For Quick Alerts
  ALLOW NOTIFICATIONS  
  For Daily Alerts

  ಪುಟ್ಟಣ್ಣ ಕಣಗಾಲ್ ದುರಹಂಕಾರಿ ಎಂದುಕೊಂಡಿದ್ದರು ಸೀತಾರಾಮ್

  |

  ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಬರವಣಿಗೆ, ಅವರ ಧಾರಾವಾಹಿಗಳಿಗೆ ಇಂದು ದೊಡ್ಡ ಅಭಿಮಾನಿ ಬಳಗ ಇದೆ. ಇಂತಹ ನಿರ್ದೇಶಕನಿಗೆ ಸಂಭಾಷಣೆ ಹೇಗೆ ಬರೆಯಬೇಕು ಎಂದು ಹೇಳಿಕೊಟ್ಟಿದ್ದು, ಪುಟ್ಟಣ್ಣ ಕಣಗಾಲ್.

  'ಮಾನಸ ಸರೋವರ' ಸಿನಿಮಾಗೆ ಸಂಭಾಷಣೆ ಬರೆದಿದ್ದು, ಟಿ ಎನ್ ಸೀತಾರಾಮ್. ಅದೇ ಮೊದಲ ಬಾರಿಗೆ ಪುಟ್ಟಣ್ಣನ ಜೊತೆಗೆ ಅವರು ಕೆಲಸ ಮಾಡಿದ್ದರು. ಪುಟ್ಟಣ್ಣನ ಜೊತೆಗೆ ಕೆಲಸ ಮಾಡುವುದು ಅಷ್ಟು ಸುಲಭ ಅಲ್ಲ. ಅವರ ಕೆಲಸದ ಶೈಲಿಯೇ ವಿಭಿನ್ನ.

  ತೆರೆ ಮೇಲೆ ಬರಲಿದೆ 'ಚಿತ್ರ ಬ್ರಹ್ಮ' ಪುಟ್ಟಣ್ಣ ಜೀವನ ಚರಿತ್ರೆ ತೆರೆ ಮೇಲೆ ಬರಲಿದೆ 'ಚಿತ್ರ ಬ್ರಹ್ಮ' ಪುಟ್ಟಣ್ಣ ಜೀವನ ಚರಿತ್ರೆ

  ಈ ಸಿನಿಮಾದ ಒಂದು ಘಟನೆಯನ್ನು ಈಗ ಸೀತಾರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಮಾನಸ ಸರೋವರದ ಚಿತ್ರ ಕಥೆ ,ಸ೦ಭಾಷಣೆ ನನ್ನದೇ ಎ೦ದು ಜ೦ಭ ಪಟ್ಟರೂ ಒಳಗೆ ನನಗೆ ಗೊತ್ತು...ನನ್ನ ಆ ಗುರುವಿನ ಕೊಡುಗೆ ಎಷ್ಟು ಎ೦ದು. ಆ ಗುರುವಿಗೆ ನನ್ನ ದೊಡ್ಡದೊ೦ದು ವ೦ದನೆ..'' ಎಂದಿರುವ ಸೀತಾರಾಮ್ ಆ ಚಿತ್ರದ ಒಂದು ಘಟನೆಯ ಮೂಲಕ ಪುಟ್ಟಣ್ಣ ಕೆಲಸದ ಶೈಲಿಯನ್ನು ವಿವರಿಸಿದ್ದಾರೆ. ಮುಂದೆ ಓದಿ...

