For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಜೊತೆ ಹೆಜ್ಜೆ ಹಾಕಲು ಬಂದ ಟಾಲಿವುಡ್ ಬೆಡಗಿ

  By Pavithra
  |
  KGF Kannada movie : ಯಶ್ ಜೊತೆ ಸ್ಟಪ್ಸ್ ಹಾಕೋಕೆ ಬರ್ತಿರೋದು ಯಾರು..? | Filmibeat Kannada

  ರಾಕಿಂಗ್ ಸ್ಟಾರ್ ಅಭಿನಯದ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಕೆ ಜಿ ಎಫ್'. ಚಿತ್ರೀಕರಣ ಕಂಪ್ಲಿಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಿರುವ ಕೆಜಿಎಫ್ ಚಿತ್ರತಂಡ ಸಿನಿಮಾದ ಹಾಡೊಂದನ್ನು ಬಾಕಿ ಉಳಿಸಿಕೊಂಡಿದೆಯಂತೆ. ಚಿತ್ರದ ಈ ಹಾಡು ರೆಟ್ರೋ ಸ್ಟೈಲ್ ನಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮಾಡಲು ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.

  ವಿಶೇಷ ಎಂದರೆ 'ಕೆ ಜಿ ಎಫ್' ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ರಾಕಿಂಗ್ ಸ್ಟಾರ್ ಜೊತೆ ಹೆಜ್ಜೆ ಹಾಕಲು ಟಾಲಿವುಡ್ ನ ನಾಯಕಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರಂತೆ. ಚಿತ್ರತಂಡ ಈಗಾಗಲೇ ಸಾಕಷ್ಟು ನಾಯಕಿಯರ ಜೊತೆ ಮಾತನಾಡಿದ್ದು ತಮ್ಮನ್ನಾ, ಕಾಜಲ್ ಅಗರ್ ವಾಲ್, ನೋರಾ ಫತಿಹಿ ಮತ್ತು ರೈ ಲಕ್ಷ್ಮಿ ಈ ನಾಯಕಿಯರಲ್ಲಿ ಯಾರಾದರೂ ಯಶ್ ಜೊತೆ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  ಕೊನೆಗೂ ಕೂಡಿಬಂತು 'ಕೆ ಜಿ ಎಫ್' ಟ್ರೇಲರ್ ನೋಡುವ ಕಾಲ ಕೊನೆಗೂ ಕೂಡಿಬಂತು 'ಕೆ ಜಿ ಎಫ್' ಟ್ರೇಲರ್ ನೋಡುವ ಕಾಲ

  ಇದೇ ತಿಂಗಳ 7 ರಂದು ಚಿತ್ರತಂಡ ಯಾವ ನಾಯಕಿಯನ್ನ ಸ್ಪೆಷಲ್ ಹಾಡಿಗಾಗಿ ಕರೆತರಲಿದೆ ಎನ್ನುವುದನ್ನು ಕನ್ಫರ್ಮ್ ಮಾಡಲಿದೆ. 'ಕೆ ಜಿ ಎಫ್' ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಭೂವನ್ ಗೌಡ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

  Tollywood actress is appearing in the Kannada KGF special song.

  ಒಟ್ಟಾರೆ ಸಾಕಷ್ಟು ವಿಚಾರಗಳಿಂದ ಸುದ್ದಿ ಮಾಡಿರುವ 'ಕೆ ಜಿ ಎಫ್' ಸಿನಿಮಾ ಟ್ರೇಲರ್ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಆಗಲಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ರೀತಿಯ ಮಾಹಿತ ಮಾತ್ರ ಹೊರ ಬಂದಿಲ್ಲ.

  English summary
  Tollywood actress is appearing in the Kannada KGF special song. According to sources, tamannah bhatia, Kajal Agarwal, Noora Fathihi and Rai Lakshmi anyone are to do dancing with yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X