ಕನ್ನಡ ಚಿತ್ರರಂಗಕ್ಕೆ ಬಂದ ಮತ್ತೊಬ್ಬ ಮಹಿಳಾ ನಿರ್ದೇಶಕಿ
ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರ ಕಡಿಮೆ ಇದೆ. ಹೀಗಿರುವಾಗಲೇ, ಈಗ ಹೊಸ ನಿರ್ದೇಶಕಿಯೊಬ್ಬರು ತಮ್ಮ ಹೊಸ ಪ್ರಯತ್ನದ ಮೂಲಕ ಚಿತ್ರರಂಗಕ್ಕೆ ಬಂದಿದ್ದಾರೆ.
ಕಿರುತೆರೆಯಲ್ಲಿ ನಟಿ ಹಾಗೂ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದ ತೃಪ್ತಿ ಸುಂದರ್ ಈಗ ಸಿನಿಮಾ ಮಾಡಲು ಹೊರಟಿದ್ದಾರೆ. 'ನಲ್ಕೆ' ಎನ್ನುವ ಸಿನಿಮಾವನ್ನು ತೃಪ್ತಿ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಗಳು ಈಗ ಬಿಡುಗಡೆಯಾಗಿವೆ.

ನಿರ್ದೇಶಕ ಟಿ ಎನ್ ಸೀತಾರಾಮ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ತೃಪ್ತಿ ಅವರ 'ಶ್ಲೋಕ' ಬ್ಯಾನರ್ ನಲ್ಲಿಯೇ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಕಿರಣ್ ಹಂಪಾಪುರ ಸಿನಿಮಾಗೆ ಕ್ಯಾಮರಾ ಹಿಡಿಯಲಿದ್ದಾರೆ.
ಈ ಸಿನಿಮಾ ಯಕ್ಷಗಾನದ ಬಗ್ಗೆ ಇದ್ದು, ಪೋಸ್ಟರ್ ಗಳು ಸಹ ಸೊಗಸಾಗಿವೆ. ಮಹಿಳಾ ನಿರ್ದೇಶಕರು ಕಡಿಮೆಯಾಗಿರುವ ಈ ಸಮಯದಲ್ಲಿ ತೃಪ್ತಿ ಸುಂದರ್ ಹೇಗೆ ಜಾದು ಮಾಡುತ್ತಾರೆ ನೋಡಬೇಕು.
English summary
Kannada director TN Seetharam launched 'Nalke' kannada movie poster.


Click it and Unblock the Notifications