For Quick Alerts
  ALLOW NOTIFICATIONS  
  For Daily Alerts

  ನೀವು ಯಾರಿಗೆ ಬೇಕು.? ನಾವು ದರ್ಶನ್ ನ ನೋಡಬೇಕು.! ಅಭಿಮಾನಿಗಳು ಹೀಗೂ ಉಂಟು.!

  |

  ಎಲ್ಲಾ ಸ್ಟಾರ್ ನಟರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ.! 'ದಾಸ' ದರ್ಶನ್ ಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ಫ್ಯಾನ್ಸ್ ಇದ್ದಾರೆ. ದರ್ಶನ್ ರಿಂದ ಸ್ಫೂರ್ತಿ ಪಡೆದು ಕೆಲ ಯುವ ನಟರು ಚಿತ್ರರಂಗ ಪ್ರವೇಶಿಸಿದ್ದಾರೆ.

  ಯುವ ನಟರಿಗೆ ಪ್ರೋತ್ಸಾಹ ಕೊಡುವ ಸಲುವಾಗಿ, ಹೊಸಬರ ಚಿತ್ರಗಳ ಟ್ರೈಲರ್ ಲಾಂಚ್, ಆಡಿಯೋ ಲಾಂಚ್ ಮುಂತಾದ ಕಾರ್ಯಕ್ರಮದಲ್ಲಿ ದರ್ಶನ್ ಭಾಗವಹಿಸಿ ಶುಭ ಹಾರೈಸುತ್ತಾರೆ.

  ಇತ್ತೀಚೆಗಷ್ಟೇ ಯುವ ನಟ ಪ್ರಮೋದ್ ಅಭಿನಯದ 'ಮತ್ತೆ ಉದ್ಭವ' ಚಿತ್ರದ ಟ್ರೈಲರ್ ನ 'ಒಡೆಯ' ದರ್ಶನ್ ಲಾಂಚ್ ಮಾಡಿದರು. ಈ ವೇಳೆ ಟಿ.ಎನ್.ಸೀತಾರಾಮ್ ಒಂದು ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟರು. ಅದೇನಪ್ಪಾ ಅಂದ್ರೆ...

  ಮುಖ್ಯ ಅತಿಥಿ ದರ್ಶನ್

  ಮುಖ್ಯ ಅತಿಥಿ ದರ್ಶನ್

  'ಮತ್ತೆ ಉದ್ಭವ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಾಗೇ, ಟಿ.ಎನ್.ಸೀತಾರಾಮ್ ಕೂಡ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. 'ಮತ್ತೆ ಉದ್ಭವ' ಚಿತ್ರದ ಟ್ರೈಲರ್ ಲಾಂಚ್ ಆದ್ಮೇಲೆ ಮಾತಿಗಿಳಿದ ಟಿ.ಎನ್.ಸೀತಾರಾಮ್ ಅವತ್ತು ಬೆಳಗ್ಗೆ ನಡೆದ ಘಟನೆಯನ್ನು ವಿವರಿಸಿದರು.

  ಅಂದು ರಸ್ತೆಯಲ್ಲಿ ನಿಂತು ದರ್ಶನ್ ಸನ್ಮಾನ ನೋಡಿದ ಬಾಲಕ ಈಗ ಸ್ಟಾರ್ಅಂದು ರಸ್ತೆಯಲ್ಲಿ ನಿಂತು ದರ್ಶನ್ ಸನ್ಮಾನ ನೋಡಿದ ಬಾಲಕ ಈಗ ಸ್ಟಾರ್

  ನೀವು ಯಾರಿಗೆ ಬೇಕು.?

  ನೀವು ಯಾರಿಗೆ ಬೇಕು.?

