ಈ ದಿನ ವಿಶೇಷ : 'ಪಾರ್ವತಿ', 'ಪರಮಾತ್ಮ'ನ ಜೊತೆ ಬಂದ ಅಂಬಿ, ಧ್ರುವ

ಕನ್ನಡ ಚಿತ್ರರಂಗದಲ್ಲಿ ಪ್ರತಿ ದಿನ ಸಾಕಷ್ಟು ಸಿನಿಮಾಗಳ ಬೆಳೆವಣೆಗೆಗಳು ನಡೆಯುತ್ತಿರುತ್ತವೆ. ಈ ದಿನ ಸಹ ಚಿತ್ರರಂಗದ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

ಒಂದು ಕಡೆ ಹರಿಪ್ರಿಯಾ ನಟನೆಯ 'ಡಾಟರ್ ಆಫ್ ಪಾರ್ವತಮ್ಮ' ಟೀಸರ್ ಇಂದು ಬಿಡುಗಡೆಯಾಗಿದೆ. ಇನ್ನೊಂದು ಕಡೆ ಧ್ರುವ ಸರ್ಜಾ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿದೆ. ಮತ್ತೊಂದು ಕಡೆ 'ಪರಮಾತ್ಮ' ಚಿತ್ರ ಬಿಡುಗಡೆಯಾಗಿ 7 ವರ್ಷ ಕಳೆದಿದೆ. ಇವುಗಳೊಂದಿಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ವಿಡಿಯೋ ಹಾಡು ಯೂ ಟ್ಯೂಬ್ ಗೆ ಬಂದಿದೆ.

ಅಂದಹಾಗೆ, ಈ ಎಲ್ಲ ಸಿನಿಮಾಗಳ ಸಣ್ಣ ಸಣ್ಣ ಸುದ್ದಿಗಳ ಸಂಗ್ರಹ ಮುಂದಿದೆ ಓದಿ...

'ಡಾಟರ್ ಆಫ್ ಪಾರ್ವತಮ್ಮ' ಟೀಸರ್ ರಿಲೀಸ್

'ಡಾಟರ್ ಆಫ್ ಪಾರ್ವತಮ್ಮ' ಟೀಸರ್ ರಿಲೀಸ್

'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ಹರಿಪ್ರಿಯಾ ಅವರ 25ನೇ ಸಿನಿಮಾವಾಗಿದೆ. ಈ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಮೊದಲ ಬಾರಿಗೆ ಹರಿಪ್ರಿಯಾ ತನಿಖಾಧಿಕಾರಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಟೀಸರ್ ನೋಡುಗರ ಗಮನ ಸೆಳೆದಿದೆ. ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಿದ್ದಾರೆ.

ಧ್ರುವ ಸರ್ಜಾ ಹುಟ್ಟುಹಬ್ಬ

ಧ್ರುವ ಸರ್ಜಾ ಹುಟ್ಟುಹಬ್ಬ

ನಟ ಧ್ರುವ ಸರ್ಜಾ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ತಿಳಿಸಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ 'ಪೊಗರು' ಚಿತ್ರದ ಟೀಸರ್ ರಿಲೀಸ್ ಆಗಲಿದೆ.

'ಪರಮಾತ್ಮ'ನಿಗೆ 7 ವರ್ಷ

'ಪರಮಾತ್ಮ'ನಿಗೆ 7 ವರ್ಷ

ಪುನೀತ್ ರಾಜ್ ಕುಮಾರ್ ಅಭಿನಯದ 'ಪರಮಾತ್ಮ' ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷವಾಗಿದೆ. ಇದು ಪುನೀತ್ ಹಾಗೂ ಯೋಗರಾಜ್ ಭಟ್ ಜೋಡಿಯ ಮೊದಲ ಸಿನಿಮಾವಾಗಿತ್ತು. ದೀಪ ಸನ್ನಿಧಿ ಹಾಗೂ ಐಂದ್ರಿತಾ ರೇ ಚಿತ್ರದ ನಾಯಕಿಯರಾಗಿದ್ದರು.

'ಅಂಬಿ ನಿಂಗೆ ವಯಸ್ಸಾಯ್ತೋ' ವಿಡಿಯೋ ಸಾಂಗ್

'ಅಂಬಿ ನಿಂಗೆ ವಯಸ್ಸಾಯ್ತೋ' ವಿಡಿಯೋ ಸಾಂಗ್

'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ವಿಶೇಷವಾಗಿ ಸಿನಿಮಾದ 'ಮಾತಾಡೋ ತಾರೆಯ ಕಂಡ ಹಾಗೆ..' ಹಾಡಿನ ವಿಡಿಯೋ ಬಿಡುಗಡೆಯಾಗಿದೆ. ಈಗಾಗಲೇ, ಹಿಟ್ ಆಗಿರುವ ಈ ಹಾಡನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

More from Filmibeat

English summary
Today's sandalwood news highest. 'Daughter Of Parvathamma' movie teaser and 'Ambi ning vayassaytho' movie video song will be releasing today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X