For Quick Alerts
  ALLOW NOTIFICATIONS  
  For Daily Alerts

  'ಮಗಳು ಜಾನಕಿ' ಧಾರಾವಾಹಿ ನಟಿ ನಿಧನ : ದಿಗ್ಭ್ರಮೆಗೊಂಡ ಸೀತಾರಾಮ್

  |
  Magalu Janaki Serial : ಮಗಳು ಜಾನಕಿ ಖ್ಯಾತಿಯ ನಟಿ ಶೋಭಾ ಸಾವಿಗೆ ಸಂತಾಪ ಸೂಚಿಸಿದ ಟಿ ಎನ್ ಸೀತಾರಾಮ್

  'ಮಗಳು ಜಾನಕಿ' ಧಾರಾವಾಹಿಯ ನಟಿ ಶೋಭಾ ನಿನ್ನೆ (ಜುಲೈ 17) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಚಿತ್ರದುರ್ಗದ ಬಳಿ ಈ ದುರ್ಗಟನೆ ನಡೆದಿದೆ.

  ಅಪಘಾತದಲ್ಲಿ ಸಾವನಪ್ಪಿದ 'ಮಗಳು ಜಾನಕಿ' ಖ್ಯಾತಿಯ ನಟಿ ಶೋಭಾ ಅಪಘಾತದಲ್ಲಿ ಸಾವನಪ್ಪಿದ 'ಮಗಳು ಜಾನಕಿ' ಖ್ಯಾತಿಯ ನಟಿ ಶೋಭಾ

  ಶೋಭಾ ಅವರ ನಿಧನಕ್ಕೆ ಧಾರಾವಾಹಿಯ ನಿರ್ದೇಶಕ ಟಿ ಎನ್ ಸೀತಾರಾಮ್ ಸಂತಾಪ ಸೂಚಿಸಿದ್ದಾರೆ. ''ಮಗಳು ಜಾನಕಿ ಯಲ್ಲಿ ಮಂಗಳಕ್ಕನ ಪಾತ್ರ ಮಾಡುತ್ತಿದ್ದ ಶೋಭಾ, ರಸ್ತೆ ಅಪಘಾತ ದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಸದಾ ನಗುಮುಖದ, ಅಪಾರ ಪ್ರತಿಭೆಯ, ಸೌಜನ್ಯ ತುಂಬಿದ ಮಂಗಳಕ್ಕನ ಅನಿರೀಕ್ಷಿತ ಸಾವು ನನ್ನನ್ನು ದಿಗ್ಭ್ರಮೆ ಗೊಳಿಸಿದೆ ತಂಡದ ಪರವಾಗಿ ತೀವ್ರ ಸಂತಾಪಗಳು'' ಎಂದು ಫೇಸ್ ಬುಕ್ ಖಾತೆಯ ಮೂಲಕ ನಮನ ಸಲ್ಲಿಸಿದ್ದಾರೆ.

  ನಿನ್ನೆ ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4 ಕುಂಚಿಗನಾಳು ಗ್ರಾಮದ ಬಳಿ ಪ್ರಯಾಣ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು ಎಂಟು ಮಂದಿ ಇದ್ದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ.ಅಪಘಾತದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಪಘಾತತ ಭೀಕರತೆಗೆ ಇನೋವಾ ಕಾರು ಪೂರ್ತಿ ಜಖಂ ಆಗಿದೆ.

  ಇನ್ನು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಜಾನಕಿ ಧಾರಾವಾಹಿಯಲ್ಲಿ ಮಂಗಳ ಪಾತ್ರವನ್ನು ಶೋಭಾ ನಿರ್ವಹಿಸುತ್ತಿದ್ದರು.

  English summary
  Director TN Seetharam condolences for 'Magalu Janaki' actress Shobha death. Shobha got accident yesterday (July 17th) near Chitradurga .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X