For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಮಗಳ ರಿಸೆಪ್ಷನ್ ನಲ್ಲಿ 'ಬಾಹುಬಲಿ' ರಾಜಮೌಳಿ

  By Harshitha
  |

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪುತ್ರಿ ಡಾ.ನಿರುಪಮ ಅವರ ಮದುವೆ ನಿನ್ನೆ (ಆಗಸ್ಟ್ 31) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು.

  ನವ ವಧು ಡಾ.ನಿರುಪಮ, ವರ ಡಾ.ದಿಲೀಪ್ ಅವರಿಗೆ ಶುಭ ಕೋರುವುದಕ್ಕೆ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಅದ್ರಲ್ಲಿ, ಎಲ್ಲರಿಗೂ ಸ್ಪೆಷಲ್ ಆಗಿ ಕಂಡಿದ್ದು ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ. [ಸಪ್ತಪದಿ ತುಳಿದ ಶಿವರಾಜ್ ಕುಮಾರ್ ಪುತ್ರಿ ನಿರುಪಮ]

  'ಮಗಧೀರ', 'ಬಾಹುಬಲಿ'ಯಂತಹ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ, ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರ ಮಗಳ ಮದುವೆಗೆ ಶುಭ ಕೋರುವುದಕ್ಕೆ ಬೆಂಗಳೂರಿಗೆ ಬಂದರು.[ದೊಡ್ಮನೆ ಮದುವೆ ಸಂಭ್ರಮದ ಚಿತ್ರಗಳು]

  ನಿನ್ನೆ ಮಧ್ಯಾಹ್ನವೇ ಬೆಂಗಳೂರಿಗೆ ಆಗಮಿಸಿದ ನಿರ್ದೇಶಕ ಎಸ್.ಎಸ್.ರಾಜಮೌಳಿ ಸೀದಾ ಪುನೀತ್ ರಾಜ್ ಕುಮಾರ್ ಅವರ ಮನೆಗೆ ತೆರಳಿದರು. [ಶಿವಣ್ಣ ಮಗಳ ಮದುವೆಯ 'ರಾಜ' ವೈಭೋಗ]

  ಅಲ್ಲಿ ಕೆಲ ಕಾಲ ಪುನೀತ್ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಕುಟುಂಬದೊಂದಿಗೆ ಎಸ್.ಎಸ್.ರಾಜಮೌಳಿ ಹರಟಿದರು. ಎಸ್.ಎಸ್.ರಾಜಮೌಳಿ ಅವರಿಗೆ ಪುನೀತ್ ರಾಜ್ ಕುಮಾರ್ ತಾವು ಬರೆದಿರುವ 'Dr.Rajkumar: The Person Behind the Personality' ಪುಸ್ತಕವನ್ನ ಉಡುಗೊರೆಯಾಗಿ ನೀಡಿದರು. [ಚಿತ್ರಗಳು: ಶಿವಣ್ಣನ ಮಗಳ ಆರತಕ್ಷತೆಯಲ್ಲಿ ಗಣ್ಯಾತಿಗಣ್ಯರ ದಂಡು ]

  ನಂತರ ಸಂಜೆ ಆರತಕ್ಷತೆಗೆ ಆಗಮಿಸಿ ಡಾ.ನಿರುಪಮ ಮತ್ತು ಡಾ.ದಿಲೀಪ್ ಅವರಿಗೆ ಆಶೀರ್ವಾದ ಮಾಡಿದರು. ರಿಸೆಪ್ಷನ್ ಗೆ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಆಗಮಿಸಿದ್ದು ಕೂಡ ವಿಶೇಷವಾಗಿತ್ತು.

  English summary
  Kannada Actor Shivarajkumar Daughter Dr.Nirupama has tied knot with Dr.Dileep yesterday (August 31st) in Palace Grounds, Bengaluru. Tollywood Director S.S.Rajamouli was in Bengaluru yesterday to wish the newly wedded couple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X