»   » 'ಟಾಲಿವುಡ್ ಟ್ರೋಲ್'ಗಳ ವಿರುದ್ಧ ತೊಡೆ ತಟ್ಟಿ ನಿಂತ ಫಿಲ್ಮಿಬೀಟ್ ಕನ್ನಡ ಓದುಗರು

'ಟಾಲಿವುಡ್ ಟ್ರೋಲ್'ಗಳ ವಿರುದ್ಧ ತೊಡೆ ತಟ್ಟಿ ನಿಂತ ಫಿಲ್ಮಿಬೀಟ್ ಕನ್ನಡ ಓದುಗರು

Posted By: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

ಕಾವೇರಿ ನೀರಿನ ವಿಚಾರವಾಗಿ ತಮಿಳು ನಟ ಸತ್ಯರಾಜ್ ಆಡಿದ ಮಾತುಗಳಿಂದ 'ವಿಶಾಲ ಹೃದಯ' ಕನ್ನಡಿಗರು ಕೆಂಡಾಮಂಡಲರಾಗಿರುವ ಬೆನ್ನಲ್ಲೇ, ತೆಲುಗು ಸಿನಿ'ಭಕ್ತ'ರು ಫೇಸ್ ಬುಕ್ ನಲ್ಲಿ ಕನ್ನಡ ಪರ ಹೋರಾಟಗಾರರು, ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರ ಕುರಿತು ಗೇಲಿ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗ ಹಾಗೂ ಕನ್ನಡ ಪರ ಹೋರಾಟಗಾರರ ಬಗ್ಗೆ 'ಟ್ರೋಲ್ ಟಾಲಿವುಡ್' ಎಂಬ ಫೇಸ್ ಬುಕ್ ಪೇಜ್ ಮಾಡಿರುವ ಲೇವಡಿ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ':
ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!
ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!
ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?
ಎಂಬ ಶೀರ್ಷಿಕೆಗಳಡಿ ವರದಿ ಪ್ರಕಟಿಸಿದ್ವಿ. ಜೊತೆಗೆ, ಈ ಟ್ರೋಲ್ ಗಳ ಬಗ್ಗೆ ನಮ್ಮ ಓದುಗರ ಅಭಿಪ್ರಾಯ ಸಂಗ್ರಹ ಮಾಡಿದ್ವಿ.

ಟಾಲಿವುಡ್ ಮಂದಿ ಮಾಡಿರುವ ಟ್ರೋಲ್ ಗಳು ಖಂಡನಾರ್ಹ, ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ 'ಬಾಹುಬಲಿ-2' ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಅಸಂಖ್ಯಾತ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಓದುಗರಿಂದ ಬಂದ ಪ್ರತಿಕ್ರಿಯೆಗಳನ್ನ ಯಥಾವತ್ ಆಗಿ ನಿಮ್ಮ ಮುಂದೆ ಇಡುತ್ತಿದ್ದೇವೆ. ನೋಡಿ...

ಕರ್ನಾಟಕದ ಮೇಲೆ ಆಣೆ.!

ತೆಲುಗು ಸಿನಿ'ಭಕ್ತ'ರು ಫೇಸ್ ಬುಕ್ ನಲ್ಲಿ ಮಾಡಿರುವ ಟ್ರೋಲ್ ಗಳನ್ನೆಲ್ಲ ನೋಡಿದ್ಮೇಲೆ, ''ಇವೆಲ್ಲ ಓದಿಯೂ ರಕ್ತ ಕುದಿಯದವನು ಕನ್ನಡಿಗನೇ ಅಲ್ಲ. ಇನ್ನು ಮುಂದೆ ನಯಾ ಪೈಸೆನೂ ಬೇರೆ ಭಾಷೆ ಸಿನಿಮಾ ನೋಡಲು ಹಾಕಲ್ಲ. ಕರ್ನಾಟಕದ ಮೇಲೆ ಆಣೆ'' ಅಂತ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಓದುಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹೋರಾಟದ ಪರಿ ಗೊತ್ತಿಲ್ಲ.!

''ಕನ್ನಡಿಗರ ಹೋರಾಟ ಏನಿದ್ದರೂ ಕನ್ನಡ ವಿರೋಧಿಗಳ ವಿರುದ್ಧವೇ ಹೊರತು ಯಾವ ಭಾಷೆ ಅಥವಾ ಸಿನಿಮಾದ ವಿರುದ್ಧ ಅಲ್ಲ. ಇದು ತೆಲುಗಿನ ಬುದ್ಧಿಜೀವಿಗಳಿಗೆ ಅರ್ಥವಾಗುತ್ತಿಲ್ಲ'' ಎಂಬುದು ಮಹೇಶ್ ಎಂಬುವರ ಅಭಿಪ್ರಾಯ.

ಕನ್ನಡಿಗರು ಒಗ್ಗಟ್ಟಾಗಬೇಕು.!

