»   » ಪಾರದರ್ಶಕ ಕಿಟಕಿ ಕಾರಿನಲ್ಲಿ 'ದರ್ಶನ್' ದರ್ಶನ

ಪಾರದರ್ಶಕ ಕಿಟಕಿ ಕಾರಿನಲ್ಲಿ 'ದರ್ಶನ್' ದರ್ಶನ

Posted By:
Subscribe to Filmibeat Kannada
<ul id="pagination-digg"><li class="next"><a href="/news/black-film-tinted-glass-banned-supreme-court-order-065850.html">Next »</a></li></ul>
Darshan
ಕಾರುಗಳ ಕಿಟಕಿಗಳಿಗೆ ಅಳವಡಿಸಲಾಗಿರುವ ಟಿಂಟೆಡ್ ಗ್ಲಾಸ್ ಮತ್ತು ಬ್ಲಾಕ್ ಫಿಲಂ ಗಳನ್ನು ಜೂನ್ 5, 2012 ರೊಳಗೆ ತೆಗೆಸಲು ಸರ್ಕಾರ ಆದೇಶ ಹೊರಡಿಸಿದ್ದು ಗೊತ್ತೇ ಇದೆ. ಅದಕ್ಕನುಸಾರವಾಗಿ ಕಾರುಗಳ ಮಾಲೀಕರು ಅವುಗಳನ್ನು ತೆಗೆಸಿದ್ದಾರೆ. ತೆಗೆಸದಿದ್ದ ಕೆಲವರು ನಿಗಧಿತ ದಂಡ ಕಟ್ಟಿದ್ದಾರೆ.

ಈ ತೀರ್ಪು ಹೊರಡಿಸಿ ಸರ್ಕಾರ ಆದೇಶ ಹೊರಡಿಸಿದಾಗ ಸಹಜವಾಗಿಯೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳಿಗೆ ಈ ತೀರ್ಪು ಸಾಕಷ್ಟು ಪೇಚಾಟ ತಂದಿದೆ. ಸರ್ಕಾರದ ಆದೇಶವನ್ನು ಧಿಕ್ಕರಿಸುವಂತೆ ಇಲ್ಲ. ಆದರೆ ಪಾರದರ್ಶಕ ಗ್ಲಾಸಿನ ಕಾರಿನಲ್ಲಿ ಹೋದರೆ ಅಭಿಮಾನಿಗಳು ಮುತ್ತಿಗೆ ಹಾಕುವುದನ್ನು ತಪ್ಪಿಸಿಕೊಳ್ಳುವುದೂ ಕಷ್ಟ.

ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ ಈ ವಿಚಾರ ಎಲ್ಲಾ ಸೆಲೆಬ್ರಿಟಿಗಳ ಮನದಲ್ಲಿ ಹಾದು ಹೋಗಿದೆ. ಎಲ್ಲಾ ಸಮಸ್ಯೆಗಳಿಗೂ ಕಾಲವೇ ಉತ್ತರ ಹೇಳಲಿದೆ ಎಂದು ಸುಮ್ಮನಾಗಿದ್ದಾರೆ. ಇದೀಗ ರಸ್ತೆಯಲ್ಲಿ ಸಿನಿಮಾ ತಾರೆಯರು ಕಾರಿನಲ್ಲಿ ಹೋಗುತ್ತಿದ್ದರೆ ಅವರನ್ನು ನೋಡಿದ ಜನರು, ಅಭಿಮಾನಿಗಳು ಕೈಬೀಸುವುದು, ಮಾತನಾಡಿಸಲು ಪ್ರಯತ್ನಿಸುವುದು ನಡೆದಿದೆ.

ಅಷ್ಟೇ ಅಲ್ಲ, ಸಿಗ್ನಲ್ಲುಗಳಲ್ಲಿ ತಮ್ಮ ಮೆಚ್ಚಿನ ತಾರೆಯರನ್ನು ನೋಡಿದ ಅಭಿಮಾನಿಗಳು ಬಂದು ಮುತ್ತಿಗೆ ಹಾಕುತ್ತಿದ್ದಾರೆ. ಹಸ್ತಾಕ್ಷರ ಕೇಳುತ್ತಿದ್ದಾರೆ. ಜೊತೆಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅಭಿಮಾನಿಗಳ ತಿಕ್ಕಾಟ, ನೂಕಾಟ ಜಾಸ್ತಿಯಾಗುವುದು ಸಹಜ.

ಪೊಲೀಸರಿಗಂತೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟ್ರಾಫಿಕ್ ಪೊಲೀಸರಿಗಂತೂ ಆ ಕಡೆ ಸಿಗ್ನಲ್ ನೋಡಬೇಕೋ ಅಥವಾ ಎಲ್ಲಾ ದಿಕ್ಕುಗಳಿಂದ ತಾರೆಯರಿಗೆ ಮುತ್ತಿಕೊಳ್ಳುವ ಅಭಿಮಾನಿಗಳನ್ನು ಸಂಭಾಳಿಸಬೇಕೋ ತಿಳಿಯದಂತಾಗಿದೆ. ವಾಹನಗಳ ಸರಮಾಲೆ ರಸ್ತೆಯುದ್ದಕ್ಕೂ ಹಬ್ಬಿ ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/black-film-tinted-glass-banned-supreme-court-order-065850.html">Next »</a></li></ul>

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada