೂ ಅಭಿಮಾನಿಗಳು ನಿಮ್ಮ ನೆಚ್ಚಿನ ಸಿನಿಮಾದ ತಾಂತ್ರಿಕ ವರ್ಗದವರಿಗೆ ವೋಟ್ ಮಾಡಬಹುದು.

  'ಟೈಮ್ಸ್ ಕನ್ನಡ ಫಿಲ್ಮ್ಸ್ ಟೆಕ್ನಿಕಲ್ ಅವಾರ್ಡ್ಸ್'ಗೆ ನಾಮಾಂಕಿತಗೊಂಡವರ ಸಂಪೂರ್ಣ ಪಟ್ಟಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

  ಉತ್ತಮ ಕಥೆ

  ಉತ್ತಮ ಕಥೆ

  ಬಿ.ಎಂ ಗಿರಿರಾಜ್ : ಚಿತ್ರ-'ಮೈತ್ರಿ'
  ಕಣ್ಣನ್ ಪರಮೇಶ್ವರನ್ : ಚಿತ್ರ-'ಆಟಗಾರ'
  ಪವನ್ ಒಡೆಯರ್ : ಚಿತ್ರ-'ರಣವಿಕ್ರಮ'
  ಶಶಾಂಕ್ : ಚಿತ್ರ-'ಕೃಷ್ಣಲೀಲಾ'
  ಸುರೇಂದ್ರನಾಥ್ : ಚಿತ್ರ :'ಕೆಂಡಸಂಪಿಗೆ'

  ಅತ್ಯುತ್ತಮ ಚಿತ್ರಕಥೆ -(ಸ್ವಮೇಕ್)

  ಅತ್ಯುತ್ತಮ ಚಿತ್ರಕಥೆ -(ಸ್ವಮೇಕ್)

  ಎ.ಹರ್ಷ : ಚಿತ್ರ-'ವಜ್ರಕಾಯ'
  ಮಂಜು ಮಾಂಡವ್ಯ : ಚಿತ್ರ-'ಮಾಸ್ಟರ್ ಪೀಸ್'
  ಪವನ್ ಒಡೆಯರ್ : ಚಿತ್ರ-'ರಣವಿಕ್ರಮ'
  ಶಶಾಂಕ್ ಮತ್ತು ರಘು ಕೊವಿ : ಚಿತ್ರ-'ಕೃಷ್ಣಲೀಲಾ'
  ಸುರೇಂದ್ರನಾಥ್, ರಾಜೇಶ್ ನಟರಂಗ್ ಮತ್ತು ಸೂರಿ : ಚಿತ್ರ-'ಕೆಂಡಸಂಪಿಗೆ'

  ಅತ್ಯುತ್ತಮ ಚಿತ್ರಕಥೆ-(ಕಥೆ-ಕಾದಂಬರಿ ಆಧಾರಿತ/ರೀಮೇಕ್)

  ಅತ್ಯುತ್ತಮ ಚಿತ್ರಕಥೆ-(ಕಥೆ-ಕಾದಂಬರಿ ಆಧಾರಿತ/ರೀಮೇಕ್)

  ಬಿ.ಎಸ್ ಲಿಂಗದೇವರು : 'ನಾನು ಅವನಲ್ಲ ಅವಳು'
  ಗುರು ದೇಶಪಾಂಡೆ : 'ರುದ್ರತಾಂಡವ'
  ಕಣ್ಣನ್ ಪರಮೇಶ್ವರನ್ ಮತ್ತು ಕೆ.ಎಂ ಚೈತನ್ಯ : 'ಆಟಗಾರ'
  ನಂದ ಕಿಶೋರ್ : 'ರನ್ನ'
  ಸತೀಶ್ ಪ್ರಧಾನ್ : 'ಅಭಿನೇತ್ರಿ'

  ಅತ್ಯುತ್ತಮ ಛಾಯಾಗ್ರಾಹಕ

  ಅತ್ಯುತ್ತಮ ಛಾಯಾಗ್ರಾಹಕ

  ಭುವನ್ ಗೌಡ : 'ರಥಾವರ'
  ಲ್ಯಾನ್ಸ್ ಕ್ಯಾಪ್ಲನ್ ಮತ್ತು ವಿಲಿಯಂ ಡೇವಿಡ್ : 'ರಂಗಿತರಂಗ'
  ಸಂತೋಷ್ ರೈ ಪಾತಾಜೆ : 'ಲವ್ ಯೂ ಆಲಿಯಾ'
  ಸತ್ಯ ಹೆಗಡೆ : 'ಕೆಂಡಸಂಪಿಗೆ'
  ಸುಧಾಕರ್ ಎಸ್ ರಾಜ್ : 'ರನ್ನ'