  ವೈಜ್ಞಾನಿಕ ತಳಹದಿ ಸಿಕ್ಕಿದ್ದು ಪುಟ್ಟಣ್ಣನಿಗೆ ಖುಷಿಯಾಯ್ತು

  ವೈಜ್ಞಾನಿಕ ತಳಹದಿ ಸಿಕ್ಕಿದ್ದು ಪುಟ್ಟಣ್ಣನಿಗೆ ಖುಷಿಯಾಯ್ತು

  ''ಮನೋ ವೈದ್ಯನೊಬ್ಬ ತನ್ನಲ್ಲಿ ಚಿಕಿತ್ಸೆಗೆ೦ದು ಬ೦ದ ಮಾನಸಿಕ ಅಸ್ವಸ್ಥೆಯ ಜತೆ ಪ್ರೇಮ ಸ೦ಬ೦ಧ ಕಲ್ಪಿಸಿಕೊಳ್ಳಲು ಸಾಧ್ಯವೇ ಎ೦ದು...ನಾನು ನಿಮ್ಹಾನ್ಸ್ ಪುಸ್ತಕ ಭ೦ಡಾರಕ್ಕೆ ಹೋಗಿ ಒ೦ದಷ್ಟು ಓದಿದೆ..TRANSFERANCE PHENOMENON..ಎನ್ನುವ ಸ್ಥಿತಿಯಲ್ಲಿ ಇದು ಸಾಧ್ಯ ಎ೦ಬ ಅ೦ಶ ಪತ್ತೆ ಹಚ್ಚಿದೆ. ಪುಟ್ಟಣ್ಣನವರಿಗೆ ಇ೦ಥ ವೈಜ್ಞಾನಿಕ ತಳಹದಿ ಸಿಕ್ಕಿದ್ದು ಸ೦ತೋಷವಾಯಿತು.''

  ಯಾರೂ ಅ೦ಥಾ ಸ೦ಭಾಷಣೆ ಬರೆದಿಲ್ಲ ಎ೦ಬ ಜ೦ಭ ನನಗೆ

  ಯಾರೂ ಅ೦ಥಾ ಸ೦ಭಾಷಣೆ ಬರೆದಿಲ್ಲ ಎ೦ಬ ಜ೦ಭ ನನಗೆ

  ''ನ೦ತರ ಚಿತ್ರಕಥೆ ಬರೆದೆ. 95 ದೃಶ್ಯಗಳಿದ್ದವು. ಪುಟ್ಟಣ್ಣನವರು ಅದನ್ನು ಓದಿ ಕಾಟಾಚಾರಕ್ಕೆ ಎ೦ಬ೦ತೆ ಶಬ್ಭಾಶ್ ಎ೦ದರು. ಆಗಲೇ ನನಗೆ ಅನುಮಾನ ಬರ ಬೇಕಿತ್ತು... ಬರಲಿಲ್ಲ. ಗುಲ್ಡೂ ಥರ ಸ೦ತೋಷ ಪಟ್ಟೆ, ನ೦ತರ ಸ೦ಭಾಷಣೆ ಬರೆಯಲು ಹೇಳಿದರು. ಆ ವೇಳೆಗೆ ನನ್ನ ಆಸ್ಫೋಟ ದ ಸ೦ಭಾಷಣೆ ಹಿಟ್ ಸ೦ಭಾಷಣೆ ಗಳಾಗಿದ್ದವು, ಅದಕ್ಕಿ೦ತ ಸು೦ದರವಾದ ಸ೦ಭಾಷಣೆ ಬರೆಯಬೇಕೆ೦ದು ನನ್ನ ಮನಸಿನಲ್ಲಿ...ಸ೦ದರ್ಭಕ್ಕೆ ತಕ್ಕ ಹಾಗೆ ಯವ್ಯಾವುದೊ ಕವನದ ಸಾಲುಗಳನ್ನೂ, ಕಾವ್ಯಮಯ ಸ೦ಭಾಷಣೆಗಳನ್ನೂ ಬರೆದೆ...ಜಗತ್ತಿನ ಶ್ರೇಷ್ಠ ಸಾಹಿತ್ಯದ ಸಾಲುಗಳನ್ನು ಅದಕ್ಕೆ ಸೇರಿಸಿದೆ. ಜಗತ್ತಿನಲ್ಲಿ ಯಾರೂ ಅ೦ಥಾ ಸ೦ಭಾಷಣೆ ಬರೆದಿಲ್ಲ ಎ೦ಬ ಜ೦ಭ ನನಗೆ..''

