For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಟೀಸರ್ ನಿರ್ದೇಶಕನಿಂದ ನಿರ್ದೇಶಕರಿಗಾಗಿ ಸಮರ್ಪಣೆ

  By Pavithra
  |

  'ದಿ ವಿಲನ್' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಸಿನಿಮಾ. ಯಾವುದೇ ಚಿತ್ರದ ನಿರ್ದೇಶಕನನ್ನು ಕ್ಯಾಪ್ಟನ್ ಆಫ್ ದಿ ಶಿಪ್ ಅಂತಾರೆ. ಚಿತ್ರದ ನಿಜವಾದ ಹೀರೋ ನಿರ್ದೇಶಕ ಅಂತಾನೂ ಬಿಂಬಿಸುತ್ತಾರೆ. 'ದಿ ವಿಲನ್' ಸಿನಿಮಾದ ನಿರ್ದೇಶಕ ಪ್ರೇಮ್ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಡೈರೆಕ್ಟರ್.

  ಪ್ರಖ್ಯಾತಿಗಳಿಸಿರುವ ನಿರ್ದೇಶಕ ಪ್ರೇಮ್, ತಮ್ಮ ಸಿನಿಮಾ ಮೂಲಕವೇ ಚಿತ್ರರಂಗದ ನಿರ್ದೇಶಕರಿಗೆ ಅಳಿಲು ಸೇವೆ ಮಾಡಲು ಮುಂದಾಗಿದ್ದಾರೆ. ಕೋಟ್ಯಾಂತರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ 'ದಿ ವಿಲನ್' ಸಿನಿಮಾ ಟೀಸರ್ ನೋಡಬೇಕು ಎಂದರೆ ನೀವು 500 ರೂಪಾಯಿ ನೀಡಬೇಕು. ಹೌದು 500 ರೂಪಾಯಿ ಕೊಟ್ಟರೆ ಚಿತ್ರದ ಟೀಸರ್ ನೋಡುವ ಅವಕಾಶ ಸಿಗಲಿದೆ.

  ಟೀಸರ್ ನೋಡಲು ಕೊಟ್ಟ ಹಣವನ್ನು ಕನ್ನಡ ಚಿತ್ರರಂಗದಲ್ಲಿ ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ನೀಡಲಾಗುತ್ತಂತೆ. ಹೀಗಂತ 'ದಿ ವಿಲನ್' ಟೀಂ ತಿಳಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಸಂಕಷ್ಟದಲ್ಲಿರುವವರಿಗೆ ಹಣವನ್ನ ಸಂದಾಯ ಮಾಡಿಸಲು ನಿರ್ದೇಶಕ ಪ್ರೇಮ್ ಆಲೋಚನೆ ಮಾಡಿದ್ದು ಪ್ರೇಕ್ಷಕರ ಕುತೂಹಲವನ್ನ ಚಿತ್ರರಂಗದ ಸೇವೆಗೆ ಬಳಸಿಕೊಳ್ಳುವ ಪ್ಲಾನ್ ಮಾಡಲಾಗುತ್ತಿದೆ.

  ಇದೇ ತಿಂಗಳ ಅಂದರೆ ಜೂನ್ 28ರ ಸಂಜೆ 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಮಾಗಡಿ ರೋಡ್ ನಲ್ಲಿರುವ ಜಿಟಿ ಮಾಲ್ ನಲ್ಲಿ ನಡೆಯಲಿದೆ. ದಿ ವಿಲನ್ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಸುದೀಪ್ ಹಾಗೂ ಆಮಿ ಜಾಕ್ಸನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Kannada actor Sudeep and Shivarajkumar starrer The Villain teaser will be release on June 28th. to watch teaser should be paid 500 rupees.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X