  ಅತ್ಯುತ್ತಮ ಹಿನ್ನಲೆ ಸಂಗೀತ

  ಅತ್ಯುತ್ತಮ ಹಿನ್ನಲೆ ಸಂಗೀತ

  ಬಿ.ಅಜನೀಶ್ ಲೋಕನಾಥ್ : 'ರಂಗಿತರಂಗ'
  ಅನೂಪ್ ಸಿಳೀನ್ : 'ನಾನು ಅವನಲ್ಲ ಅವಳು'
  ವಿ.ಹರಿಕೃಷ್ಣ : 'ಮಾಸ್ಟರ್ ಪೀಸ್'
  ವಿ.ಹರಿಕೃಷ್ಣ : 'ಕೆಂಡಸಂಪಿಗೆ'
  ರವಿ ಬಸ್ರೂರ್ : 'ರಥಾವರ'

  ಅತ್ಯುತ್ತಮ ಕಲಾ ನಿರ್ದೇಶನ

  ಅತ್ಯುತ್ತಮ ಕಲಾ ನಿರ್ದೇಶನ

  ಹೊಸಮನೆ ಮೂರ್ತಿ, ನಾಗರಾಜ್ ಹೊಸೂರು : 'ನಾನು ಅವನಲ್ಲ ಅವಳು'
  ಕನಕರಾಜು : 'ಅಭಿನೇತ್ರಿ'
  ಕನಕರಾಜು : 'ರಂಗಿತರಂಗ'
  ರವಿ ಸಂತೆಹಕ್ಲು ಮತ್ತು ಶಿವಕುಮಾರ್ : 'ಕೃಷ್ಣ ಲೀಲಾ'
  ಶಶಿಧರ್ ಅಡಪ : 'ಕೆಂಡಸಂಪಿಗೆ'

  ಅತ್ಯುತ್ತಮ ಡೈಲಾಗ್ಸ್

  ಅತ್ಯುತ್ತಮ ಡೈಲಾಗ್ಸ್

  ಎ ಪಿ ಅರ್ಜುನ್ : 'ಮಿ.ಐರಾವತ'
  ಮಂಜು ಮಾಂಡವ್ಯ : 'ಮಾಸ್ಟರ್ ಪೀಸ್'
  ನರೇಶ್ ಕುಮಾರ್ : '1st Rank ರಾಜು'
  ಪ್ರಶಾಂತ್ ರಾಜಪ್ಪ : 'ರನ್ನ'
  ಉಪೇಂದ್ರ : 'ಉಪ್ಪಿ 2'

  ಅತ್ಯುತ್ತಮ ನೃತ್ಯ ಸಂಯೋಜನೆ

  ಅತ್ಯುತ್ತಮ ನೃತ್ಯ ಸಂಯೋಜನೆ

  ಎ ಹರ್ಷ: 'ವಜ್ರಕಾಯ' ಚಿತ್ರದ 'ತುಕತು ಗಡ-ಬಡ'
  ಇಮ್ರಾನ್ ಸರ್ದಾರಿಯಾ : 'ಮಾಸ್ಟರ್ ಪೀಸ್' ಚಿತ್ರದ 'ಐ ಕಾಂಟ್ ವೈಟ್ ಬೇಬಿ'
  ಇಮ್ರಾನ್ ಸರ್ದಾರಿಯಾ : 'ರಾಟೆ' ಚಿತ್ರದ 'ರಟ್ಟೆಪಟ್ಟೆ ರಾಟೆ'
  ಮುರಳಿ ಮಾಸ್ಟರ್ : 'ರಥಾವರ' ಚಿತ್ರದ 'ಹುಡುಗಿ ಕಣ್ಣು'
  ನಾಗೇಶ್ : 'ಡಿಕೆ' ಚಿತ್ರದ 'ಸೇಸಮ್ಮ'

