ದರ್ಶನ್ ನಂತರ ಪುನೀತ್ ಜೊತೆಗೆ ಸೆಣಸಾಡಲು ಬಂದ ಕಾಲಕೇಯ
Recommended Video

ನಟ ಪುನೀತ್ ರಾಜ್ ಕುಮಾರ್ ಅವರ 'ನಟ ಸಾರ್ವಭೌಮ' ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಆದರೂ ಸಹ ಈಗ ಈ ಚಿತ್ರದ ಒಂದೊಂದೆ ವಿಶೇಷಗಳು ಹೊರ ಬರುತ್ತಿದೆ. ಈಗ ಈ ಚಿತ್ರಕ್ಕೆ ಒಬ್ಬ ಖಳನಟನ ಎಂಟ್ರಿ ಆಗಿದೆ.
'ಬಾಹುಬಲಿ' ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದ ನಟ ಪ್ರಭಾಕರ್ ಮತ್ತೊಂದು ಕನ್ನಡ ಸಿನಿಮಾ ಮಾಡುತ್ತಿದ್ದಾರೆ. 'ಬಾಹುಬಲಿ' ಚಿತ್ರದಲ್ಲಿ ಕಾಲಕೇಯ ಎಂಬ ವಿಚಿತ್ರ ಪಾತ್ರವನ್ನು ಮಾಡಿದ್ದ ಪ್ರಭಾಕರ್ ಈಗ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಇದೀಗ 'ನಟ ಸಾರ್ವಭೌಮ' ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.
ತೆಲುಗು ನಟ ಪ್ರಭಾಕರ್ ಅವರು ಈ ಹಿಂದೆ ಆರ್ ಚಂದ್ರು ನಿರ್ದೇಶನಕ 'ಕೋಕೋ' ಮತ್ತು 'ಲಕ್ಷಣ' ಚಿತ್ರದಲ್ಲಿ ನಟಿಸಿದ್ದರು. ದರ್ಶನ್ ಜೊತೆಗೆ 'ಚೌಕ' ಸಿನಿಮಾದಲ್ಲಿ ಫೈಟ್ ಮಾಡಿದ್ದರು. ಅದರ ನಂತರ ಈಗ 'ನಟ ಸಾರ್ವಭೌಮ' ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

'ನಟ ಸಾರ್ವಭೌಮ' ಪುನೀತ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗಿದೆ.


Click it and Unblock the Notifications