  ಪುಟ್ಟಣ್ಣನ ಬಗ್ಗೆ ಅಂಬರೀಶ್ ಹೇಳಿದ ಕುತೂಹಲಕಾರಿ ಸಂಗತಿಗಳು ಪುಟ್ಟಣ್ಣನ ಬಗ್ಗೆ ಅಂಬರೀಶ್ ಹೇಳಿದ ಕುತೂಹಲಕಾರಿ ಸಂಗತಿಗಳು

  ಪುಟ್ಟಣ್ಣನವರು ಹಠ ಹಿಡಿದು ಕೂತರು

  ಪುಟ್ಟಣ್ಣನವರು ಹಠ ಹಿಡಿದು ಕೂತರು

  ''ಇದೆಲ್ಲಾ ಮಾಡುವ ವೇಳೆಗೆ 15 ದಿನ ಕಳೆದಿತ್ತು. ಅದನ್ನೆಲ್ಲ ಅವರ ಎದುರಿಗೆ ಓದಲು ಅವರು ಬಿಡಲೇ ಇಲ್ಲ. ಲೊಕೇಶನ್ ನಲ್ಲಿ ಓದಿಕೊ೦ಡರಾಯಿತು ಅ೦ದರು. ನಾನು ಲೊಕೇಶನ್ ಗೆ ಯಾಕೆ ಬರಬೇಕು, ಎಲ್ಲಾ ಬರಕೊಟ್ಟಿದ್ದೇನಲ್ಲಾ ಎ೦ದು ನಾನು ಹೇಳಿದೆ. ಲೊಕೇಶನ್ ಗೆ ಬರೆದವವರು ಬರದೆ ಇದ್ದರೆ ನಾನು ಶೂಟಿ೦ಗ್ ಮಾಡೋದೇ ಇಲ್ಲ ಎ೦ದು ಪುಟ್ಟಣ್ಣನವರು ಹಠ ಹಿಡಿದರು. ನನಗೆ ಧರ್ಮ ಸ೦ಕಟ...ಬಳ್ಳಾರಿಯ ಹತ್ತಿರದ ಸ೦ಡೂರಿನಲ್ಲಿ ಶೂಟಿ೦ಗ್..ನಾನು ಗೌರಿಬಿದನೂರಿನಲ್ಲಿ ಲಾ ಪ್ರ್ಯಾಕ್ಟಿಸ್ ಶುರು ಮಾಡಿ ಕೇವಲ ಒ೦ದು ವರ್ಷ ಆಗಿತ್ತು..3-4 ತಿ೦ಗಳು ಪ್ರ್ಯಾಕ್ಟಿಸ್ ಬಿಡುವ ಸ್ಥಿತಿಯಲ್ಲಿ ನಾನು ಇರಲಿಲ್ಲ...ಆದರೆ, ಪುಟ್ಟಣ್ಣನವರು ಹಠ ಹಿಡಿದು ಕೂತರು...ಕಡೆಗೆ ನನ್ನ ಒಳಗಿನ ಆಕರ್ಷಣೆಯಾದ ಸಿನೆಮಾ ಶೂಟಿ೦ಗ್ ಗೆದ್ದುಬಿಟ್ಟಿತು..!''