  ಅತ್ಯುತ್ತಮ ಆಕ್ಷನ್

  ಅತ್ಯುತ್ತಮ ಆಕ್ಷನ್

  ಎ ವಿಜಯ್ : 'ಮಾಸ್ಟರ್ ಪೀಸ್'
  ಡಿಫರೆಂಟ್ ಡ್ಯಾನಿ : 'ರಥಾವರ'
  ಪೀಟರ್ ಹೇನ್ : 'ರನ್ನ'
  ರವಿವರ್ಮ : 'ರಣವಿಕ್ರಮ'
  ರವಿವರ್ಮ : 'ವಜ್ರಕಾಯ'

  ಅತ್ಯುತ್ತಮ ವಸ್ತ್ರ ವಿನ್ಯಾಸ

  ಅತ್ಯುತ್ತಮ ವಸ್ತ್ರ ವಿನ್ಯಾಸ

  ದೀಪಾ ಸ್ವಾಮಿ : 'ನಾನು ಅವನಲ್ಲ ಅವಳು'
  ರೋಶಿನಿ ದಿನಕರ್ : 'ಲವ್ ಯೂ ಆಲಿಯಾ'
  ಸಾನಿಯಾ ಸರ್ದಾರಿಯಾ : 'ಎಂದೆಂದಿಗೂ'
  ಶಚಿನ ಹೆಗ್ಗಾರ್ : 'ಪ್ಲಸ್'
  ಯೋಗಿ ಜಿ ರಾಜ್ : 'ಮಾಸ್ಟರ್ ಪೀಸ್'

  ಅತ್ಯುತ್ತಮ ಮೇಕಪ್ಪ್

  ಅತ್ಯುತ್ತಮ ಮೇಕಪ್ಪ್

  ಜಯರಾಮ್ ಅನಂತ್ ರಾಮ್ ಮತ್ತು ಪ್ರಶಾಂತ್ ದೈಪೊಡ್ : 'ಎಂದೆಂದಿಗೂ'
  ನಾಗರಾಜ್ ಮತ್ತು ರಾಜು : 'ನಾನು ಅವನಲ್ಲ ಅವಳು'
  ಪುಷ್ಪ ಕೃಷ್ಣಪ್ಪ : 'ಲವ್ ಯೂ ಆಲಿಯಾ'
  ರಾಮಕೃಷ್ಣ : 'ಉಪ್ಪಿ 2'
  ಉಮಾ ಮಹೇಶ್ವರ್ : 'ಪ್ಲಸ್'

  ಅತ್ಯುತ್ತಮ ಸಂಕಲನಕಾರ

  ಅತ್ಯುತ್ತಮ ಸಂಕಲನಕಾರ

  ದೀಪು ಎಸ್ ಕುಮಾರ್ : 'ಕೆಂಡಸಂಪಿಗೆ'
  ಕೆ.ಎಂ ಪ್ರಕಾಶ್ : 'ರನ್ನ'
  ಕೆ.ಎಂ ಪ್ರಕಾಶ್ : 'ಮಾಸ್ಟರ್ ಪೀಸ್'
  ಕೆ.ಎಂ ಪ್ರಕಾಶ್ : 'ಮೈತ್ರಿ'
  ನವೀನ್ ರಾಜ್ : 'ಕೃಷ್ಣ ಲೀಲಾ'

  ಅತ್ಯುತ್ತಮ ಪೋಸ್ಟರ್ ಡಿಸೈನ್ಸ್

  ಅತ್ಯುತ್ತಮ ಪೋಸ್ಟರ್ ಡಿಸೈನ್ಸ್

  ನಮ್ ಟೀಮ್ : 'ಉಪ್ಪಿ 2'
  ನಮ್ ಟೀಮ್ : 'ರನ್ನ'
  ಮೆಮೊ ಇಂಕ್ : 'ರಂಗಿತರಂಗ'
  ಸಾಯಿ : 'ರಣವಿಕ್ರಮ'
  ವಿಶ್ವ : 'ಮಾಸ್ಟರ್ ಪೀಸ್'

  ವೋಟ್ ಮಾಡಿ

  ವೋಟ್ ಮಾಡಿ

  ನಿಮ್ಮ ನೆಚ್ಚಿನ ಚಿತ್ರ ಹಾಗೂ ತಾರೆಯರಿಗೆ ವೋಟ್ ಮಾಡಲು ಈ ಲಿಂಕ್ ಕ್ಲಿಕ್ಕಿಸಿ....

  English summary
  The nominations for the Times Kannada Film Technical Awards have been shortlisted by a team of experts based on the films' commercial and critical acclaim. Here is the Nominees full list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X