ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾದ ಅನುಷ್ಕಾ ಶೆಟ್ಟಿ
Recommended Video

ನಟಿ ಅನುಷ್ಕಾ ಶೆಟ್ಟಿ ಪ್ರತಿ ಸಿನಿಮಾದಲ್ಲಿಯೂ ಹೊಸ ರೀತಿಯ ಪಾತ್ರಗಳನ್ನು ಮಾಡುತ್ತಾರೆ. ಪ್ರತಿ ಪಾತ್ರದಲ್ಲಿಯೂ ಹೊಸತನ, ವಿಭಿನ್ನತೆ ಇರುತ್ತದೆ. ಅದೇ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅಂದಹಾಗೆ, ಈಗ ಮತ್ತೆ ಅನುಷ್ಕಾ ತೆರೆ ಮೇಲೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ನಟಿ ಅನುಷ್ಕಾ ಈಗ ಮೂಕಿ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ನಟ ಪ್ರಭುದೇವ ನಟನೆಯ ಮೂಕಿ ಸಿನಿಮಾ 'ಮರ್ಕ್ಯೂರಿ' ತೆರೆಕಂಡಿದ್ದು, ಆ ಬಳಿಕ ಮತ್ತೊಂದು ಮೂಕಿ ಚಿತ್ರ ಬರುತ್ತಿದೆ. ಭಾಷೆಯ ಮಿತಿ ಇಲ್ಲದ ಈ ಸಿನಿಮಾ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಗಲಿದೆ. ಹೇಮಂತ್ ಮಧುಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ಅಂದಹಾಗೆ, ಸಪ್ಟೆಂಬರ್ ನಲ್ಲಿ ಈ ಸಿನಿಮಾ ಶುರು ಆಗಲಿದೆ. ನಟ ಮಾಧವನ್ ಚಿತ್ರದಲ್ಲಿ ಅನುಷ್ಕಾ ಜೋಡಿಯಾಗಿ ನಟಿಸುತ್ತಿದ್ದಾರೆ. 'ಭಾಗಮತಿ' ಚಿತ್ರದ ನಂತರ ಅನುಷ್ಕಾ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಅಮೇರಿಕಾದಲ್ಲಿಯೇ ಚಿತ್ರದ ಶೂಟಿಂಗ್ ನಡೆಯಲಿದ್ದು, ಕೆಲ ಹಾಲಿವುಡ್ ಕಲಾವಿದರು ಸಹ ಕಾಣಿಸಿಕೊಳ್ಳಲಿದ್ದಾರಂತೆ.

'ಬಾಹುಬಲಿ' ನಂತರ 'ಭಾಗಮತಿ' ಸಿನಿಮಾ ಮಾಡಿದ್ದ ಅನುಷ್ಕಾ ಮತ್ತೆ ತಮ್ಮ ಪ್ರತಿಭೆಗೆ ಚಾಲೆಂಜ್ ಮಾಡಿಕೊಳ್ಳುವಂತಹ ಪಾತ್ರ ಮಾಡುತ್ತಿದ್ದಾರೆ.


Click it and Unblock the Notifications