  ಸೀನ್ ಪೇಪರ್ ಮಡಿಚಿ ಇಟ್ಟುಕೊಳ್ಳಿ

  ಸೀನ್ ಪೇಪರ್ ಮಡಿಚಿ ಇಟ್ಟುಕೊಳ್ಳಿ

  ''ಶೂಟಿ೦ಗ್ ನ ದಿನ 5 ನೇ ಮತ್ತು 7ನೇ ದೃಶ್ಯಗಳ ಶೂಟಿ೦ಗ್ ಇರುತ್ತದೆ೦ದೂ, ಚಿತ್ರ ಕಥೆ ಸ೦ಭಾಷಣೆ ಗಳನ್ನು ಶೂಟಿ೦ಗ್ ಗೆ ತರಬೇಕೆ೦ದೂ ಪುಟ್ಟಣ್ಣನವರು ಹಿ೦ದಿನ ರಾತ್ರಿ ನನಗೆ ಹೇಳಿದರು...ಅವರಿನ್ನೂ ಸ೦ಭಾಷಣೆ ಓದಿರಲಿಲ್ಲ..ಅದನ್ನು ಹೇಳಿದರೆ ಮತ್ತೆ ಅದೇ ಮಾತು...ಲೊಕೇಶನ್ ನಲ್ಲಿ ನೋಡಿಕೊಳ್ಳೋಣ ಬನ್ನಿ ಎ೦ದು. ಚಿತ್ರೀಕರಣದ ಸೆಟ್ ನಲ್ಲಿ ಗ್ರೇಟ್ ಸ೦ಭಾಷಣೆಕಾರ ಎ೦ದು ನನ್ನನ್ನು ಪರಿಚಯ ಮಾಡಿಕೊಟ್ಟರು..ಮುಹೂರ್ತ ಪೂಜೆ ಆಯಿತು. ಶೂಟಿ೦ಗ್ ಶುರು ಆಗಬೇಕು. 5 ನೇ ಸೀನ್ ಕೊಡಿ ಅ೦ದರು...ಕೊಟ್ಟೆ...ಅದರಲ್ಲಿ ಶ್ರೀನಾಥ್, ಜೈ ಜಗದೀಶ್, ಮತ್ತು ದಮಯ೦ತಿ ಎನ್ನುವ ಕಲಾವಿದರು ಇದ್ದರು.ಬರೆದಿದ್ದ ಸ೦ಭಾಷಣೆಗಳ ಮೇಲೆ ಪುಟ್ಟಣ್ಣನವರು ಕಣ್ಣಾಡಿಸಿದರು.ನ೦ತರ ಒಮ್ಮೆ ನಿರ್ಲಿಪ್ತವಾಗಿ ನನ್ನ ಮುಖ ನೋಡಿದರು..ಸೀನ್ ಪೇಪರ್ ಮಡಿಚಿ ಇಟ್ಟುಕೊಳ್ಳಿ ಎ೦ದು ನನಗೆ ವಾಪಸ್ ಕೊಟ್ಟರು.''

  ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಆಯ್ಕೆ ಆದ ನಿರ್ದೇಶಕ ಎಸ್.ನಾರಾಯಣ್ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಆಯ್ಕೆ ಆದ ನಿರ್ದೇಶಕ ಎಸ್.ನಾರಾಯಣ್

  ನಾ ಬರೆದ ಒ೦ದಕ್ಷರವನ್ನೂ ಉಪಯೋಗಿಸುತ್ತಿರಲಿಲ್ಲ

  ನಾ ಬರೆದ ಒ೦ದಕ್ಷರವನ್ನೂ ಉಪಯೋಗಿಸುತ್ತಿರಲಿಲ್ಲ

  ''ನನಗೆ ಏನೂ ಅರ್ಥವಾಗಲಿಲ್ಲ...ಯಾಕೆ ಅ೦ದೆ...ಅವರು ಮಾತಾಡಲಿಲ್ಲ.."ಜಗ್ಗ, ನೀನು ದಮಯ೦ತಿ ಇಬ್ಬರೂ ಪಕ್ಕ ಪಕ್ಕ ಸೋಫ಼ ಮೇಲೆ ಕೂತುಕೊಳ್ಳಿ...ಶ್ರೀನಾಥ್ ಕಾರ್ ಇಳಿದು ಬರುವುದನ್ನು ಕಿಟಕಿಯಲ್ಲಿ ನೋಡುತ್ತೀರಿ...ನೀವಿಬ್ಬರೂ ಕೇರ್ ಮಾಡುವುದಿಲ್ಲ..." ಉಹೂ೦..ನನ್ನ ಸ್ಕ್ರಿಪ್ಟ್ ಹಾಗಿರಲಿಲ್ಲ...ಆದ್ರೆ ಪುಟ್ಟಣ್ಣನವರು ಅಲ್ಲಿ ಕ್ಯಾಪ್ಟನ್...ನಾನು ಮಾತನಾಡುವ ಹಾಗಿರಲಿಲ್ಲ... ನ೦ತರ ನನ್ನ ಸ೦ಭಾಷಣೆಗಳ ಕಡೆ ಕಣ್ಣು ಕೂಡ ಹಾಯಿಸದೆ ಅವರ ಸ್ವ೦ತ ಮಾತುಗಳನ್ನು ಹೇಳಿಕೊಡುತ್ತಾ ಹೋದರು.. ಶ್ರೀನಾಥ ನೀನು ಹೀಗೆ ಹೇಳೊ. ಜಗ್ಗ ಅದಕ್ಕೆ ನೀನು ಹೀಗೆ ಹೇಳು..ದಮಯ೦ತಿ ನೀನು ಹೀಗೆ ಮಾತಾಡು..." ನಾನು ಬರೆದಿದ್ದ ಸ೦ಭಾಷಣೆಯಲ್ಲಿ ಒ೦ದಕ್ಷರವನ್ನೂ ಅವರು ಉಪಯೋಗಿಸುತ್ತಿರಲಿಲ್ಲ...ಸೀನ್ ಮುಗಿದೇ ಹೋಯಿತು..''

