twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾದ ಅನುಷ್ಕಾ ಶೆಟ್ಟಿ

    By Naveen
    |

    Recommended Video

    ಹೊಸ ಅವತಾರವೆತ್ತಿ ಬರಲಿದ್ದಾರೆ ಅನುಷ್ಕಾ ಶೆಟ್ಟಿ..! | Filmibeat Kannada

    ನಟಿ ಅನುಷ್ಕಾ ಶೆಟ್ಟಿ ಪ್ರತಿ ಸಿನಿಮಾದಲ್ಲಿಯೂ ಹೊಸ ರೀತಿಯ ಪಾತ್ರಗಳನ್ನು ಮಾಡುತ್ತಾರೆ. ಪ್ರತಿ ಪಾತ್ರದಲ್ಲಿಯೂ ಹೊಸತನ, ವಿಭಿನ್ನತೆ ಇರುತ್ತದೆ. ಅದೇ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅಂದಹಾಗೆ, ಈಗ ಮತ್ತೆ ಅನುಷ್ಕಾ ತೆರೆ ಮೇಲೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

    ನಟಿ ಅನುಷ್ಕಾ ಈಗ ಮೂಕಿ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ನಟ ಪ್ರಭುದೇವ ನಟನೆಯ ಮೂಕಿ ಸಿನಿಮಾ 'ಮರ್ಕ್ಯೂರಿ' ತೆರೆಕಂಡಿದ್ದು, ಆ ಬಳಿಕ ಮತ್ತೊಂದು ಮೂಕಿ ಚಿತ್ರ ಬರುತ್ತಿದೆ. ಭಾಷೆಯ ಮಿತಿ ಇಲ್ಲದ ಈ ಸಿನಿಮಾ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಗಲಿದೆ. ಹೇಮಂತ್ ಮಧುಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ.

    ಅನುಷ್ಕಾ-ಪ್ರಭಾಸ್ ಇಬ್ಬರ ಪ್ರೀತಿ ನಿಜ.! ಮದುವೆಗೆ ವಿಲನ್ ಯಾರು.? ಅನುಷ್ಕಾ-ಪ್ರಭಾಸ್ ಇಬ್ಬರ ಪ್ರೀತಿ ನಿಜ.! ಮದುವೆಗೆ ವಿಲನ್ ಯಾರು.?

    ಅಂದಹಾಗೆ, ಸಪ್ಟೆಂಬರ್ ನಲ್ಲಿ ಈ ಸಿನಿಮಾ ಶುರು ಆಗಲಿದೆ. ನಟ ಮಾಧವನ್ ಚಿತ್ರದಲ್ಲಿ ಅನು‍ಷ್ಕಾ ಜೋಡಿಯಾಗಿ ನಟಿಸುತ್ತಿದ್ದಾರೆ. 'ಭಾಗಮತಿ' ಚಿತ್ರದ ನಂತರ ಅನುಷ್ಕಾ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಅಮೇರಿಕಾದಲ್ಲಿಯೇ ಚಿತ್ರದ ಶೂಟಿಂಗ್ ನಡೆಯಲಿದ್ದು, ಕೆಲ ಹಾಲಿವುಡ್ ಕಲಾವಿದರು ಸಹ ಕಾಣಿಸಿಕೊಳ್ಳಲಿದ್ದಾರಂತೆ.

    tollywood actress anushka shetty doing a silent film

    'ಬಾಹುಬಲಿ' ನಂತರ 'ಭಾಗಮತಿ' ಸಿನಿಮಾ ಮಾಡಿದ್ದ ಅನುಷ್ಕಾ ಮತ್ತೆ ತಮ್ಮ ಪ್ರತಿಭೆಗೆ ಚಾಲೆಂಜ್ ಮಾಡಿಕೊಳ್ಳುವಂತಹ ಪಾತ್ರ ಮಾಡುತ್ತಿದ್ದಾರೆ.

    English summary
    tollywood actress anushka shetty doing a silent film
    Friday, June 8, 2018, 11:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X