  ''ಇವತ್ತು ಎಲ್ಲರೂ ಖ್ಯಾತ ನಟ ದರ್ಶನ್ ರನ್ನ ಹೆಚ್ಚಾಗಿ ನೋಡಲು ಬಂದಿದ್ದೀರಿ. ಇವತ್ತು ಬೆಳಗ್ಗೆ ನನಗೆ ಯಾರೋ ಫೋನ್ ಮಾಡಿ, ''ಸಂಜೆ 'ಮತ್ತೆ ಉದ್ಭವ' ಟ್ರೈಲರ್ ಲಾಂಚ್ ಕಾರ್ಯಕ್ರಮ ಇದ್ಯಲ್ಲಾ.. ಅದಕ್ಕೆ ನನ್ನನ್ನು ಒಳಗೆ ಬಿಡಿಸಿ ಅಂತ ಕೇಳಿದರು. ಯಾಕೆ.. ನಾನು ಹೊರಗೆ ಬೇಕಾದರೆ ಸಿಗುವೆ ಅಂತ ಹೇಳಿದೆ. ನೀವಲ್ಲ ಸರ್, ನೀವು ಯಾರಿಗೆ ಬೇಕು.. ದರ್ಶನ್ ಅವರನ್ನ ನೋಡಬೇಕು ಅಂತ ಹೇಳಿದರು'' ಎಂದು ಟಿ.ಎನ್.ಸೀತಾರಾಮ್ ವೇದಿಕೆ ಮೇಲೆ ಹೇಳಿದರು.

  ದರ್ಶನ್ ಅಂದ್ರೆ ದೇವರು, ಧೈರ್ಯ, ಧಮ್ ಎಂದು ಗುಣಗಾನ ಮಾಡಿದ ನಟ ಯಾರು ಗೊತ್ತಾ.?ದರ್ಶನ್ ಅಂದ್ರೆ ದೇವರು, ಧೈರ್ಯ, ಧಮ್ ಎಂದು ಗುಣಗಾನ ಮಾಡಿದ ನಟ ಯಾರು ಗೊತ್ತಾ.?

  ನಕ್ಕ ದರ್ಶನ್

  ನಕ್ಕ ದರ್ಶನ್

  ಟಿ.ಎನ್.ಸೀತಾರಾಮ್ ಹಾಗೆ ಹೇಳುತ್ತಿದ್ದಂತೆಯೇ, ಅಲ್ಲಿ ನೆರೆದಿದ್ದವರು ಹಾಗೂ ಪಕ್ಕದಲ್ಲೇ ಕುಳಿತಿದ್ದ ದರ್ಶನ್ ಕಿಸಕ್ಕನೆ ನಕ್ಕು ಬಿಟ್ಟರು. ಬಳಿಕ ಚಿತ್ರತಂಡಕ್ಕೆ ಟಿ.ಎನ್.ಸೀತಾರಾಮ್ ಶುಭಾಶಯ ಕೋರಿದರು.

  ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!

  ಜನ ಜಾತ್ರೆ

  ಜನ ಜಾತ್ರೆ

  ಟಿ.ಎನ್.ಸೀತಾರಾಮ್ ಹೇಳಿದಂತೆ, ದರ್ಶನ್ ರನ್ನ ನೋಡಲು ಚಾಲೆಂಜಿಂಗ್ ಸ್ಟಾರ್ ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಜನ ಸಾಗರವೇ ಹರಿದು ಬಂದಿರುತ್ತದೆ. ದರ್ಶನ್ ಹುಟ್ಟುಹಬ್ಬದ ದಿನವಂತೂ, ಅವರ ಮನೆ ಮುಂದೆ ಅಕ್ಷರಶಃ ಜನ ಜಾತ್ರೆ. ಚಿತ್ರೀಕರಣ ನಡೆಯುವಾಗಲೂ ಅಷ್ಟೇ, ದರ್ಶನ್ ರನ್ನ ಮೀಟ್ ಮಾಡಲು ಜನಜಂಗುಳಿ ಇದ್ದೇ ಇರುತ್ತೆ. ಎಷ್ಟೇ ಆಗಲಿ, ಅಭಿಮಾನಿಗಳ ಪಾಲಿಗೆ ದರ್ಶನ್ 'ಚಕ್ರವರ್ತಿ' ಅಲ್ಲವೇ.?!

  English summary
  TN Seetharam spoke about Darshan craze.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X