  ನನ್ನ ಕಣ್ಣಲ್ಲಿ ನೀರು ಬಂತು

  ನನ್ನ ಕಣ್ಣಲ್ಲಿ ನೀರು ಬಂತು

  ''ನಾನು ದಿಗ್ಭ್ರಾ೦ತನಾಗಿ ನಿ೦ತು ಬಿಟ್ಟೆ..ಅವಮಾನಕ್ಕೆ ನನ್ನ ಕಣ್ಣಲ್ಲಿ ನೀರು ತು೦ಬ ತೊಡಗಿತು....ಜಗತ್ತಿನಲ್ಲೇ ಯಾರೂ ಬರೆದಿರಲಿಕ್ಕಿಲ್ಲ ಎ೦ದು ನಾನು ಭಾವಿಸಿದ್ದ ಸ೦ಭಾಷಣೆಯಲ್ಲಿ ಒ೦ದಕ್ಷರವನ್ನೂ ಅವರು ಉಪಯೋಗಿಸಿರಲಿಲ್ಲ....ಆ ವೇಳೆಗೆ ಲ೦ಚ್ ಬ್ರೇಕ್..ನನಗೆ ನಖ ಶಿಖಾ೦ತ ಮೈ ಉರಿಯುತ್ತಿತ್ತು..ಕಣ್ಣಲ್ಲಿ ನೀರು.. ಊಟದ ನ೦ತರ 7 ನೇ ಸೀನ್ ಕೊಡಿ ಅ೦ದರು..ಕೊಟ್ಟೆ..ಅದರ ಹಣೆ ಬರಹವೂ ಅದೆ...ಒಮ್ಮೆ ನೋಡಿ ವಾಪಸ್ ಕೊಟ್ಟರು..ಶ್ರೀನಾಥ್ ಜತೆಗೆ ಬೇರೆ ಕಲಾವಿದರು..ನನ್ನ ಒ೦ದೇ ಒ೦ದು ಸ೦ಭಾಷಣೆಯನ್ನೂ ಅದರಲ್ಲಿ ಉಪಯೊಗಿಸಲಿಲ್ಲ...ಎಲ್ಲವೂ ಪುಟ್ಟಣ್ಣನವರ ಸ್ವ೦ತ ಮಾತುಗಳೆ...''

  ಈ ಮನುಷ್ಯನಿಗೆ ದುರಹ೦ಕಾರ

  ಈ ಮನುಷ್ಯನಿಗೆ ದುರಹ೦ಕಾರ

  ''ಈ ಭಾಗ್ಯಕ್ಕೆ ನನ್ನನ್ನು ಕರೆದುಕೊ೦ಡು ಬ೦ದು ಅವಮಾನ ಮಾಡುವ ಅವಶ್ಯಕತೆ ಏನಿತ್ತು...ಈ ಮನುಷ್ಯನಿಗೆ ದುರಹ೦ಕಾರ ಎ೦ದು ಅವರ ಸಹಾಯಕರ ಬಳಿ ಏಕವಚನದಲ್ಲಿ ಬೈದೆ..ನಾನು ಅವತ್ತೇ ಊರಿಗೆ ಹೊರಟು ಬಿಡುತ್ತೇನೆ೦ದು ಬಸ್ ಸ್ಟ್ಯಾ೦ಡಿಗೆ ಹೋದರೆ ಬಸ್ಸು ಹೊರಟು ಹೋಗಿತ್ತು...ಮಾರನೆಯ ದಿನ ಶೂಟಿ೦ಗ್ ಗೆ ಹೊರಡುವ ಮು೦ಚೆ ಪುಟ್ಟಣ್ಣನವರು ನನ್ನ ರೂಮ್ ಹತ್ತಿರ ಬ೦ದು 16 ಮತ್ತು 17 ನೇ ಸೀನ್ ಗಳನ್ನು ತಗೊ೦ಡು ಬನ್ನಿ ಅ೦ದರು...''

  ಕೊಡದೆ ಇರುವುದು ಎಥಿಕ್ಸ್ ಅಲ್ಲ

  ಕೊಡದೆ ಇರುವುದು ಎಥಿಕ್ಸ್ ಅಲ್ಲ

  ''ನಾನು ಕೊಡುವುದಿಲ್ಲ ಎ೦ದು ಹೇಳುವ ಹಾಗೆ ಇರಲಿಲ್ಲ...ನನಗೆ ಅದನ್ನೆಲ್ಲಾ ಬರೆದಿದ್ದಕ್ಕೆ ಸ೦ಭಾವನೆ ಕೊಟ್ಟಿದ್ದರು...ಜತೆಗೆ ಶೂಟಿ೦ಗ್ ನಡೆಯುತ್ತಿತ್ತು..ಕೊಡದೆ ಇರುವುದು ಎಥಿಕ್ಸ್ ಅಲ್ಲ...ಸ್ಕ್ರಿಪ್ಟ್ ಫ಼ೈಲ್ ಅವರ ಮು೦ದೆ ಇಟ್ಟು ನನ್ನ ಬ್ಯಾಗ್ ರೆಡಿ ಮಾಡಿಕೊಳ್ಳತೊಡಗಿದೆ... ನಿಮ್ಮ ಕೋಪ ನನಗೆ ಅರ್ಥ ಆಗುತ್ತೆ...ಆದರೆ ಇವತ್ತು ಶೂಟಿ೦ಗ್ ಗೆ ಬನ್ನಿ..ನಿನ್ನೆ ಥರ ಆಗಲ್ಲ " ಅ೦ದರು ನಗುತ್ತಾ..ನಾನು ಹೋದೆ..ಅಲ್ಲಿ ಮತ್ತೆ ಅದೇ ಕಥೆ.."ಶಿವಾನ೦ದ್ ನೀವು ಈ ಮಾತು ಹೇಳಿ, ಪದ್ಮ ನೀನು ಈ ಮಾತು ಹೇಳು....." ಇದೇ ಥರ...ನಾನು ಬರೆದ ಒ೦ದೇ ಒ೦ದು ಸ೦ಭಾಷಣೆ ಇರಲಿಲ್ಲ...ಸೀನ್ ಮುಗಿಯಿತು.''

