'ಹಾಡುಹಕ್ಕಿ ಹಾಡು' ಸಿನಿಮಾದೊಂದಿಗೆ 'ಬೆಳ್ಳಿ ಮಾತು'
ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರತಿ ಶನಿವಾರ ನಡೆಸುವ 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಈ ಶನಿವಾರ 'ಹಾಡುಹಕ್ಕಿ ಹಾಡು' ಮಕ್ಕಳ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಆಗಸ್ಟ್ 29 ಶನಿವಾರದಂದು ಚಿತ್ರಪ್ರದರ್ಶನ ಸಂವಾದ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ವಿ.ನಾಗೇಂದ್ರ ಶಾ ಅವರಿಂದ 'ಬೆಳ್ಳಿಮಾತು' ಸಂವಾದ ನಡೆಯಲಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಪ್ರತಿ ವರ್ಷ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಆಯೋಜಿಸುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ವಾರವು ಚಿತ್ರ ಪ್ರೇಮಿಗಳನ್ನು ಒಂದೆಡೆ ಕಲೆಹಾಕಿ ಪ್ರಬುದ್ಧ ಚಲನಚಿತ್ರ ಪ್ರೇಕ್ಷಕ ಹಾಗೂ ನಿರ್ಮಾಪಕರ ಹಂದರವನ್ನು ಕಟ್ಟುವುದು 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದ ಉದ್ದೇಶ.['ಪ್ರಕೃತಿ' ಸಿನಿಮಾ ಜೊತೆ ಬೆಳ್ಳಿ ಸಿನಿಮಾ-ಬೆಳ್ಳಿ ಮಾತು]
'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಈ ವಾರದ ಕಾರ್ಯಕ್ರಮ ಬೆಂಗಳೂರು ಮಿಲ್ಲರ್ಸ್ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಗಸ್ಟ್ 29 ರಂದು ಸಂಜೆ 4 ಗಂಟೆಗೆ ನಡೆಯಲಿದೆ.['ಗಾಂಧಿ' ಚಿತ್ರದ ಜೊತೆ ಬೆಳ್ಳಿ ಸಿನಿಮಾ-ಬೆಳ್ಳಿ ಮಾತು]
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಗೋಪಾಲ ವಾಜಪೇಯಿ, ಪರಿಸರ ಚಿಂತಕ ಸುಧೀಂದ್ರ ಹಾಲ್ದೊಡ್ಡೇರಿ ಹಾಗು ಚಿತ್ರ ನಿರ್ಮಾಪಕ ಯಶವಂತ ಸರದೇಶಪಾಂಡೆ ಮುಂತಾದವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಂದು ಸಬ್ ರಿಜಿಸ್ಟ್ರಾರ್ ಹೆಚ್.ಬಿ ದಿನೇಶ್ ಅವರು ತಿಳಿಸಿದ್ದಾರೆ.


Click it and Unblock the Notifications











