ಸೌತ್ ಇಮ್ರಾನ್ ಹಶ್ಮಿಯಾದ ತುಂಟ ನಟ ಯಾರು ಗೊತ್ತೆ?
ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ಸೀರಿಯಲ್ ಕಿಸ್ಸರ್ ಅಂತಾನೆ ಖ್ಯಾತಿ ಗಳಿಸಿದವರು. ಅವರು ಯಾವ ಸಿನಿಮಾ ಮಾಡಿದ್ರೂ ಅದರಲ್ಲಿ ಕಿಸ್ಸಿಂಗ್ ಸೀನ್ ಗಳಂತೂ ಮಿಸ್ಸೇ ಇರುತ್ತಿರಲಿಲ್ಲ.
ಇಮ್ರಾನ್ ಹಶ್ಮಿಯ ಪ್ರತಿ ಸಿನಿಮಾದಲ್ಲೂ ನಾಯಕಿಯರ ಜೊತೆ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನ ಕೆಲವರು ವಿರೋದಿಸಿದ್ರೇ ಇನ್ನು ಕೆಲ ಹೆಣ್ಣುಮಕ್ಕಳ ಪಾಲಿಗಂತು ಇಮ್ರಾನ್ ಡ್ರೀಮ್ ಬಾಯ್ ಆಗಿದ್ದರು.
ಆದ್ರೀಗ, ಬಾಲಿವುಡ್ ನಲ್ಲಿ ಇಮ್ರಾನ್ ಹಶ್ಮಿ ಹವಾ ಕಮ್ಮಿ ಆಗಿದೆ. ಅಲ್ಲದೆ ಕಿಸ್ಸಿಂಗ್ ದೃಶ್ಯಗಳಿಂದನೂ ಇಮ್ರಾನ್ ದೂರ ಇದ್ದಾರೆ. ಸದ್ಯ ಉತ್ತಮ ಪಾತ್ರಗಳ ಮೂಲಕ ಅಪರೂಪಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ.
ಆದರೆ, ಇಮ್ರಾನ್ ಹಶ್ಮಿ ಜಾಗಕ್ಕೆ ಸೀರಿಯಲ್ ಕಿಸ್ಸರ್ ಆಗಿ ಮತ್ತೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸದ್ಯ ಸಂಚಲನ ಮೂಡಿಸಿರೊ ನಟ ವಿಜಯ್ ದೇವರಕೊಂಡ. ಮುಂದೆ ಓದಿ..

'ಅರ್ಜುನ್ ರೆಡ್ಡಿ'ಯ ಸರಣಿ ಚುಂಬನ
ಬಾಲಿವುಡ್ ನಲ್ಲಿ ಇಮ್ರಾನ್ ಹಶ್ಮಿ ಜಾಗವನ್ನು ಸೌತ್ ನಲ್ಲಿ ವಿಜಯ್ ದೇವರಕೊಂಡ ಪಡೆಯುತ್ತಿದ್ದಾರೆ. ಅದಕ್ಕೆ ಕಾರಣ ವಿಜಯ್ ಸಿನಿಮಾಗಳಲ್ಲಿನ ಲಿಪ್ ಲಾಕ್ ದೃಶ್ಯಗಳು. ವಿಜಯ್ ಅಭಿನಯದ ಸಾಕಷ್ಟು ಚಿತ್ರಗಳಲ್ಲಿ ಲಿಪ್ ಲಾಕ್ ದೃಶ್ಯಗಳೇ ಹೈಲೆಟ್ ಆಗಿವೆ. ಅದರಲ್ಲೂ ಅರ್ಜುನ್ ರೆಡ್ಡಿ ಸಿನಿಮಾದ ಬಗ್ಗೆ ಕೇಳೋದೆ ಬೇಡ. ಈ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯಗಳ ಮೂಲಕವೇ ವಿಜಯ್ ವಿಖ್ಯಾತರಾದರು.

