»   » ಟಾಲಿವುಡ್ ಡ್ರಗ್ಸ್ ಮಾಫಿಯಾ: ಕಾಜಲ್ ಮ್ಯಾನೇಜರ್ ಅರೆಸ್ಟ್

ಟಾಲಿವುಡ್ ಡ್ರಗ್ಸ್ ಮಾಫಿಯಾ: ಕಾಜಲ್ ಮ್ಯಾನೇಜರ್ ಅರೆಸ್ಟ್

Posted By:
Subscribe to Filmibeat Kannada

ದೇಶಾದ್ಯಂತ ತ್ರೀವ ಸಂಚಲನ ಹುಟ್ಟುಹಾಕಿರುವ 'ಟಾಲಿವುಡ್ ಡ್ರಗ್ಸ್ ಮಾಫಿಯಾ' ಪ್ರಕರಣದಲ್ಲಿ ನಟಿ ಕಾಜಲ್ ಅಗರ್ ವಾಲ್ ಅವರ ಮ್ಯಾನೇಜರ್ ಬಂಧನವಾಗಿದ್ದಾರೆ.

ತೆಲುಗು ಸಿನಿಲೋಕದ ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ 15 ಜನ ಸೆಲೆಬ್ರಿಟಿಗಳಿಗೆ ನೋಟಿಸ್ ನೀಡಿದ್ದು, ಸುಮಾರು 19 ಜನರನ್ನ ಬಂಧಿಸಲಾಗಿದೆಯಂತೆ. ಈಗ ಕಾಜಲ್ ಮ್ಯಾನೇಜರ್ ಅರೆಸ್ಟ್ ರಾನ್ಸನ್ ಜೊಸೆಫ್ (ರೋನಿ) ಆಗಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಡ್ರಗ್ಸ್ ಮಾಫಿಯಾ ವಿಚಾರಣೆಗೆ ಮುಂಚೆಯೇ ಹೈ ಕೋರ್ಟ್ ಮೆಟ್ಟಿಲೇರಿದೆ ನಟಿ ಚಾರ್ಮಿ

Tollywood Drug bust: Kajal Agarwal's Manager Arrested

38 ವರ್ಷದ ರಾನ್ಸನ್ ಜೊಸೆಫ್ (ರೋನಿ) ವಾಸವಿರುವ ಮನಿಕೊಂಡದ ಪ್ರೈಡ್ ಅಪಾರ್ಟ್ ಮೆಂಟ್ ನಲ್ಲಿ ಗಾಂಜಾ ಪತ್ತೆಯಾಗಿದೆ. ರಾನ್ಸನ್ ಜೊಸೆಫ್ ವಾಸವಾಗಿದ್ದ ಮನೆಯಲ್ಲಿ 4 ಗ್ರಾಂ ಗಾಂಜಾ ಸಿಕ್ಕಿದೆ ಎನ್ನಲಾಗಿದೆ.

ಇದುವರೆಗೂ ವಿಚಾರಣೆಗೆ ಒಳಪಡಿಸಿರುವವರ ಮಾಹಿತಿ ಆಧರಿಸಿ ಎಸ್.ಐ.ಟಿ ಅಧಿಕಾರಿಗಳು ಕಾಜಲ್ ಮ್ಯಾನೇಜರ್ ಜೋಸೆಫ್ ಅವರನ್ನ ಬಂಧಿಸಿದ್ದಾರೆ ಎನ್ನಲಾಗಿದೆ. ಇನ್ನು ಹಲವು ವ್ಯಕ್ತಿಗಳ ಮೇಲೆ ಪೊಲೀಸರು ದೃಷ್ಟಿ ಹಾಯಿಸಿದ್ದು ಮತ್ತಷ್ಟು ತೆಲುಗು ಸಿನಿತಾರೆಯರ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಡ್ರಗ್ಸ್ ಮಾಫಿಯಾ ಪ್ರಕರಣ: 'ಬಿಗ್ ಬಾಸ್' ನಿಂದ ಹೊರಕ್ಕೆ ಮುಮೈತ್ ಖಾನ್?

ಈ ರಾನ್ಸನ್ ಜೊಸೆಫ್ ಈ ಹಿಂದೆ ನಟಿ ರಾಶಿ ಖನ್ನಾ, ಲಾವಣ್ಯ ತ್ರಿಪಾಠಿ ಅವರಿಗೂ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.

English summary
Tollywood Drug bust: Kajal Agarwal's manager arrested, actor Navdeep grilled for 11 hours
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada