ರಾಜಮೌಳಿ ಮುಂದಿನ ಸಿನಿಮಾದ ನಾಯಕಿ ಇವರೇ ಅಂತೆ

By Naveen

Recommended Video

ಬಾಹುಬಲಿ ಬಳಿಕ ರಾಜಮೌಳಿ ಮಲ್ಟಿ ಸ್ಟಾರರ್ ಸಿನಿಮಾ | Filmibeat Kannada

ನಿರ್ದೇಶಕ ರಾಜಮೌಳಿ 'ಬಾಹುಬಲಿ' ಸಿನಿಮಾದ ದಿಗ್ವಿಜಯದ ನಂತರ ಈಗ ಮತ್ತೆ ಬಂದಿದ್ದಾರೆ. ರಾಜಮೌಳಿ ಮುಂದೆ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ದೊಡ್ಡ ನಿರೀಕ್ಷೆಗೆ ಅವರೇ ಉತ್ತರ ನೀಡಿದ್ದಾರೆ. ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ ಜೊತೆಗೆ ರಾಜಮೌಳಿ ಹೊಸ ಸಿನಿಮಾ ಶುರು ಮಾಡಿದ್ದಾರೆ. ಸದ್ಯ, 'RRR' ಹೆಸರಿನಲ್ಲಿ ಮೋಷನ್ ಪೊಸ್ಟರ್ ರಿಲೀಸ್ ಆಗಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಇನ್ನು ಇದೀಗ ಈ ಸಿನಿಮಾದ ನಾಯಕಿಯ ಬಗ್ಗೆ ದೊಡ್ಡ ಚರ್ಚೆಗಳು ಶುರುವಾಗಿದೆ. ರಾಜಮೌಳಿ ತಮ್ಮ ಹೊಸ ಸಿನಿಮಾಗೆ ನಾಯಕಿಯಾಗಿ ನಟಿ ರಾಶಿ ಖನ್ನಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹೆಚ್ಚಾಗಿದೆ. ಆದರೆ ರಾಜಮೌಳಿ ಸದ್ಯಕ್ಕೆ ತಮ್ಮ ಸಿನಿಮಾದ ನಾಯಕಿಯ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಂದಹಾಗೆ, ರಾಶಿ ಖನ್ನಾ ಈಗಾಗಲೇ ಟಾಲಿವುಡ್ ನಲ್ಲಿ ಅನೇಕ ಸಿನಿಮಾ ಮಾಡಿದ್ದಾರೆ. 'ಬೆಂಗಾಲ್ ಟೈಗರ್' ಸಿನಿಮಾದಲ್ಲಿ ರವಿತೇಜ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. 'ಬಾಹುಬಲಿ' ನಂತರ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ರಾಜಮೌಳಿ ಚಿತ್ರಕ್ಕೆ ರಾಶಿ ಖನ್ನಾಗೆ ಅವಕಾಶ ಸಿಕ್ಕರೆ ರಾಶಿಗೆ ಅದೃಷ್ಟ ಖುಲಾಯಿಸಿದ ಹಾಗೆ.

Tollywood actress Rashi Khanna in Rajamoulis next movie?

ಅಂದ್ಹಾಗೆ, RRR ಅಂದ್ರೆ ಇದು ಚಿತ್ರದ ಟೈಟಲ್ ಅಲ್ಲ ಮೂವರು ಒಟ್ಟಿಗೆ ಸಿನಿಮಾ ಮಾಡ್ತಿರೋದಕ್ಕೆ ಚಾಲನೆ ಎಂದು ರಾಜಮೌಳಿ ತಿಳಿಸಿದ್ದಾರೆ. ರಾಮ್ ಚರಣ್ ತೇಜ, ಜೂನಿಯರ್ ಎನ್.ಟಿ.ಆರ್ ಮತ್ತು ರಾಜಮೌಳಿ.....ಈ ಮೂವರ ಹೆಸರಿನಲ್ಲಿ R ಇದ್ದು, ಹೀಗಾಗಿ 'RRR' ಎಂದು ಬ್ರ್ಯಾಂಡ್ ಮಾಡಲಾಗಿದೆ ಅಷ್ಟೇ. ಈ ಹಿಂದೆ ಈ ಇಬ್ಬರ ನಟರ ಜೊತೆಯಲ್ಲಿ ರಾಜಮೌಳಿ ಸಿನಿಮಾ ಮಾಡಿದ್ದಾರೆ. ರಾಮ್ ಚರಣ್ ಜೊತೆಯಲ್ಲಿ 'ಮಗಧೀರ' ಸಿನಿಮಾ ಮಾಡಿದ್ದ ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಜೊತೆಯಲ್ಲಿ 'ಸ್ಟೂಡೆಂಟ್ ನಂ-1' ಅಂತಹ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿದ್ದರು. ಇದೀಗ, ಇಬ್ಬರು ಸ್ಟಾರ್ ನಟರ ಜೊತೆ ಸಕ್ಸಸ್ ಫುಲ್ ನಿರ್ದೇಶಕ ಒಟ್ಟಿಗೆ ಸೇರಿದ್ದಾರೆ.

ಸದ್ಯ, ಈ ಚಿತ್ರದ ಕಥೆ, ಟೈಟಲ್ ಹಾಗೂ ಯಾವಾಗ ಆರಂಭ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಡಿವಿವಿ ಎಂಟರ್ ಪ್ರೈಸಸ್ ಅಡಿಯಲ್ಲಿ ಈ ಚಿತ್ರ ಪ್ರಾರಂಭವಾಗುತ್ತಿರುವುದು ಖಚಿತವಾಗಿದೆ.

More from Filmibeat

English summary
Tollywood actress Rashi Khanna in Rajamouli's next movie?. SS Rajamouli confirmed his next film will feature two of the biggest stars of the Telugu film industry, Jr NTR and Ram Charan Teja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X