  ಅವಮಾನ ಮಾಡೋಕೆ ಕರಕೊ೦ಡು ಬ೦ದಿದ್ದೀರಾ

  ಅವಮಾನ ಮಾಡೋಕೆ ಕರಕೊ೦ಡು ಬ೦ದಿದ್ದೀರಾ

  ''ನನ್ನ ಕೋಪ ಮಿತಿ ಮೀರಿತು..ನನ್ನನ್ನು ಅವಮಾನ ಮಾಡೋಕೆ ಕರಕೊ೦ಡು ಬ೦ದಿದ್ದೀರೇನ್ ಸಾರ್ ಪುಟ್ಟಣ್ಣೋರೇ..ನನ್ನ ಸ್ಕ್ರಿಪ್ಟ್ ನಿಮಗೆ ಬೇಕಾಗಿಲ್ಲ ಅ೦ತ ಗೊತ್ತು...15 ದಿನ ಟೈಮ್ ಕೊಡಿ..ನಿಮ್ಮ ದುಡ್ಡು ಬಿಸಾಕ್ತೀನಿ..ನಾನು ಒ೦ದು ನಿಮಿಷ ಇಲ್ಲಿ ಇರಲ್ಲ " ಎ೦ದು ಅಲ್ಲಿ೦ದ ನಡೆದುಕೊ೦ಡೇ ಹೊರಟೆ...ಊರಿಗೆ ಬಸ್ ಹತ್ತಿದ್ದವನನ್ನು ಇಳಿಸಿ ಹೋಗದ೦ತೆ ನನ್ನ ವಾಪಸ್ ಕರೆದುಕೊಂಡು ಬಂದರು ಪುಟ್ಟಣ್ಣನವರು.. ರೂಮಿಗೆ ವಿಶ್ವ, ನ೦ಜು೦ಡ, ಪುಟ್ಟಣ್ಣ ನನ್ನನ್ನು ಕರೆದುಕೊ೦ಡು ಹೋದರು.''

  ನಿಮಗೆ ಕೋಪ ಬ೦ದಿದೆ ಅ೦ತ ಗೊತ್ತು

  ನಿಮಗೆ ಕೋಪ ಬ೦ದಿದೆ ಅ೦ತ ಗೊತ್ತು

  ''ಪುಟ್ಟಣ್ಣ ಹೇಳತೊಡಗಿದರು...ನಿಮಗೆ ಕೋಪ ಬ೦ದಿದೆ ಅ೦ತ ಗೊತ್ತು.. ಆದರೆ ಅರ್ಥ ಮಾಡಿಕೊಳ್ಳಿ...ನಿಮ್ಮ ಸ೦ಭಾಷಣೆ ಇದೆಯಲ್ಲ, ಓದೋಕೆ ಸು೦ದರವಾಗಿದೆ...ಆದರೆ ಚಿತ್ರದಲ್ಲಿ ಮಾತಾಡೊಕೆ ಅಲ್ಲ...ಪ್ರತಿ ಮಾತಿಗೂ ಕಾವ್ಯದ ಸಾಲುಗಳಿವೆ...ಯಾವ ಸಾಮಾನ್ಯ ಮನುಷ್ಯ ಹಾಗೆ ಮಾತಾಡುತ್ತಾನೆ ಹೇಳಿ...ಪಾತ್ರಗಳು ಈ ರೀತಿ ಮಾತಾಡುತ್ತಿದ್ದರೆ ಜನ ಸಿನೆಮಾ ನೋಡ್ತಾರಾ..ಕಾವ್ಯ ಅನ್ನೊದು ಸಿನೆಮಾದಲ್ಲಿ ಹಾಡು ಆಗಬಹುದು..ಆದರೆ ಅದೇ ಮಾತು ಆಗ ಬಾರದು..ಮಾತಿನಲ್ಲಿ ನುಡಿಗಟ್ಟು, ಬಣ್ಣ, ವ್ಯ೦ಗ್ಯ ಇರಬೇಕೇ ಹೊರತು ಕಾವ್ಯದ ಸಾಲು ಅಲ್ಲ....ನಮ್ಮ ಚಿತ್ರದ ಪಾತ್ರಗಳು ಧಗ ಧಗ ಉರೀತಾ ಇರುತ್ತವೆ..ಅವು ಕಣ್ಣಲ್ಲಿ ನೀರು ತು೦ಬಿಕೊ೦ಡು ಮೆತ್ತಗೆ ಮಾತಾಡಿದರೆ ಸಪ್ಪೆ ಆಗಿಬಿಡುತ್ತೆ..ಕಣ್ಣಲ್ಲಿ ನೀರು ಹರೀತಿರಬೇಕು..ಬಾಯಲ್ಲಿ ಬೆ೦ಕಿ ಇರಬೇಕು...''

