ಟಾಲಿವುಡ್ ನಿರ್ದೇಶಕಿ ಬಿ.ಜಯಾ ಇನ್ನಿಲ್ಲ
Recommended Video

ಬಿ.ಜಯ ಇನ್ನು ನೆನಪು ಮಾತ್ರ..! | Filmibeat Kannada
ಟಾಲಿವುಡ್ ನ ಪ್ರಖ್ಯಾತ ನಿರ್ದೇಶಕಿ ಬಿ.ಜಯಾ (54) ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ಗುರುವಾರ ರಾತ್ರಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಬಿ.ಜಯಾ ಕೊನೆಯುಸಿರೆಳೆದಿದ್ದಾರೆ.
ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಮಾಡಿ, ತೆಲುಗು ದಿನಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ವೃತ್ತಿ ಜೀವನ ಆರಂಭಿಸಿದ ಬಿ.ಜಯಾ ಅವರಿಗೆ ತೆಲುಗು ಚಿತ್ರರಂಗ ಕೈಬೀಸಿ ಕರೆಯಿತು.
2003 ರಲ್ಲಿ 'ಚಂಟಿಗಾಡು' ಚಿತ್ರದ ಮೂಲಕ ನಿರ್ದೇಶಕಿ ಆದ ಬಿ.ಜಯಾ 'ಪ್ರೇಮಿಕುಲು', 'ಗುಂಡಮ್ಮ ಗಾರಿ ಮನವಾಡು', 'ಸಾವಲ್', 'ಲವ್ಲಿ', 'ವೈಶಾಕಂ' ಮುಂತಾದ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಬಿ.ಜಯಾ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು. ಪತಿ ಬಿ.ಎ.ರಾಜು ರನ್ನ ಬಿ.ಜಯಾ ಅಗಲಿದ್ದಾರೆ. ಬಿ.ಜಯಾ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.
English summary
Tollywood Director B Jaya passes away.


Click it and Unblock the Notifications