Today special: ಕುರುಕ್ಷೇತ್ರ, ದೇವಕಿ, ವಿನೋದ್ ರಾಜ್ ಕುರಿತು ಆ ಸುದ್ದಿ ಏನು?
ಕಲರ್ ಫುಲ್ ಸಿನಿಮಾ ಜಗತ್ತಿನಲ್ಲಿ ಪ್ರತಿದಿನವೂ, ಪ್ರತಿಕ್ಷಣವೂ ಏನಾದರೂ ಬೆಳವಣಿಗೆಗಳು ನಡೆಯುತ್ತಲೇ ಇರುತ್ತೆ. ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲ ಇಂಡಸ್ಟ್ರಿಯಲ್ಲೂ ಇಂಟರೆಸ್ಟಿಂಗ್ ವಿಷ್ಯಗಳು ಕಣ್ಣಿಗೆ ಬೀಳುತ್ತೆ.
ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ, ತೆಲುಗು ನಟಿ ಸಮಂತಾ ಅಭಿನಯದ ಓ ಬೇಬಿ ಚಿತ್ರಗಳಿಗೆ ಸಂಬಂಧಿಸಿದಂತೆ ಸುದ್ದಿಯೊಂದಿದೆ. ಅದೇ ರೀತಿ ಡಿ ಬಾಸ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಹಾಗೂ ಕನ್ನಡ ನಟ ವಿನೋದ್ ರಾಜ್ ಬಗ್ಗೆ ಕೂಡ ಒಂದು ಸುದ್ದಿ ಇದೆ.
ಹಾಗಿದ್ರೆ, ಜುಲೈ 5 ರಂದು ಸಿನಿಮಾ ಜಗತ್ತಿನಲ್ಲಿ ಪ್ರಮುಖವಾಗಿ ಗಮನ ಸೆಳೆದ ಈ ಸುದ್ದಿಗಳು ಏನು? ಈ ಸ್ಟಾರ್ ಗಳು ಮತ್ತು ಅವರ ಚಿತ್ರಗಳ ಕುರಿತ ಆ ಸುದ್ದಿಯಾದರೂ ಏನು? ಮುಂದೆ ಓದಿ....

ದೇವಕಿ, ಓ ಬೇಬಿ
ಕನ್ನಡ ಸೇರಿದಂತೆ ಇಂದು ಹಲವು ಚಿತ್ರಗಳು ಬಿಡುಗಡೆಯಾಗಿದೆ. ಕನ್ನಡದಲ್ಲಿ ಮೇಘನಾ ರಾಜ್ ಅಭಿನಯದ ಒಂಟಿ ಹಾಗೂ ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರಗಳು ತೆರೆ ಕಂಡಿದೆ. ತೆಲುಗಿನಲ್ಲಿ ಸಮಂತಾ ಅಭಿನಯದ 'ಓ ಬೇಬಿ' ಸಿನಿಮಾನೂ ಇಂದೇ ಚಿತ್ರಮಂದಿರಕ್ಕೆ ಬಂದಿದೆ.

ವಿನೋದ್ ರಾಜ್ ಹುಟ್ಟುಹಬ್ಬ
ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಪುತ್ರ ನಟ ವಿನೋದ್ ರಾಜ್ ಅವರಿಗೆ ಇಂದು ಹುಟ್ಟುಹಬ್ಬ. ಡ್ಯಾನ್ಸ್ ರಾಜಾ ಡ್ಯಾನ್ಸ್, ಕೃಷ್ಣ ನೀ ಕುಣಿದಾಗ, ಕಾಲೇಜ್ ಹೀರೋ, ಪಾಂಡವ, ಶುಕ್ರ, ಯಾರದು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕುರುಕ್ಷೇತ್ರ ಹಾಡು ಬಂತು
ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ನಟಿಸಿರುವ ಕುರುಕ್ಷೇತ್ರ ಸಿನಿಮಾದ ಆಡಿಯೋ ಜುಲೈ 7 ರಂದು ಬಿಡುಗಡೆಯಾಗುತ್ತಿದೆ. ಕುರುಕ್ಷೇತ್ರ ಆಡಿಯೋ ಬಿಡುಗಡೆಗೂ ಒಂದು ದಿನ ಮುಂಚೆಯೇ ಮೊದಲ ಹಾಡು ಬರ್ತಿದೆ.

ಇಸ್ಮಾರ್ಟ್ ಶಂಕರ್
ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ತೆಲುಗಿನ 'ಇಸ್ಮಾರ್ಟ್ ಶಂಕರ್' ಸಿನಿಮಾದ ಟ್ರೈಲರ್ ನಂಬರ್ ವನ್ ಸ್ಥಾನದಲ್ಲಿದೆ. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ರಾಮ್, ನಿಧಿ ಅಗರ್ ವಾಲ್, ನಭಾ ನಟೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.


Click it and Unblock the Notifications