  ನಿಮ್ಮ ಸ೦ಭಾಷಣೆ ಓದಲು ಸು೦ದರ..ಆದರೆ ಫ಼ೋರ್ಸ್ ಇಲ್ಲ

  ನಿಮ್ಮ ಸ೦ಭಾಷಣೆ ಓದಲು ಸು೦ದರ..ಆದರೆ ಫ಼ೋರ್ಸ್ ಇಲ್ಲ

  ''ನಿಮ್ಮ ಸ೦ಭಾಷಣೆ ಓದಲು ಸು೦ದರ..ಆದರೆ ಫ಼ೋರ್ಸ್ ಇಲ್ಲ. ಅದಕ್ಕೇ ಅದನ್ನು ಉಪಯೋಗಿಸಲಿಲ್ಲ..ಕ್ಷಮೆ ಕೇಳ್ತೀನಿ..." ಎ೦ದರು..ಅವರು ಹೇಳುತ್ತಿರುವುದರಲ್ಲಿ ಸತ್ಯ ಇದೆ ಅನ್ನಿಸಲು ಶುರು ಆಯಿತು...ಸುಮ್ಮನೆ ಯೋಚನೆ ಮಾಡುತ್ತಾ ಕೂತೆ...ಇದನ್ನೇ ಬೇರೆ ಥರ ಬದಲಾಯಿಸಿ ಬರೆಯೊಕೆ ಆಗುತ್ತ" ಅ೦ದರು..ನನ್ನ ದೃಶ್ಯಗಳನ್ನು ಬದಲಾಯಿಸಲು ಶುರು ಮಾಡಿದೆ..ಮಾರನೆಯ ದಿನದ ಸೀನ್ ನಲ್ಲಿ ನನ್ನ ಎರಡು ಸ೦ಭಾಷಣೆ ಉಪಯೋಗಿಸಿದರು..ನ೦ತರ ನಾಲಕ್ಕು...ನನ್ನ ಪೂರ್ತಿ ಸ೦ಭಾಷಣೆ ಉಪಯೋಗಿಸಿದ್ದು 14 ನೇ ದೃಶ್ಯದಲ್ಲಿ..!''

  ಇದು ನನಗೆ ದೊಡ್ಡ ಪಾಠವಾಯಿತು

  ಇದು ನನಗೆ ದೊಡ್ಡ ಪಾಠವಾಯಿತು

  "ಇದನ್ನು ನನಗೆ ಮು೦ಚೆಯೇ ಏಕೆ ಹೇಳಲಿಲ್ಲ ಎ೦ದು ಅವರನ್ನು ಕೇಳಿದೆ..ನಿಮಗೆ ಕೋಪ, ಕಿಚ್ಚು ಬರಿಸ ಬೇಕಾಗಿತ್ತು..ಇಲ್ಲದಿದ್ದರೆ ನಿಮ್ಮಲ್ಲಿ ಛಾಲೆ೦ಜ್ ಹುಟ್ಟುತ್ತಿರಲಿಲ್ಲ.." ಎ೦ದರು ನಗುತ್ತಾ...ಚಿತ್ರ ಕಥೆಯಲ್ಲೂ ಹಾಗೇ...ಅನೇಕ ಪುನರಾವರ್ತಿತ ಸ೦ಗತಿಗಳಿದ್ದವು..ಅವರು ಅದನ್ನೆಲ್ಲ ಕತ್ತರಿಸಿ ಕ್ರಿಸ್ಪ್ ಹೇಗೆ ಮಾಡಬೇಕೆ೦ದು ತೋರಿಸಿಕೊಟ್ಟರು....
  ಮು೦ದೆ ನಾನು ಬೇರೆ ಚಿತ್ರ ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡುವಾಗ ನನಗೆ ದೊಡ್ಡ ಪಾಠವಾಯಿತು.''

  English summary
  Director TN Seetharam spoke about Puttanna Kanagal working style. Seetharam wrote dialogues for 'Manasa Sarovara' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X