ಕಿಚ್ಚ ಸುದೀಪ್‌ಗೆ ವಿಶ್ ಮಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಒಂದು ದಿನ ಮಾತ್ರ ಬಾಕಿ ಇದೆ. ಆದರೆ ಈಗಾಗಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕಿಚ್ಚನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆ ಕಿಚ್ಚ ಸೆಪ್ಟಂಬರ್ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಿಚ್ಚನಿಗೆ ಈಗಾಗಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ವಿಶೇಷ ಎಂದರೆ ಕಿಚ್ಚನಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ ನೀರಜ್ ಚೋಪ್ರಾ ಶುಭಾಶಯ ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟಿದ್ದ ನೀರಜ್, ಕನ್ನಡದ ಸ್ಟಾರ್ ನಟ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಡಿಯೋ ಮೂಲಕ ವಿಶ್ ಮಾಡಿರುವ ನೀರಜ್, "ಹುಟ್ಟುಹಬ್ಬದ ಶುಭಾಶಯಗಳು ಸುದೀಪ್ ಜೀ. ನಿಮ್ಮ ಸಿನಿಮಾಗೆ ಶುಭಾಶಯಗಳು" ಎಂದು ಹೇಳಿದ್ದಾರೆ.

ನೀರಜ್ ವಿಡಿಯೋಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಶೇರ್ ಮಾಡಿ, ಧನ್ಯವಾದಗಳು ಸಹೋದರ ಎಂದು ಹೇಳಿದ್ದಾರೆ. "ಇದು ಅತ್ಯಂತ ಸ್ವೀಟೆಸ್ಟ್. ಧನ್ಯವಾದಗಳು ನನ್ನ ಸಹೋದರ ನೀರಜ್ ಚೋಪ್ರಾ. ನಿಮಗೆ ಯಾವಾಗಲೂ ನನ್ನ ಶುಭಾಶಯಗಳು" ಎಂದು ಹೇಳಿದ್ದಾರೆ.

Tokyo Olympics Gold Medal Winner Neeraj Chopra sends Birthday Wishes to Kichcha Sudeep

ಅಂದಹಾಗೆ ಈ ಬಾರಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ. ಕೊರೊನಾ ಕಾರಣದಿಂದ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಲಾಗಿದ್ದು, ಅಭಿಮಾನಿಗಳು ತಾವು ಇದ್ದಲ್ಲಿಯೇ ವಿಶ್ ಮಾಡಿ, ಪ್ರೀತಿಯ ಸಂದೇಶ ಕಳುಹಿಸಿ ಎಂದು ಹೇಳಿದ್ದಾರೆ.

ಸುದೀಪ್ ಹುಟ್ಟುಹಬ್ಬ ಅಂದ್ಮೇಲೆ ಅಭಿಮಾನಿಗಳ ದಂಡೆ ಸೇರಿರುತ್ತೆ. ರಾತ್ರಿಯಿಂದನೇ ಅಭಿಮಾನಿಗಳು ಮನೆ ಮುಂದೆ ಕ್ಯೂ ನಿಂತಿರುತ್ತದ್ದರು. ಸುದೀಪ್ ನೋಡಲು, ಮಾತನಾಡಿಸಲು, ವಿಶ್ ಮಾಡಲು ಕಾತರದಿಂದ ಕಾಯುತ್ತಿದ್ದರು. ಕಿಚ್ಚನ ಮನೆ ಮುಂದೆ ಅಭಿಮಾನಿಗಳ ಸಂಭ್ರಮ, ಸಡಗರ ಮನೆ ಮಾಡಿರುತ್ತಿತ್ತು. ಆದರೆ ಕಳೆದ ವರ್ಷದಿಂದ ಈ ಸಂಭ್ರಮ ಸಡಗರಕ್ಕೆ ಬ್ರೇಕ್ ಬಿದ್ದಿದೆ.

"ನನ್ನೆಲ್ಲಾ, ಪ್ರೀತಿಯ ಅಭಿಮಾನಿಗಳಿಗೆ ಸ್ನೇಹಿತರಲ್ಲಿ ಮನವಿ. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ ಎಂದು ಕೋರುವ ನಿಮ್ಮ ಕಿಚ್ಚ" ಎಂದು ಪತ್ರ ಬರೆದಿದ್ದರು.

ಇನ್ನು ಹುಟ್ಟುಹಬ್ಬದ ದಿನ ಸುದೀಪ್ ಡಿಜಿಟಲ್ ಒಟಿಟಿ ಫ್ಲಾಟ್ ಫಾರ್ಮ್ (Digital_OTT) ಅಧಿಕೃತ ಟ್ವಿಟ್ಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀಪ್ ಲೈವ್ ಬರಲಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಸೆಪ್ಟೆಂಬರ್ 2 ರಂದು ಸಂಜೆ 6 ಗಂಟೆಗೆ ಲೈವ್‌ನಲ್ಲಿ ಸುದೀಪ್ ಜೊತೆ ಮಾತುಕತೆ ಮಾಡಬಹುದು. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ 'ವಿಕ್ರಾಂತ್ ರೋಣ' ಸಿನಿಮಾದ ಆಂಥೆಮ್ ಹಾಡು ಬಿಡುಗಡೆಯಾಗಲಿದೆ. ಕೋಟಿಗೊಬ್ಬ 3 ಚಿತ್ರತಂಡದಿಂದಲೂ ಉಡುಗೊರೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಹೊಸ ಸಿನಿಮಾಗಳು ಘೋಷಣೆಯಾಗಬಹುದು ಎನ್ನಲಾಗಿದೆ. ಇನ್ನು ಏನೆಲ್ಲ ಸರ್ಪ್ರೈಸ್ ಗಳು ಸಿಗಲಿದೆ ಎನ್ನುವುದು ಹುಟ್ಟುಹಬ್ಬದ ದಿನವೇ ಗೊತ್ತಾಗಲಿದೆ.

More from Filmibeat

English summary
Tokyo Olympics Gold Medal Winner Neeraj Chopra sends Birthday Wishes to Kichcha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X