For Quick Alerts
  ALLOW NOTIFICATIONS  
  For Daily Alerts

  'RRR' ಸಿನಿಮಾದ ಚಿತ್ರೀಕರಣ ಬಿಟ್ಟು ಕರ್ನಾಟಕಕ್ಕೆ ಬಂದ ನಿರ್ದೇಶಕ ರಾಜಮೌಳಿ

  |

  ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಕರ್ನಾಟಕದಲ್ಲಿ ಪ್ರತ್ಯಕ್ಷರಾಗಿದ್ದಾರೆ. 'ಆರ್ ಆರ್ ಆರ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಾಜಮೌಳಿ ದಿಢೀರ್ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

  ಹೌದು, ಖ್ಯಾತ ನಿರ್ದೇಶಕ ರಾಜಮೌಳಿ ಇಂದು (ಸೆಪ್ಟಂಬರ್ 16) ಬೆಳಿಗ್ಗೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ರಾಜಮೌಳಿಯನ್ನು ನೋಡಿ ಪ್ರವಾಸಿಗರು ಅಚ್ಚರಿಯ ಜೊತೆಗೆ ಸಂತಸ ಪಟ್ಟಿದ್ದಾರೆ. ರಾಜಮೌಳಿಗೆ ಪತ್ನಿ ರಮಾ ರಾಜಮೌಳಿ ಸಾಥ್ ನೀಡಿದ್ದಾರೆ. ಬೆಟ್ಟಕ್ಕೆ ಭೇಟಿ ನೀಡಿದ ರಾಜಮೌಳಿ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಂದೆ ಓದಿ...

  ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾಕ್ಕೆ ಎದುರಾದ ವಿಘ್ನ?ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾಕ್ಕೆ ಎದುರಾದ ವಿಘ್ನ?

  ಪ್ರಕೃತಿ ಸೌಂದರ್ಯಕ್ಕೆ ಮನಸೋತ ರಾಜಮೌಳಿ ದಂಪತಿ

  ಪ್ರಕೃತಿ ಸೌಂದರ್ಯಕ್ಕೆ ಮನಸೋತ ರಾಜಮೌಳಿ ದಂಪತಿ

  ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಕೃತಿ ಸೌಂದರ್ಯಕ್ಕೆ ರಾಜಮೌಳಿ ದಂಪತಿ ಮನಸೋತಿದ್ದಾರೆ. ನಂತರ ಅಲ್ಲಿಂದ ರಾಜಮೌಳಿ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರಕ್ಕೂ ಭೇಟಿ ನೀಡಿದ್ದಾರೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೋಗಿದ್ದಾರೆ. ಪ್ರವಾಸವನ್ನು ಸಖತ್ ಎಂಜಾಯ್ ಮಾಡಿದ್ದಾರೆ.

  ಅರಣ್ಯ ಸಿಬ್ಬಂದಿ ಜೊತೆ ರಾಜಜೌಳಿ ಮಾತುಕತೆ

  ಅರಣ್ಯ ಸಿಬ್ಬಂದಿ ಜೊತೆ ರಾಜಜೌಳಿ ಮಾತುಕತೆ

  ರಾಜಮೌಳಿಯನ್ನು ನೋಡಿ ಅರಣ್ಯ ಸಿಬ್ಬಂದಿ ಸಹ ಸಂತಸಗೊಂಡಿದ್ದಾರೆ. ಸಫಾರಿ ಬಳಿಕ ಬಂಡೀಪುರ ಅರಣ್ಯ ಪ್ರದೇಶದ ಸಿಬ್ಬಂದಿಯೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಅರಣ್ಯ ಸಿಬ್ಬಂದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಅಲ್ಲಿಂದ ಹೈದರಾಬಾದ್ ಗೆ ವಾಪಸ್ ಆಗಿದ್ದಾರೆ.

  ಬಾಹುಬಲಿ 'ಮೀರಿಸಲಿರುವ' ಪ್ರಭಾಸ್ ಸಿನಿಮಾ ಬಗ್ಗೆ ರಾಜಮೌಳಿ ಕಮೆಂಟ್ಸ್ಬಾಹುಬಲಿ 'ಮೀರಿಸಲಿರುವ' ಪ್ರಭಾಸ್ ಸಿನಿಮಾ ಬಗ್ಗೆ ರಾಜಮೌಳಿ ಕಮೆಂಟ್ಸ್

  ಅರಣ್ಯ ಸಿಬ್ಬಂದಿ ಜೊತೆ ರಾಜಮೌಳಿ

  ಅರಣ್ಯ ಸಿಬ್ಬಂದಿ ಜೊತೆ ರಾಜಮೌಳಿ

  ಈ ಹಿಂದೆ ಅಂದರೆ ಕಳೆದ ತಿಂಗಳು ರಾಜಮೌಳಿ ಕುಟುಂಬ ಕೊರೊನಾ ವೈರಸ್ ಗೆ ತುತ್ತಾಗಿತ್ತು. ಈ ಬಗ್ಗೆ ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಸುಮಾರು 15 ದಿನಗಳಿಗೂ ಹೆಚ್ಚು ಸಮಯ ಹೋಮ್ ಕ್ವಾರಂಟೈನ್ ನಲ್ಲಿದ್ದ ಇಡೀ ರಾಜಮೌಳಿ ಕುಟುಂಬ ಸದ್ಯ ಸಂಪೂರ್ಣವಾಗಿ ಗುಣವಾಗಿದೆ.

  TRP ಗೋಸ್ಕರ ನನ್ನ ಕುಟುಂಬದ ನೆಮ್ಮದಿ ಹಾಳು ಮಾಡಿದ್ದು ಇಷ್ಟ ಆಗಿಲ್ಲ| Raksh | Filmibeat Kannada
  ಆರ್ ಆರ್ ಆರ್ ಸಿನಿಮಾ ಚಿತ್ರೀಕರಣದಲ್ಲಿ ರಾಜಮೌಳಿ

  ಆರ್ ಆರ್ ಆರ್ ಸಿನಿಮಾ ಚಿತ್ರೀಕರಣದಲ್ಲಿ ರಾಜಮೌಳಿ

  ರಾಜಮೌಳಿ ಸದ್ಯ ‘ಆರ್‍ಆರ್‍ಆರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೂ.ಎನ್‍ಟಿಆರ್ ಮತ್ತು ರಾಮ್ ಚರಣ್ ನಾಯಕತ್ವದಲ್ಲಿ ಮೂಡಿ ಬರಲಿರುವ ಸಿನಿಮಾ ಇದಾಗಿದ್ದು, ಸದ್ಯ ಕೊರೊನಾ ಹಾವಳಿ ಪರಿಣಾಮ ಚಿತ್ರೀಕರಣ ಸ್ಥಗಿತಗೊಂಡಿದೆ. ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿನಿಮಾತಂಡ ಸಿದ್ಧವಾಗುತ್ತಿದೆ. ಆರ್ ಆರ್ ಆರ್ ಸಿನಿಮಾ ಬಳಿಕ ರಾಜಮೌಳಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ನಿರ್ದೇಶನ ಮಾಡಲಿದ್ದಾರೆ.

  English summary
  Tollywood Director Rajamouli Visits Himavad Gopalaswamy Hills with Wife Rama.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X