''ಕನ್ನಡಿಗರು ಪದೇ ಪದೇ ಘಾಸಿಗೊಳಗಾಗುತ್ತಲೇ ಇದ್ದಾರೆ. ನಮ್ಮ ಸಹನೆಯನ್ನೇ ದೌರ್ಬಲ್ಯವೆಂದು ಅಪಾರ್ಥ ಮಾಡಿಕೊಂಡಿರುವ ಅನ್ಯಭಾಷಿಕರಿಗೆ ನಾವು ಒಗ್ಗಟ್ಟಾಗುವ ಮೂಲಕ ತಿರುಗೇಟು ನೀಡಬೇಕಿದೆ'' ಎಂದು ಕುಮಾರ್ ಕಾಮೆಂಟ್ ಮಾಡಿದ್ದಾರೆ.

'ಬಾಹುಬಲಿ' ಯಾರು?

''ಟ್ರೋಲ್ ಮಾಡುತ್ತಿರುವ ತೆಲುಗಿನವರು ಮೊದಲು 'ಬಾಹುಬಲಿ' ಯಾರು..? 'ಬಾಹುಬಲಿ' ಯಾವ ಚಿತ್ರದ ಕಥೆ..? ಅಂತ ತಿಳಿದುಕೊಳ್ಳಲಿ'' ಎಂದು ಕೆಲವರು ಬಾಣ ಬಿಟ್ಟಿದ್ದಾರೆ.

ಕನ್ನಡ ವಿತರಕರು ಬುದ್ಧಿ ಕಲಿಯಬೇಕು.!

'ದೊಡ್ಡ ನಿರ್ಮಾಪಕರು ಎಂದು ಕರೆಯಿಸಿಕೊಳ್ಳುವವರು ತೆಲುಗು ಚಿತ್ರಗಳನ್ನ ವಿತರಣೆ ಮಾಡುತ್ತಾರೆ. ಈಗಲಾದರೂ ಅಂತಹ ವಿತರಕರು ಬುದ್ಧಿ ಕಲಿಯಬೇಕು'' ಅಂತಾರೆ ಸ್ವಾಭಿಮಾನಿ ಕನ್ನಡಿಗ ಮುರಳಿ.

ಎಲ್ಲರ ಬಾಯಲ್ಲೂ ಒಂದೇ ಮಾತು

''ಬಾಹುಬಲಿ' ಚಿತ್ರ ಬಿಡುಗಡೆ ಆಗಲು ಬಿಡಬಾರದು. ಪರಭಾಷಾ ಚಿತ್ರಗಳನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು'' ಎನ್ನುವ ಕಾಮೆಂಟ್ ಗಳೇ ಹೆಚ್ಚು.

ನಿಮ್ಮ ಹಾಗೆ ನಾವು ಮಾಡಲ್ಲ.!

''ನಮಗೂ ಟ್ರೋಲ್ ಮಾಡೋದು ಗೊತ್ತಿದೆ. ಆದ್ರೆ, ಎಲ್ಲ ಭಾಷೆಯ ಜನರನ್ನ ನಾವು ಗೌರವಿಸುತ್ತೇವೆ'' ಅಂತ ವಿಕಾಸ್ ನಲ್ಲೂರ್ ಎಂಬುವರು 'ಟ್ರೋಲ್ ಟಾಲಿವುಡ್'ಗೆ ನೇರವಾಗಿ ತಿರುಗೇಟು ನೀಡಿದ್ದಾರೆ.

ಏನೇ ಆದರೂ ರಿಲೀಸ್ ಆಗೋಕೆ ಬಿಡಬಾರ್ದು.!

''ಈ ಸಲ 'ಬಾಹುಬಲಿ' ಬ್ಯಾನ್ ಆದ್ರೇನೇ ಉಳಿದವರಿಗೆ ಬುದ್ಧಿ ಬರೋದು. ಏನೇ ಆಗಲಿ ರಿಲೀಸ್ ಆಗೋಕೆ ಬಿಡಬಾರ್ದು'' ಎಂಬುದು ಕೆಲವರ ಅಭಿಪ್ರಾಯ.

ರಾಜಮೌಳಿ ಕರ್ನಾಟಕದವರೇ.!

''ಬಾಹುಬಲಿ' ಡೈರೆಕ್ಟರ್ ರಾಜಮೌಳಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು'' ಎಂದು ಕನ್ನಡಿಗರು ತೆಲುಗಿನವರಿಗೆ ನೆನಪಿಸಿದ್ದಾರೆ.

ಸಾಲು ಸಾಲು ಕಾಮೆಂಟ್ಸ್ ಗಳು.!

ಟಾಲಿವುಡ್ ಮಂದಿಯ ಟ್ರೋಲ್ ವಿರುದ್ಧ ತೊಡೆ ತಟ್ಟಿ ನಿಂತು ಕನ್ನಡಿಗರು ಮಾಡಿರುವ ಕಾಮೆಂಟ್ ಗಳು ಒಂದೆರಡಲ್ಲ.

English summary
Oneindia/Filmibeat Kannada readers are furious against Tollywood's trolls against Kannadigas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X