»   » ಪ್ರಿಯಾಂಕಾ ಚೋಪ್ರಾ ಹಿಂದಿಕ್ಕಿ ನಂ.1 ಆದ ಯಶ್ ಹೀರೋಯಿನ್

ಪ್ರಿಯಾಂಕಾ ಚೋಪ್ರಾ ಹಿಂದಿಕ್ಕಿ ನಂ.1 ಆದ ಯಶ್ ಹೀರೋಯಿನ್

Posted By:
Subscribe to Filmibeat Kannada

ಟೈಮ್ಸ್ 'ಮೋಸ್ಟ್ ಡಿಸೈರಬಲ್ ವುಮೆನ್ 2016'ಪಟ್ಟಿ ಪ್ರಕಟವಾಗಿದೆ. ಇದರಲ್ಲಿ ನಟಿ ಶ್ರೀನಿಧಿ ರಮೇಶ್ ಶೆಟ್ಟಿ ದೇಶದಲ್ಲೇ ನಂ.1 ಸ್ಥಾನವನ್ನು ಪಡೆದಿದ್ದಾರೆ. ಕನ್ನಡ ಹುಡುಗಿಯಾಗಿರುವ ಶ್ರೀನಿಧಿ ಶೆಟ್ಟಿ, ಯಶ್ ನಟನೆಯ 'ಕೆ.ಜಿ.ಎಫ್' ಸಿನಿಮಾದ ನಾಯಕಿಯೂ ಹೌದು.

ಟೈಮ್ಸ್ 'ಮೋಸ್ಟ್ ಡಿಸೈರಬಲ್ ವುಮೆನ್ 2016' ಪಟ್ಟಿಯಲ್ಲಿ ದೇಶದ ದೊಡ್ಡ ದೊಡ್ಡ ನಟಿಯರಿದ್ದರು. ಬಾಲಿವುಡ್ ನ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಸನ್ನಿ ಲಿಯೋನ್ ಸೇರಿದಂತೆ ಸಾಕಷ್ಟು ಸ್ಟಾರ್ ಹೀರೋಯಿನ್ ಗಳನ್ನು ಹಿಂದಿಕ್ಕಿರುವ ಶ್ರೀನಿಧಿ ಶೆಟ್ಟಿ ಈಗ ನಂ 1 ಪಟ್ಟ ಪಡೆದಿದ್ದಾರೆ.

ದೇಶದ 'ಮೋಸ್ಟ್ ಡಿಸೈರೇಬಲ್ ವ್ಯಕ್ತಿ' ಪಟ್ಟಿಯಲ್ಲಿ ಸುದೀಪ್ ಗೆ ಸ್ಥಾನ

ಟೈಮ್ಸ್ 'ಮೋಸ್ಟ್ ಡಿಸೈರಬಲ್ ವುಮೆನ್ 2016'ಪಟ್ಟಿಯಲ್ಲಿ ಯಾವ ಯಾವ ನಟಿಯರು ಯಾವ ಸ್ಥಾನದಲ್ಲಿ ಇದ್ದಾರೆ ಎಂಬುದು ಇಲ್ಲಿದೆ ಓದಿ...

ನಂ.1 ಆದ ಕನ್ನಡತಿ

ಟೈಮ್ಸ್ 'ಮೋಸ್ಟ್ ಡಿಸೈರಬಲ್ ವುಮೆನ್ 2016' ಪಟ್ಟಿಯ ಮೊದಲ ಸ್ಥಾನದಲ್ಲಿ ನಟಿ ಶ್ರೀ ನಿಧಿ ಶೆಟ್ಟಿ ಇದ್ದಾರೆ. ಮಾಡೆಲಿಂಗ್ ನಲ್ಲಿ ದೊಡ್ಡ ಹೆಸರು ಮಾಡಿರುವ ಕನ್ನಡತಿ ಶ್ರೀನಿಧಿ ಶೆಟ್ಟಿ ಸದ್ಯ ಯಶ್ ಅವರ 'ಕೆ.ಜಿ.ಎಫ್' ಸಿನಿಮಾದ ನಾಯಕಿ.

ಟಾಪ್ 10 ಸ್ಥಾನದಲ್ಲಿ

ಜ್ಯಾಕ್ಲಿನ್ ಫರ್ನಾಂಡಿಸ್ (2) ಪ್ರಿಯಾಂಕಾ ಚೋಪ್ರಾ (3), ದೀಪಿಕಾ ಪಡುಕೋಣೆ (4), ಕತ್ರೀನಾ ಕೈಫ್ (5) ಸನ್ನಿ ಲಿಯೋನ್ (6), ಲೋಪಮುದ್ರ ರೌತ್ (7), ಆಮಿ ಜಾಕ್ಸನ್ (8), ಪ್ರಿಯದರ್ಶನಿ ಚಟರ್ಜಿ (9), ವರ್ತಿಕಾ ಸಿಂಗ್ (10) ಈ ಎಲ್ಲ ನಟಿಯರು ಟಾಪ್ 10 ನಲ್ಲಿ ಸ್ಥಾನವನ್ನು ಗಿಟ್ಟಿಸಿದ್ದಾರೆ.

ಬಾಲಿವುಡ್ ಬೆಡಗಿಯರ ಹವಾ

'ಮೋಸ್ಟ್ ಡಿಸೈರಬಲ್ ವುಮೆನ್ 2016' ಪಟ್ಟಿಯಲ್ಲಿ ಬಹುಪಾಲು ಬಾಲಿವುಡ್ ಚೆಲುವೆಯರೇ ಇದ್ದಾರೆ. ಪ್ರಮುಖವಾಗಿ ಅಲಿಯಾ ಭಟ್(12), ಶ್ರದ್ಧಾ ಕಪೂರ್(13), ಯಾಮಿ ಗೌತಮ್(18), ಕಂಗನಾ ರಣವತ್(23), ಸೋನಂ ಕಪೂರ್(24), ದಿಶಾ ಪಟಾನಿ(19) ಮತ್ತು ಉರ್ವಶಿ ರೌಟೇಲಾ(17) ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ಬಿ ಟೌನ್ ತಾರೆಯರು.

ಕೃತಿ ಕರಬಂದ

50 ಜನರ 'ಮೋಸ್ಟ್ ಡಿಸೈರಬಲ್ ವುಮೆನ್ 2016' ಪಟ್ಟಿಯಲ್ಲಿ ಕನ್ನಡದ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ನಟಿ ಕೃತಿ ಕರಬಂದ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಕೃತಿ ಕರಬಂದ 40ನೇ ಸ್ಥಾನದಲ್ಲಿದ್ದಾರೆ.

ಸೌತ್ ನಟಿಯರು

ದಕ್ಷಿಣ ಭಾರತದ ನಟಿಯರಾದ ಶೃತಿ ಹಾಸನ್(21), ತಮನ್ನಾ ಭಾಟಿಯಾ(25), ಶ್ರಿಯಾ ಶರಣ್(27) ನಯನ ತಾರ(44), 'ಮೋಸ್ಟ್ ಡಿಸೈರಬಲ್ ವುಮೆನ್ 2016' ಪಟ್ಟಿಯಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

English summary
The Times Most Desirable women is out and Miss Supranational Srinidhi Ramesh Shetty is The Most Desirable woman of 2016.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada