Toby: ರಾಜ್ ಬಿ ಶೆಟ್ಟಿ 'ಟೋಬಿ' ಯಾವ ಚಿತ್ರಮಂದಿರಗಳಲ್ಲಿ ರಿಲೀಸ್? ಅಡ್ವಾನ್ಸ್ ಬುಕಿಂಗ್ ಯಾವಾಗ ಶುರು?

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನವಾದ ನಿರ್ದೇಶನ ಮಾಡುವ ಮೂಲಕ ಸಿನಿ ರಸಿಕರನ್ನು ತನ್ನತ್ತ ಸೆಳೆದವರ ನಿರ್ದೇಶಕರ ಸಾಲಿಗೆ ಸೇರುವ ಕಲಾವಿದ ರಾಜ್ ಬಿ ಶೆಟ್ಟಿ. ಹೌದು, ರಾಜ್ ಬಿ ಶೆಟ್ಟಿ ನಿರ್ದೇಶನದ ಒಂದು ಮೊಟ್ಟೆಯ ಕಥೆ ಹಾಗೂ ಗರುಡ ಗಮನ ವೃಷಭ ವಾಹನ ಚಿತ್ರಗಳೇ ಇದಕ್ಕೆ ಸಾಕ್ಷಿ. ಹೀಗೆ ಈ ಎರಡು ವಿಭಿನ್ನ ಪ್ರಯತ್ನಗಳನ್ನು ಮಾಡಿ ಗೆದ್ದ ರಾಜ್ ಬಿ ಶೆಟ್ಟಿ ಈಗ ಟೋಬಿ ಎಂಬ ಹೊಸ ಸಿನಿಮಾದೊಂದಿಗೆ ಕನ್ನಡ ಸಿನಿ ರಸಿಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಆದರೆ ಈ ಬಾರಿ ನಿರ್ದೇಶಕನ ಟೋಪಿಯನ್ನು ಪಕ್ಕಕ್ಕೆ ಇಟ್ಟಿರುವ ರಾಜ್ ಬಿ ಶೆಟ್ಟಿ ಟೋಬಿಗೆ ಕಥೆಯನ್ನು ಮಾತ್ರ ಬರೆದಿದ್ದಾರೆ. ಹೌದು, ಟೋಬಿ ಚಿತ್ರಕ್ಕೆ ಬಸಿಲ್ ಅಲ್ಚಕ್ಕಲ್ ಆಕ್ಷನ್ ಕಟ್ ಹೇಳಿದ್ದು ರಾಜ್ ಬಿ ಶೆಟ್ಟಿ ಕಥೆ ಬರೆದಿದ್ದಾರೆ. ಮೊದಲಿಗೆ ಪೋಸ್ಟರ್‌ಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಟೋಬಿ ಕಳೆದ ಎರಡು ವಾರಗಳ ಹಿಂದೆ ತನ್ನ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿತ್ತು.

Toby: Raj B Shetty starrer Toby movie advance booking opens from 22nd August

ಟ್ರೈಲರ್‌ನಲ್ಲಿ ರಾಜ್ ಬಿ ಶೆಟ್ಟಿಯ ವಿಭಿನ್ನ ಅವತಾರ ಹಾಗೂ ಚಿತ್ರ ಮಾಸ್ ಅಂಶವನ್ನು ಹೊಂದಿದೆ ಎಂಬ ಸುಳಿವು ನೀಡಿದ್ದ ಡೈಲಾಗ್‌ಗಳನ್ನು ಕಂಡಿದ್ದ ಸಿನಿ ರಸಿಕರು ಟೋಬಿ ಕನ್ನಡ ಚಿತ್ರರಂಗದಲ್ಲಿ ಗರುಡ ಗಮನ ವೃಷಭ ವಾಹನ ರೀತಿ ಮತ್ತೊಂದು ದೊಡ್ಡ ಮಟ್ಟದ ಹಿಟ್ ಆಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ಚಿತ್ರವನ್ನು ವೀಕ್ಷಿಸುವ ಕಾತರತೆಯನ್ನು ಹೊರಹಾಕಿದ್ದರು.

ಇನ್ನು ಟೋಬಿ ಚಿತ್ರ ನಿರೀಕ್ಷೆಯನ್ನು ಹುಟ್ಟುಹಾಕಿ ರಾಜ್ಯದ ವಿವಿಧ ಊರುಗಳಿಗೆ ಭೇಟಿ ನೀಡಿ ತಮ್ಮ ಚಿತ್ರವನ್ನು ವೀಕ್ಷಿಸುವಂತೆ ಪ್ರಚಾರವನ್ನು ಮಾಡುತ್ತಿದೆ. ಚಿತ್ರ ಇದೇ ಶುಕ್ರವಾರ ( ಆಗಸ್ಟ್ 25 ) ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳ್ಳಿತೆರೆಗೆ ಅಪ್ಪಳಿಸಲಿದ್ದು, ಚಿತ್ರ ನೋಡಲು ಕಾಯುತ್ತಿರುವವರು ಚಿತ್ರದ ಮುಂಗಡ ಬುಕಿಂಗ್ ಯಾವಾಗ ಆರಂಭವಾಗಲಿದೆ ಎಂದು ಎದುರು ನೋಡುತ್ತಿದ್ದಾರೆ.

ಹೀಗೆ ಮುಂಗಡ ಬುಕಿಂಗ್ ಯಾವಾಗ ಆರಂಭವಾಗಬಹುದು ಎಂದು ಕಾಯುತ್ತಿರುವ ಸಿನಿ ರಸಿಕರಿಗೆ ಟೋಬಿ ಚಿತ್ರತಂಡ ಉತ್ತರ ಕೊಟ್ಟಿದ್ದು, ನಾಳೆ ( ಆಗಸ್ಟ್ 22 ) ಮಂಗಳವಾರ ಅಡ್ವಾನ್ಸ್ ಬುಕಿಂಗ್ ಶುರುವಾಗಲಿದೆ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಲು ಸಜ್ಜಾಗಿರಿ ಎಂದು ಕರೆ ಕೊಟ್ಟಿದೆ. ಇನ್ನು ಟೋಬಿ ಚಿತ್ರ ಬೆಂಗಳೂರಿನ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ನರ್ತಕಿ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಸದ್ಯ ಚಿತ್ರತಂಡ ಮೊದಲ ಹಂತದ ಚಿತ್ರಮಂದಿರಗಳನ್ನು ಮಾತ್ರ ಹಂಚಿಕೊಂಡಿದೆ.

More from Filmibeat

English summary
Toby movie advance boooking
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X