'ಗೀತಾ ಗೋವಿಂದಂ'ನಲ್ಲೂ ಮುಂದುವರೆದ ಲಿಪ್ ಲಾಕ್
ಕಿಸ್ಸಿಂಗ್ ಸ್ಟಾರ್ ಅಂತಾನೆ ಖ್ಯಾತಿಗಳಿಸಿರುವ ವಿಜಯ್ 'ಅರ್ಜುನ್ ರೆಡ್ಡಿ' ನಂತರ 'ಗೀತಾ ಗೋವಿಂದಂ' ಮೂಲಕವು ಮತ್ತೆ ಸುದ್ದಿಯಾದ್ರು. ರಶ್ಮಿಕಾ ಮಂದಣ್ಣ ಜೊತೆ ಲಿಪ್ ಲಾಕ್ ಮಾಡಿ ಸೌತ್ ಸಿನಿ ಇಂಡಸ್ಟ್ರಿಯಲ್ಲೇ ಸಂಚಲನ ಸೃಷ್ಟಿಸಿದ್ದರು. ಇನ್ನೂ 'ಯೇ ಮಂತ್ರಂ ವೇಸೇವ್' ಚಿತ್ರದಲ್ಲೂ ಸಹ ವಿಜಯ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.

'ಡಿಯರ್ ಕಾಮ್ರೇಡ್' ನಲ್ಲೂ ಮುಂದುವರೆದಿದೆ ವಿಜಯ್ ತುಂಟಾಟ
ಇತ್ತೀಚಿಗಷ್ಟೆ 'ಡಿಯರ್ ಕಾಮ್ರೇಡ್' ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಪುಟ್ಟ ಟೀಸರ್ ನ ಹೈಲೆಟ್ಸ್ ಅಂದ್ರೆ ವಿಜಯ್ ಮತ್ತು ರಶ್ಮಿಕಾ ಲಿಪ್ ಲಾಕ್ ದೃಶ್ಯ. 'ಗೀತಾ ಗೋವಿಂದಂ' ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕುವ ಮೂಲಕ ವಿಜಯ್ ಅಭಿಮಾನಿಗಳಿಗೆ ನಿರಾಸೆ ಮೂಡಲಾಗಿತ್ತು. ಆದ್ರೆ, 'ಡಿಯರ್ ಕಾಮ್ರೇಡ್' ಮೂಲಕ ಅಭಿಮಾನಿಗಳ ಆಸೆಯನ್ನು ಪೂರೈಸಿದ್ದಾರೆ ವಿಜಯ್.

ಕಿಸ್ಸಿಂಗ್ ದೃಶ್ಯಗಳ ಸಿನಿಮಾಗಳು ಸೂಪರ್ ಹಿಟ್
ಸದ್ಯ, ಸೌತ್ ಸಿನಿ ಇಂಡಸ್ಟ್ರಿಯ ಸೀರಿಯಲ್ ಕಿಸ್ಸರ್ ಅಂತಾನೆ ಖ್ಯಾತಿ ಗಳಿಸಿರುವ ವಿಜಯ್ ದೇವರಕೊಂಡ ಅವರ ಲಿಪ್ ಲಾಕ್ ದೃಶ್ಯವಿರುವ ಸಿನಿಮಾಗಳು ಸೂಪರ್ ಹಿಟ್ ಆಗಿವೆ. 'ಅರ್ಜುನ್ ರೆಡ್ಡಿ' ಮತ್ತು 'ಗೀತಾ ಗೋವಿಂದಂ' ಚಿತ್ರಗಳು ದಕ್ಷಿಣ ಭಾರತದಲ್ಲಿ ಸದ್ದು ಮಾಡಿದ ಚಿತ್ರಗಳಾಗಿವೆ. ಸದ್ಯ, 'ಡಿಯರ್ ಕಾಮ್ರೇಡ್' ಟೀಸರ್ ಕೂಡ ಹಾಗೆ ಇದೆ. ಪುಟ್ಟ ಟೀಸರ್ ನಲ್ಲಿಯೆ ವಿಜಯ್ ತುಂಟಾಟ ಎದ್ದು ಕಾಣುತ್ತಿದೆ. ಇನ್ನೂ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ


Click it and Unblock the Notifications











